ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಸರ್ಕಾರದ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿ ಇಲ್ಲ. ಈಗಾಗಲೇ ಕಳೆದ ೩೦ ವರ್ಷಗಳಿಂದ ಕಾಂಗ್ರೆಸ್ ಪಕ್ಷವು ತನ್ನ ಹಿಡಿತದಲ್ಲಿ ಮಹಿಳೆಯರ ಮೀಸಲಾತಿಯಲ್ಲಿ ನಿಷೇಧ ಹೇರಿಕೊಂಡು ಬರುತ್ತಿರುವುದು ಸರಿಯಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿಯವರು ರಾಷ್ಟ್ರದ ಪ್ರಧಾನಿಯಾಗಿದ್ದರೂ ಅಂದಿನಿಂದ ಇಂದಿನವರೆಗೂ ಯಾರೂ ಕೂಡ ಪ್ರಧಾನಿಗಳಾಗಲಿ ಮುಖ್ಯಮಂತ್ರಿಗಳಾಗಲಿ ಆಗಿರುವುದಿಲ್ಲ. ಇದನ್ನು ಕಾಂಗ್ರೆಸ್ ಸರ್ಕಾರ ಅರಿತುಕೊಳ್ಳಬೇಕು. ಮಹಿಳೆಯರ ಹಕ್ಕು ಬದ್ಧತೆಗೆ ಮೀಸಲಾತಿಗೆ ಕಾಂಗ್ರೆಸ್ ಸರ್ಕಾರದ ನಿಷೇಧ ಧೋರಣೆ ಸರಿ ಇಲ್ಲ. ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಮಾಡಿರುವ ಮೀಸಲಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಇಲ್ಲದೆ ಹೋದ ಪಕ್ಷದಲ್ಲಿ ಮಹಿಳಾ ಸಂಘಟನೆಗಳಿಂದ ರಾಷ್ಟ್ರಾದ್ಯಂತ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರಾಷ್ಟ್ರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿದ್ದ ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿರುವ ಖಂಡಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ಜನ ಆಕ್ರೋಶ ಮಹಿಳಾ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಪಟ್ಟಣದ ಕೆ. ಆರ್. ಸರ್ಕಲ್‌ನಲ್ಲಿ ಭಾರತೀಯ ಜನತಾಯ ಪಾರ್ಟಿ ಶ್ರವಣಬೆಳಗೊಳ ಕ್ಷೇತ್ರದ ಮಂಡಲ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಬಾರಿ ಶಕ್ತಿ ಪೂರಂ ಜನ ಆಕ್ರೋಶ ಮಹಿಳೆಯರ ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮುಖಂಡೆ ಶೃತಿ ಗಿರೀಶ್ ಮಾತನಾಡಿ, ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿರುವುದನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿರೋಧಿಸುತ್ತಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪಕ್ಷದ ಮಹಿಳೆಯರಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ಲೋಕಸಭೆ ವಿಧಾನಸಭೆ ರಾಜ್ಯಸಭೆ ವಿವಿಧ ಚುನಾವಣೆಯ ಪ್ರಕ್ರಿಯೆಯಲ್ಲಿ ಶೇಕಡ ೨೦ರಷ್ಟು ಮಹಿಳಾ ಒಳ ಮೀಸಲಾತಿಯನ್ನು ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ ರಾಜ್ಯದಲ್ಲಿ ಮೀಸಲಾತಿಯನ್ನು ವಿರೋಧಿಸುತ್ತಿದೆ. ಇದರಿಂದ ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಸರ್ಕಾರದ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿ ಇಲ್ಲ. ಈಗಾಗಲೇ ಕಳೆದ ೩೦ ವರ್ಷಗಳಿಂದ ಕಾಂಗ್ರೆಸ್ ಪಕ್ಷವು ತನ್ನ ಹಿಡಿತದಲ್ಲಿ ಮಹಿಳೆಯರ ಮೀಸಲಾತಿಯಲ್ಲಿ ನಿಷೇಧ ಹೇರಿಕೊಂಡು ಬರುತ್ತಿರುವುದು ಸರಿಯಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿಯವರು ರಾಷ್ಟ್ರದ ಪ್ರಧಾನಿಯಾಗಿದ್ದರೂ ಅಂದಿನಿಂದ ಇಂದಿನವರೆಗೂ ಯಾರೂ ಕೂಡ ಪ್ರಧಾನಿಗಳಾಗಲಿ ಮುಖ್ಯಮಂತ್ರಿಗಳಾಗಲಿ ಆಗಿರುವುದಿಲ್ಲ. ಇದನ್ನು ಕಾಂಗ್ರೆಸ್ ಸರ್ಕಾರ ಅರಿತುಕೊಳ್ಳಬೇಕು. ಮಹಿಳೆಯರ ಹಕ್ಕು ಬದ್ಧತೆಗೆ ಮೀಸಲಾತಿಗೆ ಕಾಂಗ್ರೆಸ್ ಸರ್ಕಾರದ ನಿಷೇಧ ಧೋರಣೆ ಸರಿ ಇಲ್ಲ. ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಮಾಡಿರುವ ಮೀಸಲಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಇಲ್ಲದೆ ಹೋದ ಪಕ್ಷದಲ್ಲಿ ಮಹಿಳಾ ಸಂಘಟನೆಗಳಿಂದ ರಾಷ್ಟ್ರಾದ್ಯಂತ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಅರ್ಪಿತ ಪಟೇಲ್, ಸವಿತ ನಾಗರಾಜು, ಕಲ್ಪನಾ, ಭವಾನಿ, ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಗನ್ನಿ, ಮುಖಂಡರಾದ ನಂಜುಂಡ ಮೈಮ್, ಕೇಶವ, ಶರತ್, ವೆಂಕಟೇಶಚಾರ್, ಅಶೋಕ್ ಶೆಟ್ಟಿಹಳ್ಳಿ ಇನ್ನು ಮುಂತಾದವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.