ಬಿಜೆಪಿಯವರ ಪಾದಯಾತ್ರೆ ವಿರೋಧಿಸಿ ಪ್ರತಿಭಟನೆ

KannadaprabhaNewsNetwork | Published : Aug 6, 2024 12:38 AM

ಸಾರಾಂಶ

ರಾಜ್ಯಪಾಲರು ದ್ವೇಷದ ರಾಜಕಾರಣಕ್ಕೆ ಒಳಗಾಗದೇ ಸಿದ್ದರಾಮಯ್ಯ ಅವರಿಗೆ ನೀಡಿದ ನೋಟಿಸ್‌ನ್ನು ಹಿಂಪಡೆಯಬೇಕು. ಈ ಹಿನ್ನೆಲೆಯಲ್ಲಿ ಆ.6 ರಂದು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರುವ ಬಿಜೆಪಿಯವರ ಪಾದಯಾತ್ರೆ ಹಾಗೂ ರಾಜ್ಯಪಾಲರ ಏಕಪಕ್ಷೀಯ ನಿರ್ಧಾರ ವಿರೋಧಿಸಿ ನಡೆಯುವ ಹೋರಾಟವನ್ನು ಬೆಂಬಲಿಸಲು ಮುದ್ದೇಬಿಹಾಳ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಚ್ಚರಿಕೆ ನೀಡಲಾಗುವುದು ಎಂದು ತಾಲೂಕು ಕುರುಬರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ರಾಜ್ಯಪಾಲರು ದ್ವೇಷದ ರಾಜಕಾರಣಕ್ಕೆ ಒಳಗಾಗದೇ ಸಿದ್ದರಾಮಯ್ಯ ಅವರಿಗೆ ನೀಡಿದ ನೋಟಿಸ್‌ನ್ನು ಹಿಂಪಡೆಯಬೇಕು. ಈ ಹಿನ್ನೆಲೆಯಲ್ಲಿ ಆ.6 ರಂದು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರುವ ಬಿಜೆಪಿಯವರ ಪಾದಯಾತ್ರೆ ಹಾಗೂ ರಾಜ್ಯಪಾಲರ ಏಕಪಕ್ಷೀಯ ನಿರ್ಧಾರ ವಿರೋಧಿಸಿ ನಡೆಯುವ ಹೋರಾಟವನ್ನು ಬೆಂಬಲಿಸಲು ಮುದ್ದೇಬಿಹಾಳ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಚ್ಚರಿಕೆ ನೀಡಲಾಗುವುದು ಎಂದು ತಾಲೂಕು ಕುರುಬರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿಯ ಸಮೀಪದ ಪಲ್ಲವಿ ಹೋಟೆಲ್‌ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೋಟಿಸ್ ನೀಡಿರುವುದು ಕೇಂದ್ರ ಸರ್ಕಾರದ ರಾಜಕೀಯ ಪಿತೂರಿಯಾಗಿದೆ. ಮಾತ್ರವಲ್ಲದೇ ಒಬ್ಬ ಹಿಂದುಳಿದ ನಾಯಕ ಬೆಳೆಯಬಾರದು, ಹೇಗಾದರೂ ಮಾಡಿ ಇವರನ್ನು ಸಿಎಂ ಸ್ಥಾನದಿಂದ ಕೆಳಗಿಸಬೇಕೆಂಬ ಉದ್ದೇಶ ಅಡಗಿದೆ. ಕಾರಣ ಬಿಜೆಪಿಯವರ ಹೋರಾಟವನ್ನುತಾಲೂಕು ಎಲ್ಲ ಹಿಂದುಳಿದ ಅಹಿಂದ ವರ್ಗದ ಸಮಾಜ ಬಾಂಧವರು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಬಿ.ಕೆ.ಬಿರಾದಾರ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪಾರ್ವತಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆನ್ನಲಾದ ಸೈಟ್ ವಿಚಾರವಾಗಿ ಅಪರಾಧ ಹಿನ್ನೆಲೆಯ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಿಂ ಮನವಿ ಮೇರೆಗೆ ರಾಜ್ಯಪಾಲರು ಕೂಲಂಕುಷವಾಗಿ ಪರಿಶೀಲಿಸದೇ ನೋಟಿಸ್ ನೀಡಿದ್ದಾರೆ. ತನಿಖೆ ನಂತರ ನೋಟಿಸ್ ನೀಡಿದ್ದರೇ ನಾವು ಅದಕ್ಕೊಂದು ಅರ್ಥ ಇರುತ್ತಿತ್ತು. ಆದರೆ, ತನಿಖೆ ಮಾಡದೇ ರಾಜ್ಯಪಾಲರು ಏಕಾಏಕಿ ಒಬ್ಬ ಹಿಂದುಳಿದ ವರ್ಗದ ರಾಜಕೀಯ ನಾಯಕ ನೋಟಿಸ್ ನೀಡುವ ಮೂಲಕ ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.ಕರ್ನಾಟಕದ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಅಧಿಕಾರ ಕೈ ತಪ್ಪಿ ಹೋದ ಕಡೆಗಳಲ್ಲಿ ಬಿಜೆಪಿ ವಾಮ ಮಾರ್ಗದ ಮೂಲಕ ಅಧಿಕಾರ ಪಡೆಯುವಯತ್ನ ನಡೆಸುವುದು ಸಾಮಾನ್ಯವಾಗಿದೆ. ಅದರಂತೆ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಸಿದ್ದರಾಮಯ್ಯಗೆ ನೋಟಿಸ್ ನೀಡಿದೆ. ಈ ನೋಟಿಸ್ ವಾಪಸ್ ಪಡೆಯಬೇಕು. ಇಲ್ಲದಿದ್ದರೇ ರಾಜ್ಯದಾದ್ಯಂತ ಎಲ್ಲ ಹಿಂದುಳಿದ ಅಹಿಂದಾ ಜನಾಂಗವದರು ಒಗ್ಗಟ್ಟಾಗಿ ಬೆಂಗಳೂರಿಗೆ ತೆರಳಿ ರಾಜ್ಯಭವನಕ್ಕೆ ಮುತ್ತಿಗೆ ಹಾಕುವ ಮೂಲಕ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕುರುಬ ಸಮಾಜ ಬಿ.ಕೆ.ಬಿರಾದಾರ, ವೈ.ಎಚ್.ವಿಜಯಕರ್, ದಾದಾ ಎತ್ತಿನಮನಿ, ಮಹಾದೇವ ಪೂಜಾರಿ, ಸುರೇಶ್ ಹಳೆಮನಿ, ಮಲ್ಲಣ್ಣ ಕೆಸರಟ್ಟಿ, ಬಸವರಾಜ ಶಿರೋಳ, ಬಿ.ಕೆ.ಬಿರಾದಾರ, ಮುನ್ನಪ್ಪ ಸಗರ, ಸಂತೋಷ ನಾಯ್ಕೋಡಿ, ಸಂಗಪ್ಪ ಮೇಲಿನಮನಿ, ಬಸ್ಸಪ್ಪ ಮೇಟಿ, ಹಣಮಂತ ಜಟ್ಟಗಿ, ಪುತರಪ್ಪ ಹೊಸೂರು ಸೇರಿದಂತೆ ಮತ್ತಿತರರು ಇದ್ದರು.

Share this article