ಕಾರವಾರ: ಮಾಜಾಳಿ ಅಬಕಾರಿ ಚೆಕ್ ಪೋಸ್ಟ್ ಬಳಿ ಲಾರಿ ಚಾಲಕನ ಮೇಲೆ ಅಬಕಾರಿ ಸಿಬ್ಬಂದಿ ಹಲ್ಲೆ ಘಟನೆ ಖಂಡಿಸಿ ಸೋಮವಾರ ಮಾಜಾಳಿಯ ಅಬಕಾರಿ ಚೆಕ್ ಪೋಸ್ಟ್ ಬಳಿ ಲಾರಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಅಬಕಾರಿ ನಿರೀಕ್ಷಕ ಸದಾಶಿವ ಕೊರ್ತಿ ಮತ್ತು ಗಾರ್ಡ್ ಹೇಮಚಂದ್ರ ಅವರನ್ನು ಅಮಾನತು ಮಾಡಿ, ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಲಾರಿ ಮಾಲೀಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ, ವಿನಾಕಾರಣ ಅಬಕಾರಿ ಸಿಬ್ಬಂದಿ ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ್ದು ಸರಿಯಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಗಡಿಯಲ್ಲಿ ಅಬಕಾರಿ ಚೆಕ್ ಪೋಸ್ಟ್ ತೆರವು ಮಾಡಬೇಕು ಎಂದು ಸರ್ರಕಾ ಈಗಾಗಲೇ ಆದೇಶ ಮಾಡಿದೆ. ಗೋವಾದಲ್ಲೂ ಚೆಕ್ ಪೋಸ್ಟ್ ಇಲ್ಲ. ಕರ್ನಾಟಕದ ಮಾಜಾಳಿಯಲ್ಲಿ ಚೆಕ್ ಪೋಸ್ಟ್ ಈಗಲೂ ಕಾರ್ಯನಿರ್ವಹಿಸುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಅಮಾಯಕ ಲಾರಿ ಚಾಲಕರಿಂದ ಹಣ ವಸೂಲಿ ಮಾಡಲು, ಚೆಕ್ ಪೋಸ್ಟ್ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ತಪ್ಪಿತಸ್ಥ ಅಬಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಆಗದೇ ಇದ್ದರೇ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನಾಕಾರರು ಅಬಕಾರಿ ಉಪ ಆಯುಕ್ತ ಜಗದೀಶ ಹಾಗೂ ತಹಸೀಲ್ದಾರ್ ನಿಶ್ಚಲ ನರೋನ ಅವರಿಗೆ ಮನವಿ ನೀಡದರು. ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಮಣಿ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಗೋವಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರು, ಹಲ್ಲೆಗೆ ಒಳಗಾದ ಲಾರಿ ಚಾಲಕ ಕುಮಾರ್, ಲಾರಿ ಮತ್ತು ಟಿಪ್ಪರ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಗಣಪತಿ ನಾಯಕ ಮೂಲಿಮನೆ ಪ್ರತಿಭಟನೆಯಲ್ಲಿ ಭಾಗಿದ್ದರು.ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಜನಾಂದೋಲನ ಅಗತ್ಯಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕು ಎಂಬ ಬೇಡಿಕೆ ಧನಾತ್ಮಕವಾಗಿ ಕೇಳಿಬರುತ್ತಿದೆ. ಹೋರಾಟದ ಕುರಿತು ಘಟ್ಟದ ಮೇಲಿನ ಎಲ್ಲ ತಾಲೂಕುಗಳ ಜನರ ಹೃದಯ ತಟ್ಟುವ ಕೆಲಸ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ರಿಸೋರ್ಸ್ ಫಾರ್ ಕ್ರಿಯೆಟಿವ್ ಡೆಮಾಕ್ರಸಿ ಸಂಸ್ಥೆಯ ಕೃಷ್ಣಮೂರ್ತಿ ಪನ್ನೆ ತಿಳಿಸಿದರು.