ಶೋಷಿತರ ರಕ್ಷಣೆ ಸಮತಾ ಸೈನಿಕ ದಳದ ಉದ್ದೇಶ

KannadaprabhaNewsNetwork |  
Published : Nov 27, 2024, 01:03 AM IST
ಸಿಕೆಬಿ-1 ನಗರದ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ  ಸಮತಾಸೈನಿಕ ದಳದ ಶತಮಾನೋತ್ಸವ ಮತ್ತು 75 ನೇ ಸಂವಿಧಾನ ಸಮರ್ಪಣಾ ದಿನಾಚರಣೆಗೆ   ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಚಾಲನೆ ನೀಡಿದರು | Kannada Prabha

ಸಾರಾಂಶ

ಮಹಾರಾಷ್ಟ್ರದಲ್ಲಿ ಅಧಿಕೃತವಾಗಿ ಪ್ರಾರಂಭವಾದ ಸಂಘಟನೆ ಕಳೆದ ನೂರು ವರ್ಷಗಳಲ್ಲಿ ದೇಶದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ, ಶೋಷಿತರ ರಕ್ಷಣೆಗೆ ಸಂಘಟನೆ ಹೋರಾಟ ನಡೆಸಿಕೊಂಡು ಬರುತ್ತಿದೆ. ದಲಿತರಿಗೆ ಅವಮಾನಿಸಿರುವ ಶಾಸಕ ಪ್ರದೀಪ್‌ ಈಶ್ವರ್‌ ಕೂಡಲೇ ಕ್ಷಮೆ ಕೋರುವಂತೆ ಸಮತಾ ಸೈನಿಕ ದಳ ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸ್ವಾಭಿಮಾನಿ ಚಳವಳಿಯ ಮುನ್ನಡೆಗಾಗಿ ಸ್ವಯಂ ರಕ್ಷಣೆಯ ಕಾರ್ಯಪಡೆಯ ಸಿದ್ಧತೆಯೇ ಸಮಾತಾ ಸೈನಿಕ ದಳದ ಸ್ಥಾಪನೆಗೆ ಮೂಲ ಕಾರಣವಾಗಿದ್ದು, ಸಾಮಾಜಿಕ ನ್ಯಾಯ ಪ್ರತಿಪಾದಿಸುವವರೊಂದಿಗೆ ಎಸ್‌ಎಸ್‌ಡಿ ಸದಾ ಹೆಗಲುಕೊಟ್ಟು ನಿಲ್ಲುತ್ತದೆ ಎಂದು ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಸಮತಾಸೈನಿಕ ದಳದ ಶತಮಾನೋತ್ಸವ ಮತ್ತು 75 ನೇ ಸಂವಿಧಾನ ಸಮರ್ಪಣಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ , ಮಹಾರಾಷ್ಟ್ರದಲ್ಲಿ ಅಧಿಕೃತವಾಗಿ ಪ್ರಾರಂಭವಾದ ಸಂಘಟನೆ ಕಳೆದ ನೂರು ವರ್ಷಗಳಲ್ಲಿ ದೇಶದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ, ಶೋಷಿತರ ರಕ್ಷಣೆಗೆ ನಮ್ಮ ಹೋರಾಟ ನಡೆಸಿಕೊಂಡು ಬರಲಾಗಿದೆ ಎಂದರು. ಪ್ರದೀಪ್ ಈಶ್ವರ್‌ಗೆ ಎಚ್ಚರಿಕೆ

ಮೊನ್ನೆ ನಡೆದ ಓನಕೆ ಓಬವ್ವ ಜಯಂತಿಗೆ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಗೈರಾಗಿದ್ದರು. ಈ ಕುರಿತು ನಮ್ಮ ಆರ್ ಪಿಐ ರಾಜ್ಯನ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ವೆಂಕಟರಮಣಪ್ಪ ಶಾಸಕರು ಕಾರ್ಯಕ್ರಮಕ್ಕೆ ಬಂದಿದ್ದರೆ ಚನ್ನಾಗಿತ್ತು ಎಂದು ಹೇಳಿದ್ದೇ ತಪ್ಪಾ, ರೋಲ್ ಕಾಲ್ ಗಿರಾಕಿಗಳ ಹೇಳಿದ್ದಕ್ಕೆಲ್ಲಾ ಬರಬೇಕಾ ಎಂದು ದಲಿತರಿಗೆ ಅವಮಾನ ಮಾಡಿದ್ದಾರೆ. ಶಾಸಕರು ಕೂಡಲೇ ದಲಿತರ ಕ್ಷಮೆ ಕೇಳದಿದ್ದರೆ ನಮ್ಮ ತಾಕತ್ತು ತೋರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಅಲ್ಲಮ ಪ್ರಭು ಪೀಠದ ಕುಪೇಂದ್ರ ಸ್ವಾಮೀಜಿ, ನಗರಸಬೆ ಉಪಾಧ್ಯಕ್ಷ ಜೆ.ನಾಗರಾಜ್,ಆರ್ ಪಿಐ ರಾಜ್ಯಾಧ್ಯಕ್ಷ ಸತೀಶ್,ಮಹಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ವೆಂಕಟರಮಣಪ್ಪ, ಮಹಿಳಾ ರಾಜ್ಯಾಧ್ಯಕ್ಷೆ ರೂಪಕಲಾ, ಲಯನ್ ಬಾಲಕೃಷ್ಣ, ಅರುಣ್ ಟೈಗರ್,ಛಲವಾದಿ ಸೂರಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?