ನಟ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : Jun 03, 2025, 12:14 AM ISTUpdated : Jun 03, 2025, 11:01 AM IST
ಕೆ ಕೆ ಪಿ ಸುದ್ದಿ 02: ತಮಿಳು ನಟ ಕಮಲ್ ಹಾಸನ್ ವಿರುದ್ಧ ನಗರದ ಚನ್ನಬಸಪ್ಪ ವೃತ್ತದಲ್ಲಿ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ.  | Kannada Prabha

ಸಾರಾಂಶ

ಕನ್ನಡ ಭಾಷೆಯನ್ನು ತಮಿಳು ಭಾಷೆಯಿಂದ ಹುಟ್ಟಿದ್ದು ಎಂಬ ದುರಹಂಕಾರ ಹೇಳಿಕೆಯನ್ನು ನಟ ಕಮಲ್ ಹಾಸನ್ ಹೇಳಿರುವುದನ್ನು ಸಮಸ್ತ ಏಳು ಕೋಟಿ ಕನ್ನಡಿಗರು ಖಂಡಿಸಿದ್ದಾರೆ.

 ಕನಕಪುರ : ನಗರದ ಚನ್ನಬಸಪ್ಪ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ವತಿಯಿಂದ ಕಮಲ್ ಹಾಸನ್ ಭಾವಚಿತ್ರವನ್ನು ಹರಿದು ಬೆಂಕಿ ಹಚ್ಚಿ ಅವರ ವಿರುದ್ಧ ಧಿಕ್ಕಾರವನ್ನು ಕೂಗಿ ಪ್ರತಿಭಟಿಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಹಿಂದೂಪರ ಸಂಘಟನೆಯ ಕೃಷ್ಣಪ್ಪ ಮಾತನಾಡಿ, ಸುಮಾರು 2,000 ವರ್ಷಗಳ ಇತಿಹಾಸ ಇರುವಂತಹ ಕನ್ನಡ ಭಾಷೆಯನ್ನು ತಮಿಳು ಭಾಷೆಯಿಂದ ಹುಟ್ಟಿದ್ದು ಎಂಬ ದುರಹಂಕಾರ ಹೇಳಿಕೆಯನ್ನು ನಟ ಕಮಲ್ ಹಾಸನ್ ಹೇಳಿರುವುದನ್ನು ಸಮಸ್ತ ಏಳು ಕೋಟಿ ಕನ್ನಡಿಗರು ಖಂಡಿಸಿದ್ದು ಕನ್ನಡದ ಎಂಟು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು, ಇಮ್ಮಡಿ ಪುಲಕೇಶಿ, ಅಮೋಘವರ್ಷ, ಕೃಷ್ಣದೇವರಾಯ ಎಂಬ ಅತಿರಥ ಮಹಾರಾಜರು ಇಡೀ ನಮ್ಮ ಕನ್ನಡನಾಡನ್ನಲ್ಲದೆ ಇಡೀ ದೇಶವನ್ನು ಆಳಿದಂತಹ ಇತಿಹಾಸವಿರುವ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿರುವುದು ಎಂಬ ಹೇಳಿರುವುದು ದುರಹಂಕಾರದ ಪರಮಾವಧಿ ಮಾತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್ ಮಾತನಾಡಿ, ತಮಿಳು ನಟ ಕಮಲಹಾಸನ್ ಕ್ಷಮೆ ಕೇಳುವವರೆಗೂ ಅವರು ಅಭಿನಯಿಸುವ ಯಾವದೇ ಚಿತ್ರವೂ ಕರ್ನಾಟಕದಲ್ಲಿ ಬಿಡುಗಡೆಯಾಗಬಾರದು ಮತ್ತು ಅವರು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಕಾಲಿಡದಂತೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಾರಂಭದ ವೇದಿಕೆಯಲ್ಲಿ ಇದ್ದಂತ ನಮ್ಮ ಕನ್ನಡದ ಮೇರು ನಟ ಕರುನಾಡ ಚಕ್ರವರ್ತಿ ಶಿವಣ್ಣ ಈ ಮಾತನ್ನು ಖಂಡಿಸಬೇಕಾಗಿತ್ತು. ಆದರೆ ಎಲ್ಲೋ ಒಂದು ಕಡೆ ಕಮಲ್ ಹಾಸನ್ ರನ್ನು ಸಮರ್ಥನೆ ಮಾಡುತ್ತಿರುವ ಅವರು ಡಾ. ರಾಜಕುಮಾರ್ ಅವರ ಮಗನಾಗಿ ಅವರಿಗೆ ಹಾಗೂ ಕನ್ನಡ ಜನತೆಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗದ ಅತಿರಥ ಮಹಾನ್ ನಟರೆನಿಸಿರುವ ಯಶ್, ಸುದೀಪ್, ದರ್ಶನ್, ಉಪೇಂದ್ರ, ದುನಿಯಾ ವಿಜಿ ಸೇರಿದಂತೆ ನಾಯಕ ನಟ- ನಟಿಯರು ಇದರ ವಿರುದ್ಧ ಪ್ರತಿಪಟಿಸಬೇಕಾಗಿತ್ತು. ಆದರೆ ಅವರೆಲ್ಲಾ ಸುಮ್ಮನಿರುವುದನ್ನು ನೋಡಿದರೆ ಇವರೆಲ್ಲ ನಮ್ಮ ಕನ್ನಡ ನಾಡು ನುಡಿ ಭಾಷೆಗೆ ಯಾವುದೇ ಉಪಯೋಗ, ಗೌರವ, ಮಾರ್ಯಾದೆ ಇಲ್ಲವೆನಿಸುತ್ತಿದ್ದು, ಕನ್ನಡಿಗರ ಸ್ವಾಭಿಮಾನಕ್ಕೆ ನೋವು ಹಾಗೂ ಧಕ್ಕೆ ತಂದಿರುವ ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ಈ ಹೋರಾಟ ಉಗ್ರ ಸ್ವರೂಪವನ್ನು ತಾಳಲಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಲೇಖಕರ ವೇದಿಕೆ ಜಿಲ್ಲಾಧ್ಯಕ್ಷ ಕೂ.ಗಿ. ಗಿರಿಯಪ್ಪ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ವೀರೇಶ್, ಜಯ ಕರ್ನಾಟಕ ಸಂಘಟನೆಯ ಮುಖಂಡ ಮಿಲಿಟರಿ ರಾಮಣ್ಣ, ಮಿಲಿಟರಿ ದೇವರಾಜ್, ಶಂಕರ ಹಾಗೂ ಒಕ್ಕಲಿಗರ ಸಂಘದ ರಾಜ್ಯ ಕಾರ್ಯದರ್ಶಿಯಾದ ಗಬ್ಬಾಡಿ ಕಾಡಿಗೌಡ, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ಅಪ್ಪಾಜಿ ಕಾರ್ಮಿಕ ಘಟಕದ ಅಧ್ಯಕ್ಷ ಆಸ್ಕರ್ ಖಾನ್, ತಾಲೂಕು ಅಧ್ಯಕ್ಷ ಅಂಗಡಿ ರಮೇಶ್ ಫಿಲಿಪ್ಸ್, ಸ್ವಾಮಿ ನಾರಾಯಣ ಭಾಗವಹಿಸಿದರು.  

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್