ಭಾಲ್ಕಿ: ಭಾರತೀಯ ಜಾಗತಿಕ ಮಟ್ಟದಲ್ಲಿ, ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಸಾಗರ ಖಂಡ್ರೆ ಹೇಳಿದರು.
ಈ ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಜಗತ್ತಿಗೆ ಮಾದರಿಯಾದ ಸಂವಿಧಾನಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮೆಲ್ಲರಿಗೂ ಪೂಜ್ಯನೀಯರಾಗಿದ್ದಾರೆ. ಅವರ ತತ್ವಾದರ್ಶಗಳು ಪಾಲಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ವಿಶ್ವನಾಥ ಮೋರೆ, ವಿಜಯಕುಮಾರ ರಾಜಭವನ, ವಿಲಾಸ ಮೋರೆ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಅಶೋಕ ಗಾಯಕವಾಡ, ಶ್ರೀನಿವಾಸ ಬಾಲವಾಲೆ, ಜೈಪಾಲ ಬೋರಾಳೆ, ಶಿವಕುಮಾರ ಮೇತ್ರೆ, ಓಂಪ್ರಕಾಶ ಮೋರೆ, ಪ್ರಕಾಶ ಭಾವಿಕಟ್ಟಿ, ಕೈಲಾಸ ಭಾವಿಕಟ್ಟಿ, ಅರುಣ ಮೋರೆ ಮತ್ತಿತರರು ಇದ್ದರು.