ರಾಷ್ಟ್ರ ಸಮಗ್ರತೆ ರಕ್ಷಣೆಯೇ ಆರ್‌ಎಸ್‌ಎಸ್‌ ಆದ್ಯತೆ: ನಾ.ಸೀತಾರಾಮ್

KannadaprabhaNewsNetwork |  
Published : Oct 26, 2024, 01:06 AM IST
21ಎಚ್ಎಸ್ಎನ್18 : ನಗರದ ಹಳೆಯ ಮಾಧ್ಯಮಿಕ ಶಾಲಾ ಅವರಣದಲ್ಲಿ ಗಣವೇಶಧಾರಿಗಳನ್ನು ಉದ್ದೇಶಿಸಿ ನಾ.ಸೀತಾರಾಮ್ ಮಾತನಾಡಿದರು. | Kannada Prabha

ಸಾರಾಂಶ

ದುಷ್ಟಶಕ್ತಿಯ ದಮನ, ಸಮರ್ಪಣಾ ಮನೋಭಾವ ಹಾಗೂ ರಾಷ್ಟ್ರೀಯ ಸಮಗ್ರತೆ ಕಾಪಾಡುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೊದಲ ಆದ್ಯತೆಯಾಗಿದೆ ಎಂದು ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನಾ.ಸೀತಾರಾಮ್ ಹೇಳಿದರು. ಅರಸೀಕೆರೆಯಲ್ಲಿ ದಸರಾ ಹಬ್ಬ ಸಂಪನ್ನಗೊಂಡ ಸಭೆಯಲ್ಲಿ ಮಾತನಾಡಿದರು.

ದಸರಾ ಸಂಪನ್ನ ಸಭೆ

ಅರಸೀಕೆರೆ: ದುಷ್ಟಶಕ್ತಿಯ ದಮನ, ಸಮರ್ಪಣಾ ಮನೋಭಾವ ಹಾಗೂ ರಾಷ್ಟ್ರೀಯ ಸಮಗ್ರತೆ ಕಾಪಾಡುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೊದಲ ಆದ್ಯತೆಯಾಗಿದೆ ಎಂದು ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನಾ.ಸೀತಾರಾಮ್ ಹೇಳಿದರು.

ವಿಜಯದಶಮಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಭಾನುವಾರ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. 99 ವರ್ಷದ ಇತಿಹಾಸ ಹೊಂದಿರುವ ಸಂಘ ಸಮಾಜದ ಬದಲಾವಣೆಗೆ ತೆರೆದುಕೊಂಡಿದೆ. ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ತರ ಸಂಕಲ್ಪವನ್ನು ಮುನ್ನಡೆಸಿಕೊಂಡು ಬರುತ್ತಿದೆ. ಡಾ.ಹಡಗೆವಾರ್‌ ಸೇರಿದಂತೆ ಹಲವು ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದು ಜಗತ್ತಿನ ಏಕೈಕ ದೊಡ್ಡ ಸಂಘಟನೆಯಾಗಿದೆ ಎಂಬುದನ್ನು ವಿದೇಶಿ ಮಾಧ್ಯಮಗಳೇ ಹೇಳಿವೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕೆಲ ದೇಶ ವಿರೋಧಿಗಳು ಇಲ್ಲಸಲ್ಲದ ತುತ್ತೂರಿ ಊದಿಕೊಂಡು ತಿರುಗುತ್ತಿವೆ ಎಂದು ದೂರಿದರು.

ನಾನು ಹಿಂದೂ ಎಂದು ಎದೆಯುಬ್ಬಿಸಿ ಹೇಳುವ ತಾಕತ್ತು ನಮ್ಮದಾಗಬೇಕು. ಜಾತಿ ಪದ್ಧತಿಯ ಸಂಕೋಲೆಯನ್ನು ಅಸ್ತ್ರವಾಗಿಸಿಕೊಂಡಿರುವ ಕೆಲ ದೇಶ ವಿಭಜಕ ಶಕ್ತಿಗಳು ವಿದ್ರೋಹಿ ಕೃತ್ಯ ನಡೆಸುತ್ತಿವೆ. ನಮ್ಮನ್ನಾಳುವ ಸರ್ಕಾರಗಳು ಧೋರಣೆ ಬದಲಿಸಿಕೊಳ್ಳದಿದ್ದರೆ ಚೀನಾ, ಗ್ರೀಕ್ ಮಾದರಿಯಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಧಕ್ಕೆಯಾಗುವ ಅಪಾಯವಿದೆ. ಯುವ ಸಮುದಾಯ ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವುದು ದೇಶ ಭಕ್ತಿಯ ಸಂಕೇತವಾಗಿದೆ ಎಂದು ಹೇಳಿದರು.

ಹುಳಿಯಾರು ರಸ್ತೆ, ಲಕ್ಷ್ಮೀಪುರ, ಸಾಯಿನಾಥ ರಸ್ತೆ, ಪೇಟೆಬೀದಿ, ರಾಷ್ಟ್ರೀಯ ಹೆದ್ದಾರಿ, ಶಾನುಭೋಗರ ಬೀದಿ ಸೇರಿದಂತೆ ಹಲವು ಮಾರ್ಗಗಳಲ್ಲಿ ಗಣವೇಶಧಾರಿಗಳು ಭಾರತಮಾತೆ ಹಾಗೂ ಆರ್‌ಎಸ್‌ಎಸ್ ಭಾವಚಿತ್ರದ ಮೆರವಣಿಗೆ ಮಾಡುವ ಮೂಲಕ ಪಥಸಂಚಲನ ನಡೆಸಿ ಗಮನ ಸೆಳೆದರು. ಜಿಲ್ಲಾ ಸಹ ಕಾರ್ಯವಾಹ ಚಂದನ್, ಇಸ್ರೋ ಅಧಿಕಾರಿ ನಂದನ್ ಕುಮಾರ್‌ ವೇದಿಕೆಯಲ್ಲಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ