ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

KannadaprabhaNewsNetwork |  
Published : May 20, 2025, 11:59 PM IST
20ಎಚ್ಎಸ್ಎನ್8 : ಬೇಲೂರು ಪಟ್ಟಣದ ರಾಯಪುರದ ಬಳಿ ಅಕ್ರಮವಾಗಿ ಹಾಸನದ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಗೂಡ್ಸ್ ವಾಹನದಲ್ಲಿ  ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಕರು ಹಾಗು ಜಾನುವಾರುಗಳನ್ನು  ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮತ್ತು ಪೊಲಿಸರು ರಕ್ಷಿಸಿದರು. | Kannada Prabha

ಸಾರಾಂಶ

ರಾಯಪುರದ ಬಳಿ ಅಕ್ರಮವಾಗಿ ಹಾಸನದ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಗೂಡ್ಸ್ ವಾಹನದಲ್ಲಿ ಹಾಸನ ಸಂತೆಯಿಂದ ಖರೀದಿ ಮಾಡಿ ಚಿಕ್ಕಮಗಳೂರಿಗೆ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಕರುಗಳು ಹಾಗು ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ಮಾಹಿತಿ ತಿಳಿದಿತ್ತು. ತಕ್ಷಣ ಬೇಲೂರು ಪಿಎಸ್ಐ ಎಸ್ ಜಿ ಪಾಟೀಲ್ ನೇತೃತ್ವದಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ವಾಹನ ಹಿಂಬಾಲಿಸಿ ಅಡ್ಡಗಟ್ಟಿ ಚಾಲಕನನ್ನು ವಿಚಾರಿಸಿದಾಗ ಹಾಸನದ ಸಂತೆಯಿಂದ ಚಿಕ್ಕ ಕರುಗಳು ಸೇರಿದಂತೆ ಒಟ್ಟು ೧೨ ಕರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ರಾಯಪುರ ಮಗ್ಗೆ ಗೇಟ್‌ ಬಳಿ ಅಕ್ರಮವಾಗಿ ಹಾಸನದ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಕರು ಸೇರಿದಂತೆ ಜಾನುವಾರುಗಳನ್ನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮತ್ತು ಪೊಲೀಸರು ರಕ್ಷಿಸಿದರು.

ರಾಯಪುರದ ಬಳಿ ಅಕ್ರಮವಾಗಿ ಹಾಸನದ ಕಡೆಯಿಂದ ಚಿಕ್ಕಮಗಳೂರು ಕಡೆಗೆ ಗೂಡ್ಸ್ ವಾಹನದಲ್ಲಿ ಹಾಸನ ಸಂತೆಯಿಂದ ಖರೀದಿ ಮಾಡಿ ಚಿಕ್ಕಮಗಳೂರಿಗೆ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಕರುಗಳು ಹಾಗು ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ಮಾಹಿತಿ ತಿಳಿದಿತ್ತು. ತಕ್ಷಣ ಬೇಲೂರು ಪಿಎಸ್ಐ ಎಸ್ ಜಿ ಪಾಟೀಲ್ ನೇತೃತ್ವದಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಕೆಎ ೧೩ ಬಿ ೪೦೧೦ ನಂಬರ್‌ನ ಗೂಡ್ಸ್ ವಾಹನ ಹಿಂಬಾಲಿಸಿ ಅಡ್ಡಗಟ್ಟಿ ಚಾಲಕನನ್ನು ವಿಚಾರಿಸಿದಾಗ ಹಾಸನದ ಸಂತೆಯಿಂದ ಚಿಕ್ಕ ಕರುಗಳು ಸೇರಿದಂತೆ ಒಟ್ಟು ೧೨ ಕರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ.

ವಾಹನದ ಸಮೇತ ಜಪ್ತಿ ಮಾಡಿ ಚಾಲಕ ಖಲೀಲ್ ಪಾಷ ಎಂಬಾತನನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಂತರ ಜಾನುವಾರುಗಳನ್ನು ಗೋ ಶಾಲೆಗೆ ಕಳುಹಿಸಿಕೊಡಲಾಗುತ್ತದೆ ಎಂದರು.

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಧಾನ ಸಂಚಾಲಕ ನಾಗೇಶ್ (ಗುಂಡ), ಈಗಾಗಲೇ ಹಲವಾರು ಬಾರಿ ಗೋವುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು, ಪೋಲಿಸ್ ಇಲಾಖೆ ಪುರಸಭೆ ಹಾಗೂ ಕಂದಾಯ ಇಲಾಖೆಗಳು ಪ್ರತಿ ಬಾರಿ ತಿಂಗಳಿಗೊಮ್ಮೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಗೋ ಮಾಂಸ ಹಾಗೂ ಗೋವುಗಳನ್ನು ರಕ್ಷಣೆ ಮಾಡುತ್ತಿದೆ‌. ಆದರೂ ವ್ಯಾಪಕವಾಗಿ ಕದ್ದುಮುಚ್ಚಿ ಇಂತಹ ಪ್ರಕರಣಗಳು ದಾಖಲಾಗುತ್ತಿದೆ. ಇವುಗಳ ಮೇಲೆ ಹೆಚ್ಚಿನ ರೀತಿಯಲ್ಲಿ ಕಾನೂನು ಜಾರಿಯಾಗಬೇಕು ಎಂದರು.

ದಾಳಿ ಸಂದರ್ಭದಲ್ಲಿ ಪೊಲೀಸ್ ಇಲಾಖೆ ದೇವರಾಜು, ದೇವೇಂದ್ರ, ಅಣ್ಣಪ್ಪ, ವಿಶ್ವ ಹಿಂದೂಪರಿಷತ್‌ ಕಾರ್ಯಕರ್ತರು ಹಾಜರಿದ್ದರು.

PREV

Recommended Stories

77ನೇ ವಯಸ್ಸಲ್ಲೂ ಅಂಜನಾದ್ರಿ ಏರಿದ ಗೌರ್‍ನರ್‌!
ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ