ಅಂಜಲಿ ಹತ್ಯೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : May 22, 2024, 12:51 AM ISTUpdated : May 22, 2024, 12:52 AM IST
ಗೋಕಾಕ ತಾಲೂಕು ಗಂಗಾಮತಸ್ಥರ ಯುವಜನ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ಕುಮಾರಿ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಹುಬ್ಬಳ್ಳಿಯಲ್ಲಿ ನಡೆದ ಯುವತಿ ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕ ತಾಲೂಕು ಗಂಗಾಮತಸ್ಥರ ಯುವಜನ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿವಿಧಾನಸೌಧದಲ್ಲಿ ಮಂಗಳವಾರ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕಹುಬ್ಬಳ್ಳಿಯಲ್ಲಿ ನಡೆದ ಯುವತಿ ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಆರೋಪಿಗೆ ಕಠೀಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗೋಕಾಕ ತಾಲೂಕು ಗಂಗಾಮತಸ್ಥರ ಯುವಜನ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿವಿಧಾನಸೌಧದಲ್ಲಿ ಮಂಗಳವಾರ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಪ್ರತಿಭಾನ್ವಿತ ವಿದ್ಯಾರ್ಥಿಯಾದ ಕುಮಾರಿ ಅಂಜಲಿ ಅಂಬಿಗೇರ ಅವಳನ್ನು ಭೀಕರವಾಗಿ ಹತ್ಯೆ ಮಾಡಿರುವುದನ್ನು ಸಮಾಜವು ತೀವೃವಾಗಿ ಖಂಡಿಸುತ್ತದೆ. ಇದರಿಂದ ನಮ್ಮ ಸಮಾಜಕ್ಕೆ ತುಂಬಾಲರದಷ್ಟು ನಷ್ಟವಾಗಿದೆ. ಸಮಾಜದಲ್ಲಿ ಈ ರೀತಿ ಹಾಡುಹಗಲೇ ಕೊಲೆಯಾಗುತ್ತಿರುವುದು ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಆರೋಪಿಗೆ ಉಗ್ರವಾದ ಮತ್ತು ಕಠಿಣ ಶಿಕ್ಷೆ ವಿಧಿಸದೇ ಇದ್ದಲ್ಲಿ ಉತ್ತೇಜನ ನೀಡಿದಂತಾಗುತ್ತದೆ. ಆರೋಪಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ವಿಧಿಸಬೇಕು. ಹತ್ಯೆಗಿಡಾದ ವಿದ್ಯಾರ್ಥಿ ಕುಟುಂಬ ಅತ್ಯಂತ ಕಡುಬಡತನ ಕುಟುಂಬವಾಗಿದ್ದು ಅವರಿಗೆ ₹1 ಕೋಟಿ ಪರಿಹಾರದೊಂದಿಗೆ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಗೋಕಾಕ ತಾಲೂಕು ಗಂಗಾಮತಸ್ಥರ ಯುವಜನ ಸಂಘ ತಾಲೂಕು ಅಧ್ಯಕ್ಷ ಎಂ.ಎಲ್.ತಳವಾರ, ಕಾರ್ಯದರ್ಶಿ ಲಕ್ಷ್ಮಣ ಯಮಕನಮರಡಿ, ಮೂಡಲಗಿ ತಾಲೂಕು ಅಧ್ಯಕ್ಷ ಕಾಶಪ್ಪ ಕೋಣಿ, ಕೊಣ್ಣೂರ ಪಟ್ಟಣ ಅಧ್ಯಕ್ಷ ಸುನೀಲ ಜಾಡಾಗೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ ಪಾಟೀಲ, ಮುಖಂಡರುಗಳಾದ ಬಸವರಾಜ ಮುತ್ಯಾಗೋಳ, ರಾಜು ಮುಂಡಾಶಿ, ಆನಂದ ಹಿರೇಹೊಳಿ, ಹನಮಂತ ಕಾಳಮ್ಮನಗುಡಿ, ಲಕ್ಷ್ಮಣ ಮಿಶಾಳೆ, ಕಲ್ಲನಾಥ ಪೂಜಾರಿ, ಯಲ್ಲವ್ವ ಕಾನೂರಿ, ತಮ್ಮಣ್ಣ ಚಿಗರಿ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳಾದ ಆನಂದ ಪಾಟೀಲ, ಸಂಜು ಚಿಪ್ಪಲಕಟ್ಟಿ, ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ಸುರೇಶ ಪತ್ತಾರ, ರಾಜೇಶ್ವರಿ ಒಡೆಯರ ಇದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ