ಒತ್ತಡರಹಿತ ಜೀವನದಿಂದ ಹೃದಯದ ಆರೋಗ್ಯ ರಕ್ಷಣೆ

KannadaprabhaNewsNetwork |  
Published : Jul 18, 2025, 12:52 AM IST
ಆಲೂರು ಪಟ್ಟಣದ ಮಿನಿ ವಿಧಾನಸೌಧ ಮುಂಭಾಗದಲ್ಲಿ  ನಡೆದ ವಾಕಥಾನ್-2025 ಕಾಲ್ನಡಿಗೆ ಜಾಥಾ ಕಾರ್ಯಕ್ರಮ. | Kannada Prabha

ಸಾರಾಂಶ

ಮಾರಣಾಂತಿಕ ಕಾಯಿಲೆಗಳಾದ ಹೃದಯಾಘಾತ ತಡೆಯಲು ಸಾರ್ವಜನಿಕರಲ್ಲಿ ಅರಿವುಮ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ನಡೆಯುತ್ತಿದೆ. ಜನರು ದೈಹಿಕವಾಗಿ ಸದೃಢರಾಗಬೇಕು, ಎಣ್ಣೆ ರಹಿತ ಆಹಾರವನ್ನ ಸೇವಿಸಬೇಕು, ಮದ್ಯಪಾನ ತ್ಯಜಿಸಬೇಕು, ಮಾದಕ ವಸ್ತುಗಳಾದ ಡ್ರಗ್ಸ್ ಸೇವನೆಯನ್ನು ತ್ಯಜಿಸಬೇಕು. ಎಲ್ಲವನ್ನು ನಾವು ಮೈಗೂಡಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ. ಮಾಧ್ಯಮ ಮಿತ್ರರಲ್ಲಿ ಒಂದು ಮನವಿ ಪ್ರತಿ ಹಳ್ಳಿಗೂ, ಪ್ರತಿಮನೆಗೂ, ಈ ಸಂದೇಶ ತಲುಪುವಂತೆ ಮಾಡಬೇಕು ಜನರಿಗೂ ಈ ಬಗ್ಗೆ ಅರಿವು ಮೂಡಿಸಲು ಎಲ್ಲರೂ ಸಹಕರಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಜನರು ತಮ್ಮ ದೈನಂದಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡು ಒತ್ತಡ ರಹಿತವಾದ ಜೀವನವನ್ನು ರೂಪಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ತಹಸೀಲ್ದಾರ್‌ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಪಟ್ಟಣದ ಮಿನಿ ವಿಧಾನಸೌಧ ಮುಂಭಾಗದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ತಾಲೋಕು ಆರೋಗ್ಯಧಿಕಾರಿಗಳ ಕಚೇರಿ ಆಲೂರು ಮತ್ತು ವಿವಿಧ ಇಲಾಖೆಗಳು ಮತ್ತು ವಿವಿಧ ಪ್ರಗತಿ ಪರ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ " ಹೃದಯಕ್ಕೆ ಹೆಜ್ಜೆ ಹಾಕೋಣ ಆರೋಗ್ಯವನ್ನು ಗೆಲ್ಲೋಣ " ಶೀರ್ಷಿಕೆಯಡಿ ವಾಕಥಾನ್-2025 ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮಾರಣಾಂತಿಕ ಕಾಯಿಲೆಗಳಾದ ಹೃದಯಾಘಾತ ತಡೆಯಲು ಸಾರ್ವಜನಿಕರಲ್ಲಿ ಅರಿವುಮ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ನಡೆಯುತ್ತಿದೆ. ಜನರು ದೈಹಿಕವಾಗಿ ಸದೃಢರಾಗಬೇಕು, ಎಣ್ಣೆ ರಹಿತ ಆಹಾರವನ್ನ ಸೇವಿಸಬೇಕು, ಮದ್ಯಪಾನ ತ್ಯಜಿಸಬೇಕು, ಮಾದಕ ವಸ್ತುಗಳಾದ ಡ್ರಗ್ಸ್ ಸೇವನೆಯನ್ನು ತ್ಯಜಿಸಬೇಕು. ಎಲ್ಲವನ್ನು ನಾವು ಮೈಗೂಡಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ. ಮಾಧ್ಯಮ ಮಿತ್ರರಲ್ಲಿ ಒಂದು ಮನವಿ ಪ್ರತಿ ಹಳ್ಳಿಗೂ, ಪ್ರತಿಮನೆಗೂ, ಈ ಸಂದೇಶ ತಲುಪುವಂತೆ ಮಾಡಬೇಕು ಜನರಿಗೂ ಈ ಬಗ್ಗೆ ಅರಿವು ಮೂಡಿಸಲು ಎಲ್ಲರೂ ಸಹಕರಿಸಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮ ಮಾತನಾಡಿ, ಇತ್ತೀಚೆಗೆ 20-30 ವರ್ಷದ ಕಡಿಮೆ ವಯಸ್ಸಿನ ಯುವಕರಲ್ಲಿ ಹೃದಯಾಘಾತವಾಗುತ್ತಿದೆ. ಕಾರಣ ಕೊಬ್ಬಿನಾಂಶ ಪದಾರ್ಥಗಳನ್ನು ಸೇವಿಸದೇ ಶಾಖ ಆಹಾರವನ್ನು ಸೇವಿಸಬೇಕು. ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ಆಹಾರ ಮಳಿಗೆ(ಫುಡ್ ಕೋರ್ಟ್)ಗಳಲ್ಲಿ ದೊರಕುವ ಆಹಾರ ಬಹುತೇಕ ರಾಸಾಯನಿಕ ಮಿಶ್ರಿತದಿಂದ ಕೂಡಿರುತ್ತದೆ. ಮನೆಯಲ್ಲಿ ತಯಾರಿಸುವ ಆಹಾರವನ್ನು ಬಳಸಬೇಕು. ಪ್ರತಿ ನಿತ್ಯ ಕನಿಷ್ಠ 30 ನಿಮಿಷಗಳ ಕಾಲ ಯೋಗ, ವ್ಯಾಯಾಮ ಮತ್ತು ಕನಿಷ್ಠ 8 ಗಂಟೆ ನಿದ್ರೆ ಮಾಡಬೇಕು. ಉತ್ತಮ ಆಹಾರ, ಉತ್ತಮ ನಿದ್ದೆ, ಉತ್ತಮ ಆಲೋಚನೆ, ವಿಶ್ರಾಂತಿ ಇವುಗಳು ಉತ್ತಮ ಆರೋಗ್ಯದ ಮತ್ತು ಹೃದಯದ ಆರೋಗ್ಯದ ಗುಟ್ಟಾಗಿದ್ದು, ಈ ಬಗ್ಗೆ ಪೋಷಕರು ತಮ್ಮ ಮಕ್ಕಳಲ್ಲಿ ಜಾಗ್ರತೆ ಮೂಡಿಸಬೇಕು. ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಬೇಕು. ಒಳ್ಳೆಯ ಆಹಾರ ಸೇವನೆ ಮತ್ತು ಉತ್ತಮ ನಿದ್ರೆ ಮಾಡುವುದರಿಂದ ಹೃದಯಾಘಾತ ತಡೆಯಲು ಸಾಧ್ಯ " ಹೃದಯವನ್ನು ರಕ್ಷಿಸಿ ಜೀವನವನ್ನು ಆನಂದಿಸಬೇಕು " ಎಂದರು. ಮಿನಿ ವಿಧಾನಸೌಧ ಆವರಣದಿಂದ ವೀರಶೈವ ಕಲ್ಯಾಣ ಮಂಪಟದವರೆಗೆ ಕಾಲ್ನಡಿಗೆಯಲ್ಲಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಪಟ್ಟಣದ ಸಂತೆ ಮೈದಾನದಲ್ಲಿ, ಬಸ್ ನಿಲ್ದಾಣದಲ್ಲಿ, ಹೃದಯಾಘಾತ ತಡೆಗಟ್ಟುವ ಕುರಿತು ಬಿತ್ತಿಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸುಬ್ರಹ್ಮಣ್ಯಶರ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ, ಸಿಡಿಪಿಒ ಎಟಿ ಮಲ್ಲೇಶ್, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಡಾ. ಗಿರೀಶ್ ಬಸಪ್ಪ, ಡಾ.ಕವಿತಾ ಗಿರೀಶ್, ಡಾ. ಜಯರಾಜ್ ಪಪಂ ನಾಮ ನಿರ್ದೇಶಿತ ಸದಸ್ಯ ಸಂದೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಮುಖಂಡ ಬಿ.ಸಿ ಶಂಕರಾಚಾರ್, ಕಟ್ಟೆಗದ್ದೆ ನಾಗರಾಜ್, ಆರೋಗ್ಯ ಇಲಾಖೆ ಸತೀಶ್, ಆಹಾರ ನಿರೀಕ್ಷಕ ಮೋಹನ್, ಪೊಲೀಸ್ ಇಲಾಖೆ ಮತ್ತು ಹಲವು ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ : ಶ್ರೀ ಶ್ರೀ
ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ