ಕನ್ನಡಪ್ರಭ ವಾರ್ತೆ ಬೇಲೂರುವಿದ್ಯುತ್ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರುವ ಮೂಲಕ ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದ್ದು, ಇಲಾಖೆಯ ಕಾರ್ಮಿಕರಿಗೆ, ರೈತರು ಮತ್ತು ಬಡವರಿಗೆ ಹೊರೆಯಾಗುತ್ತದೆ ಎಂದು ಬೇಲೂರು ಚೆಸ್ಕಾಂ ನೌಕರರು ಮಂಗಳವಾರ ವಿದ್ಯುತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ವಿದ್ಯುತ ಖಾಸಗೀಕರಣದ ಮಾಲೀಕತ್ವದಲ್ಲಿ ನೌಕರರು ಇಕ್ಕಟ್ಟಿನಲ್ಲಿ ಸೌಲಭ್ಯಗಳು ಇಲ್ಲದೆ ನಿರ್ವಹಿಸುವ ದುಸ್ಥಿತಿ ಬರಲಿದೆ. ಮಸೂದೆ ರೈತರು ಮತ್ತು ಬಡವರ ಸಂಪೂರ್ಣ ವಿರೋಧಿಯಾದ ಕಾರಣದಿಂದ ಕೇಂದ್ರ ತನ್ನ ವಿದ್ಯುತ್ ಪ್ರಸ್ತಾವಿಕ ಕಾಯ್ದೆ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲವಾದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಚೆಸ್ಕಾಂ ನೌಕರರಾದ ಚಂದ್ರು, ರೇವಣ್ಣ, ನಾಗರಾಜ್. ಅನಿಲ್, ಚಂದ್ರಕಲಾ, ಮಾದೇಶ್, ದ್ವಾರಕನಾಥ್, ರಾಘವೇಂದ್ರ ಇನ್ನೂ ಮುಂತಾದವರು ಹಾಜರಿದ್ದರು.ಕೋಟ್....ವಿದ್ಯುತ್ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಬೇಲೂರು ಚೆಸ್ಕಾಂ ಇಲಾಖೆ ನೌಕರರು ಮತ್ತು ಸಿಬ್ಬಂದಿ ಕೆಲ ಕಾಲ ಧರಣಿ ನಡೆಸಿ ನಮಗೆ ಮನವಿ ಸಲ್ಲಿಸಿದ್ದಾರೆ. ಖಾಸಗೀಕರಣದಿಂದ ರೈತರು ಮತ್ತು ಬಡವರಿಗೆ ಹೊರೆಯಾಗುವ ಇಂತಹ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಆಗ್ರಹ ಪಡಿಸಿದ ಮನವಿ ಪತ್ರವನ್ನು ಉನ್ನತಾಧಿಕಾರಿಗಳಿಗೆ ನೀಡಲಾಗುತ್ತದೆ .