ನಮ್ಮ ಸಂವಿಧಾನ ಅಪಾಯದಲ್ಲಿದ್ದು ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರ ಇಟ್ಟು ಸಂವಿಧಾನ ರಕ್ಷಣೆ ಮಾಡಲೇಬೇಕು, ಇದು ನಮ್ಮೇಲ್ಲರ ಹೊಣೆ ಎಂದು ಪತ್ರಕರ್ತ ಜೆ.ಯಾದವರೆಡ್ಡಿ ತಿಳಿಸಿದರು.
ಹೊಸದುರ್ಗ: ನಮ್ಮ ಸಂವಿಧಾನ ಅಪಾಯದಲ್ಲಿದ್ದು ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರ ಇಟ್ಟು ಸಂವಿಧಾನ ರಕ್ಷಣೆ ಮಾಡಲೇಬೇಕು, ಇದು ನಮ್ಮೇಲ್ಲರ ಹೊಣೆ ಎಂದು ಪತ್ರಕರ್ತ ಜೆ.ಯಾದವರೆಡ್ಡಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಂವಿಧಾನ ಸಂರಕ್ಷಣಾಪಡೆಗೆ ಸೇಪ೯ಡೆ ಯಾಗೋಣ ಬನ್ನಿ ಎನ್ನುವ ಸಂವಿಧಾನ ಅಭಿಯಾನ ವೇದಿಕೆಯ ಪೂವ೯ಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಆಶಯವನ್ನು ಅಥ೯ ಮಾಡಿಕೊಳ್ಳದ ಇಂದಿನ ನಮ್ಮನ್ನಾಳುವ ನಾಯಕರು ಸಂವಿಧಾನದ ಆಶಯಗಳನ್ನು ಜಾರಿಗೆ ತರದೆ, ಬಡವರಿಗೂ ಸರಿಯಾದ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಬಡವ, ದಲಿತ, ಹಿಂದುಳಿದ ಅಲ್ಪಸಂಖ್ಯಾತರು, ರೈತರು, ಮಹಿಳೆಯರು ನಲುಗಿ ಹೋಗಿದ್ದಾರೆ. ಸಂವಿಧಾನದ ನೆರಳಲ್ಲಿ ದೇಶದ ಸಂಪತ್ತು ಖಾಸಗಿಯವರ ಪಾಲಾಗುತ್ತಿದೆ. ಧರ್ಮಜಾತಿಯ ಹೆಸರಿನಲ್ಲಿ ಹಿಂದೂ ರಾಷ್ಟ್ರದ ನಿರ್ಮಾಣ ಮಾಡುವುದಾಗಿ ಜನರಲ್ಲಿ ಒಡಕು ಹುಟ್ಟಿಸಿ ಕೋಮು ಗಲಭೆಗಳನ್ನು ಮಾಡಿಸುವ ಮೂಲಕ ಸಂವಿಧಾನ ಬದಲಾವಣೆಯ ಕೂಗು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಸುಮ್ಮನಿರದೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಈ ಬಗ್ಗೆ ಅಭಿಯಾನ ನಡೆಸಿ ಜಾಗೃತಿ ಮೂಡಿಸಿ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು. ನಿವೃತ್ತ ಪ್ರಾಚಾಯ೯ ಶಿವಕುಮಾರ್ ಮಾತನಾಡಿ, ಸಂವಿಧಾನದ ವಿರೋಧಿಗಳು ನಮ್ಮ ಜನರನ್ನು ಜಾತಿ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಮೇಲು, ಕೀಳು ತಾರತಮ್ಯ ಮಾಡಿ ಕೋಮು ದಳ್ಳುರಿಯಲ್ಲಿ ಸಿಲುಕಿಸಿದ್ದು, ಇದರಿಂದ ಬಡವರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಸಂವಿಧಾನದ ಅಡಿಯಲ್ಲಿ ಬರುವ ಶಾಸಕಾಂಗ, ಕಾಯಾ೯ಂಗ, ನ್ಯಾಯಾಂಗ, ಮಾಧ್ಯಮ ರಂಗವು ಉಳ್ಳವರ ಪರ ಕೆಲಸ ಮಾಡುತ್ತಿವೆ ಎಂದರು.
ತಾ.ಅಧ್ಯಕ್ಷ ಕೈನಡು ಚಂದ್ರಪ್ಪ ಮಾತನಾಡಿ, ನ್ಯಾಯಕ್ಕಾಗಿ ಹೋರಾಟ ಮಾಡುವವರನ್ನು ಭಯೋತ್ಪಾದಕರೆಂದು ಗುರುತ್ತಿಸಿ ಶಿಕ್ಷೆಗೆ ನೂಕುತ್ತಾರೆ. ಆ ಕಾರಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಮಾನತೆ, ಸಾಮಾಜಿಕ ನ್ಯಾಯದ ಸಂವಿಧಾನ ಸಂರಕ್ಷಣೆಗೆ ನಾವೆಲ್ಲರೂ ಸಿದ್ಧರಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಇಟಿಗೆಹಳ್ಳಿ ರಾಜಪ್ಪ, ಡಿಎಸ್‌ಎಸ್ ಮಾಜಿ ಸಂಚಾಲಕ ಆದ್ರಿಕಟ್ಟೆ ಜಿ.ಕುಮಾರಪ್ಪ ಮಳಲಿ ಶೇಖರಪ್ಪ, ಆದಿ ಜಾಂಬವ ಸಮಾಜದ ಅಧ್ಯಕ್ಷ ನಾಕೀಕೆರೆ ತಿಪ್ಪಣ್ಣ, ಲಕ್ಕಿಹಳ್ಳಿ ಮುದ್ದಪ್ಪ, ಬಿ.ಎಸ್.ಪಿ.ತಿಮ್ಮಣ್ಣ, ಪೂಜಾರಿ ಕರಿಯಪ್ಪ , ಎಂ.ಜಿ ದಿಬ್ಬದ ರಂಗಪ್ಪ, ಕರಿಯಪ್ಪ, ಜಂತಿಕೊಳಲು ಮಂಜು, ಪ್ರಸನ್ನ, ತಿಪ್ಪೇಶ್, ವಕೀಲರಾದ ಜ್ಞಾನೇಶ್, ಮಂಜುನಾಥ್, ಪುರಸಭೆ ಸಭಾ ಸದಸ್ಯರಾದ ದೊಡ್ಡಯ್ಯ ಮಳಲಿ ಪೂಜಾರಿ ಕರಿಯಪ್ಪ, ಗತ್ತಿಕಟ್ಟೆ ಮಂಜಪ್ಪ, ಮಾಜಿ ಪುರಸಭೆ ಕೌಸ್ಸಿಲರ್ ನಾಗರಾಜ್, ಟೌನ್ ಪ್ರಸನ್ನ, ಪೀಲಾಪುರ ಕಂಠೇಶ್, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಬಸವರಾಜ್ ಸೇರಿದಂತೆ ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.