- ಚನ್ನಗಿರಿ ತಾಲೂಕು ಸೂಳೆಕೆರೆ ಬೆಟ್ಟದಲ್ಲಿ ಬೀಜದ ಉಂಡೆಗಳ ಹಾಕುವ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ
ಶನಿವಾರ ಸಂಜೆ ತಾಲೂಕಿನ ಸೂಳೆಕೆರೆಯ ಬೆಟ್ಟದಲ್ಲಿ ಖಡ್ಗ ಸಂಘ, ಸೂಳೆಕೆರೆ ಸಂರಕ್ಷಣಾ ಸಮಿತಿ, ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ, ಎಲ್.ಐ.ಸಿ. ಆಶ್ರಯದಲ್ಲಿ ಮರ-ಗಿಡಗಳ ಬೀಜದ ಉಂಡೆಗಳನ್ನು ಬೆಟ್ಟದಲ್ಲಿ ಹಾಕಿ, ಪರಿಸರ ಪ್ರೇಮಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮರ-ಗಿಡಗಳು ಗುಡ್ಡಗಾಡು ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯಬೇಕು. ಆಗ ಸಕಲ ಜೀವರಾಶಿಗಳಿಗೂ ಆಶ್ರಯವಾಗಲಿದ್ದೆ. ಮಾನವರು ಮರ-ಗಿಡಗಳನ್ನು ಬೆಳೆಸುತ್ತಾ ಅರಣ್ಯ ರಕ್ಷಣೆ ಮಾಡಬೇಕು ಎಂದರು.ಸೂಳೆಕೆರೆಯ ಗುಡ್ಡಗಾಡಿನಲ್ಲಿ ಗಾಳಿಯಿಂದ ವಿದ್ಯುತ್ ತಯಾರಿಕೆಯ ಪವನ ಯಂತ್ರಗಳನ್ನು, ಸೋಲಾರ್ ಪ್ಲಾಂಟ್‌ಗಳನ್ನು ಅಳವಡಿಸುವ ಹುನ್ನಾರ ನಡೆದಿದೆ. ಇದರಿಂದ ಪ್ರಕೃತಿಯಲ್ಲಿನ ಜೀವರಾಶಿಗಳಿಗೆ ತೊಂದರೆ ಯಾಗಲಿದೆ. ಈ ಪ್ರದೇಶದಲ್ಲಿ ಇಂತಹ ಯಾವುದೇ ಯೋಜನೆಗಳು ಜಾರಿಯಾಗುವುದು ಬೇಡ. ಒಂದುವೇಳೆ ಪವನ ಯಂತ್ರಗಳನ್ನು, ಸೋಲಾರ್ ಪ್ಲಾಂಟ್‌ಗಳನ್ನು ಅಳವಡಿಸಲು ಮುಂದಾದರೆ ಪ್ರತಿಭಟನೆ ನಡೆಸಲಾಗುವುದು ಎಂದರು ಎಚ್ಚರಿಸಿದರು.
- - -
ಕೋಟ್ ಅರಣ್ಯ ಪ್ರದೇಶಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವು ಗೊಳಿಸಬೇಕು. ಅರಣ್ಯ ಸಂಪತ್ತು 32 ಪರ್ಸೆಂಟ್ ಇರಬೇಕು. ಪ್ರಸ್ತುತವಾಗಿ ಕೇವಲ 14 ಪರ್ಸೆಂಟ್ ಅರಣ್ಯ ಪ್ರದೇಶವಿದೆ. ಇದು ಅಪಾಯಕಾರಿ ಬೆಳವಣಿಗೆ- ಗುರುಬಸವ ಮಹಾಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠ
- - - -23ಕೆಸಿಎನ್‌ಜಿ1:ಚನ್ನಗಿರಿ ತಾಲೂಕಿನ ಸೂಳೆಕೆರೆಯ ಬೆಟ್ಟದಲ್ಲಿ ಗಿಡಗಳ ಬೆಳೆಸುವ ಬೀಜದ ಉಂಡೆಗಳನ್ನು ಹಾಕುವ ಕಾರ್ಯಕ್ರಮದಲ್ಲಿ ಪಾಂಡೋಮಟ್ಟಿ ಶ್ರೀಗಳು, ಹಿರೇಮಠದ ಶ್ರೀಗಳು, ಅಧಿಕಾರಿಗಳು, ಪರಸರ ಪ್ರೇಮಿಗಳು ಪಾಲ್ಗೊಂಡರು.