ಕನ್ನಡಪ್ರಭ ವಾರ್ತೆ ಮುಳಬಾಗಲು ರೈತರನ್ನು ಕಾಪಾಡಿದರೆ ಅವರು ಇಡೀ ದೇಶವನ್ನು ಕಾಪಾಡುತ್ತಾರೆ ಇದನ್ನು ಯಾರು ಮರೆಯಬಾರದೆಂದು ಎಂದು ಶಾಸಕ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದ ಹೊರವಲಯದ ಸೊನ್ನವಾಡಿ ರಸ್ತೆಯ ಪೂಲ್ ಚಂದ್ ಜೈನ್ ಕಲ್ಯಾಣ ಮಂಟಪದಲ್ಲಿ ಟಿಎಪಿಸಿಎಂಎಸ್ ಸಂಘದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅವರು, ಈ ಹಿಂದೆ ಟಿಎಪಿಸಿಎಂಎಸ್ ೪೦ ರಿಂದ ೪೫ ಲಕ್ಷ ರು.ಗಳ ವಹಿವಾಟು ಆಗುತ್ತಿತ್ತು. ಈಗ ಕೇವಲ ೫ ಕೋಟಿ ರೂ ವಹಿವಾಟು ನಡೆಸುತ್ತಿದೆ ಎಂದರು.ಯಾವುದೇ ತೆರಿಗೆ ಬಾಕಿ ಇಲ್ಲ
ನಗರದ ಹಲವಾರು ಪ್ರತಿಷ್ಠಿತ ಸಹಕಾರ ಸಂಘಗಳು ಲಕ್ಷಾಂತರ ರು.ಗಳ ತೆರಿಗೆ ಹಣವನ್ನು ನಗರಸಭೆಗೆ ಪಾವತಿಸದೇ ಬಾಕಿ ಉಳಿಕೊಂಡಿವೆ. ಆದರೆ ಟಿಎಪಿಸಿಎಂಎಸ್ ಸಂಘ ೪೨ ಲಕ್ಷ ರೂ ತೆರಿಗೆ ಪಾವತಿಸಿ ಒಂದೇ ಒಂದು ರು. ಸಹ ಬಾಕಿ ಉಳಿಸಿಕೊಂಡಿಲ್ಲ ಎಂದರುಯೂರಿಯಾಗೆ ಹೆಚ್ಚು ಬೇಡಿಕೆ
ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕೆ ಅತಿ ಹೆಚ್ಚು ಬೇಡಿಕೆ ಇದ್ದು ಖಾಸಗಿ ಗೊಬ್ಬರದ ಅಂಗಡಿಗಳ ಬಳಿ ತಿರುಗಾಡುವುದನ್ನು ತಪ್ಪಿಸಿ ಸಂಘದ ಗೌಡನ್‌ನಲ್ಲಿ ೧೪೦ ಟನ್ ಯೂರಿಯಾ ದಾಸ್ತಾನುಮಾಡಿ ರೈತರಿಗೆ ರಿಯಾಯಿತಿ ಧರದಲ್ಲಿ ಮಾರಾಟ ಮಾಡಿದ್ದೇವೆ, ಆದರೆ ಇಲ್ಲಿನ ಕೆಲ ರೈತರು ಆಂಧ್ರದವರಿಗೆ ಮಾರಾಟ ಮಾಡುತ್ತಿರುವುದು ದುರದೃಷ್ಟಕರ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.ದ್ವೇಶದ ರಾಜಕಾರಣ ಬೇಡಮುಳಬಾಗಲು ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ, ರಾಜ್ಯದ ಮಂಡ್ಯ, ಚಿಕ್ಕಮಂಗಳಲೂರು, ನಂತರದ ಸ್ಥಾನ ಮುಳಬಾಗಲು ಟಿಎಪಿಸಿಎಂಎಸ್ ಅತಿಹೆಚ್ಚು ಆಸ್ತಿ ಮತ್ತು ವಹಿವಾಟು ನಡೆಸುತ್ತಿರುವ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊಸ ಸಂಕೀರ್ಣ ನಿರ್ಮಿಸಿದರೆ ತಾವು ವೈಯುಕ್ತಿಕವಾಗಿ ೫೦ ಲಕ್ಷ ರೂಗಳನ್ನು ನೀಡುವುದಾಗಿ ಹೇಳಿದರು. ಅಲ್ಲದೆ ಯಾರೂ ಸಹ ದ್ವೇಶದ ರಾಜಕಾರಣ ಮಾಡಬಾರದು, ಸೌಹಾರ್ಧತೆ ಬೆಳಸಿಕೊಳ್ಳೋಣ ಎಂದು ನುಡಿದರು.
ಸಂಘದ ಉಪಾಧ್ಯಕ್ಷೆ ಎ. ಕವಿತಾ ನಾರಾಯಣಸ್ವಾಮಿ, ನಿರ್ದೇಶಕರಾದ ಆರ್. ಅಮರನಾರಾಯಣಪ್ಪ, ವಿ. ರಾಜಪ್ಪ, ಎಂ. ಸುಬ್ರಮಣಿ, ಡಿ.ಆರ್. ಗೋಪಾಲಕೃಷ್ಣ, ಪಿ.ಎಂ. ಸೂರ್ಯನಾರಾಯಣಗೌಡ. ಆರ್. ಶಿವಶಂಕರ್, ಅನಸೂಯಮ್ಮ, ಹೆಚ್.ಎ. ಲಕ್ಷ್ಮಯ್ಯ, ಹೆಚ್.ಎನ್. ವೆಂಕಟೇಶಪ್ಪ, ಸಿ.ಎಂ. ಶ್ರೀನಿವಾಸ್, ಎಂ.ಆರ್. ಮುರಳಿ, ಸಿ.ಡಿ.ಓ ಬಿ.ಆರ್. ಶಿವಶಂಕರ್, ಸಿಬ್ಬಂದಿಯಾದ ವಿ. ನಾರಾಯಣಸ್ವಾಮಿ, ಕೆ. ನಾರಾಯಣಸ್ವಾಮಿ, ಬಾರ್ಗವಿ, ನಂದಿನಿ, ಬಾಲಾಜಿ, ವೆಂಕಟೇಶ್‌ಬಾಬು, ನವೀನ್, ಸುಬ್ರಮಣಿ ಇದ್ದರು.