ಟಿ.ಸಿ.ಗಳ ಸಮರ್ಪಕ ಪೂರೈಕೆ ವಿಳಂಬ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jan 16, 2025, 12:45 AM IST
15ಜೆ.ಎಲ್‍.ಆರ್. ಚಿತ್ರ 1) : ಜಗಳೂರಿನಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ ಟಿಸಿ ವಿತರಣೆ ವಿಳಂಬ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ  ಮತ್ತು ಹಸಿರು ಸೇನೆ ವತಿಯಿಂದ ಬೆಸ್ಕಾಂ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ರೈತರ ಸುಟ್ಟಿರುವ ಟ್ರಾನ್ಸ್‌ಫಾರ್ಮರ್‌ (ಟಿಸಿ)ಗಳ ಸ್ವೀಕರಿಸಿ, ಅವುಗಳ ಬದಲಿಗೆ ಅದೇ ಸಾಮರ್ಥ್ಯದ ಹೊಸ ಟಿ.ಸಿ.ಗಳ ವಿತರಿಸಲು ವಿಳಂಬ ಮಾಡುತ್ತಿರುವ ಬೆಸ್ಕಾಂ ಎಇಇ ಸುಧಾಮಣಿ ಸೇರಿದಂತೆ ವಿಭಾಗೀಯ ಅಧಿಕಾರಿಗಳ ವಿರುದ್ಧ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹು.ಮಂಜುನಾಥ್ ಬಣ) ಜಗಳೂರು ಘಟಕ ವತಿಯಿಂದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಯಿತು.

- ಜಗಳೂರು ತಾಲೂಕು ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಬೆಸ್ಕಾಂಗೆ ಮುತ್ತಿಗೆ- - - ಕನ್ನಡಪ್ರಭ ವಾರ್ತೆ ಜಗಳೂರು

ರೈತರ ಸುಟ್ಟಿರುವ ಟ್ರಾನ್ಸ್‌ಫಾರ್ಮರ್‌ (ಟಿಸಿ)ಗಳ ಸ್ವೀಕರಿಸಿ, ಅವುಗಳ ಬದಲಿಗೆ ಅದೇ ಸಾಮರ್ಥ್ಯದ ಹೊಸ ಟಿ.ಸಿ.ಗಳ ವಿತರಿಸಲು ವಿಳಂಬ ಮಾಡುತ್ತಿರುವ ಬೆಸ್ಕಾಂ ಎಇಇ ಸುಧಾಮಣಿ ಸೇರಿದಂತೆ ವಿಭಾಗೀಯ ಅಧಿಕಾರಿಗಳ ವಿರುದ್ಧ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹು.ಮಂಜುನಾಥ್ ಬಣ) ಜಗಳೂರು ಘಟಕ ವತಿಯಿಂದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಸಂಘದ ತಾಲೂಕಾಧ್ಯಕ್ಷ ಚಿರಂಜೀವಿ ಮಾತನಾಡಿ, ತಾಲೂಕಿನಲ್ಲಿ 40ಕ್ಕೂ ಹೆಚ್ಚು ಟಿ.ಸಿ.ಗಳು ಸುಟ್ಟಿವೆ. ಈ ಬಗ್ಗೆ ಎಇಇ ಗಮನಕ್ಕೆ ತರಲಾಗಿದೆ. ಆದರೂ ರೈತರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ತಕ್ಷಣವೇ ಹೊಸ ಟಿ.ಸಿ.ಗಳನ್ನು ಕೊಡಲು ಅವಕಾಶವಿದ್ದರೂ, ಸ್ಪಂದಿಸದೇ ರೈತರನ್ನು ಕಚೇರಿಗೆ ಪದೇಪದೇ ಅಲೆದಾಡಿಸುತ್ತಾರೆ. ಆಗ ಬಾ, ಈಗ ಬಾ ಎಂದು ಸಬೂಬು ಹೇಳುತ್ತಾರೆ. ರೈತರು ಕಚೇರಿಗೆ ಸುತ್ತಾಡಿ ಸುಸ್ತಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟ್ರಾನ್ಸ್‌ಫಾರ್ಮರ್‌ ಸುಟ್ಟು ವಾರಗಳಾದರೆ ಬೆಳೆದ ಬೆಳೆಗಳ ಗತಿ ಏನು? ಫಲಕ್ಕೆ ಬಂದ ಬೆಳೆ ಹಾನಿಯಾದರೆ ರೈತರಿಗೆ ಮಾತ್ರ ನಷ್ಟವಾಗುವುದಿಲ್ಲ. ದೇಶಕ್ಕೂ ನಷ್ಟವಾಗಲಿದೆ. ಎಲ್ಲ ಸಮಸ್ಯೆಗಳಿಗೆ ಬೆಸ್ಕಾಂ ಅಧಿಕಾರಿಗಳೇ ನೇರ ಹೊಣೆ ಎಂದರು.

ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಜು ಬೈರನಾಯಕನಹಳ್ಳಿ ಮಾತನಾಡಿ, ಮಳೆಗಾಲ, ಚಳಿಗಾಲು ಮುಗಿದು ಬೇಸಿಗೆ ಆರಂಭವಾಗಲಿದೆ. ಆದರೆ ಈಗಲೇ ಕೃಷಿ ಪಂಪ್‍ಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಮನಸ್ಸಿಗೆ ಬಂದಂತೆ ವಿದ್ಯುತ್ ನೀಡಲಾಗುತ್ತಿದೆ. ರೈತರ ನೋವಿಗೆ ಸ್ಪಂದಿಸದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ರೈತ ಗುರುಸಿದ್ದಾಪುರ ಶಿವರಾಜ್ ಮಾತನಾಡಿ, ಅಕ್ರಮ-ಸಕ್ರಮಕ್ಕೆ ಹಣ ಕಟ್ಟಿ ಐದು ವರ್ಷಗಳಾಗಿವೆ. ಸಿನಿಯಾರಿಟಿಯಲ್ಲಿ 22ರಲ್ಲಿದ್ದರೂ ಈವರೆಗೂ ಕೆಲಸ ಮಾಡಿಲ್ಲ. ಹಣ ಕೊಟ್ಟು ಪ್ರಭಾವ ಬಳಸಿದವರಿಗೆ ತಕ್ಷಣವೇ ಅಕ್ರಮ ಸಕ್ರಮ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ದೂರಿದರು.

ಸಂಘದ ಗೌಡಗೊಂಡನಹಳ್ಳಿ ಸತೀಶ್, ತಿಪ್ಪೇಸ್ವಾಮಿ, ಪರಶುರಾಮ, ರೈತರಾದ ಅಜ್ಜಯ್ಯ ಸೂರಗೊಂಡನಹಳ್ಳಿ, ಅಜ್ಜಪ್ಪ ಮರಿಕುಂಟೆ, ಪ್ರಸನ್ನಕುಮಾರ್, ಹನುಮಂತಪ್ಪ ಸಿದ್ದಯ್ಯನಕೋಟೆ, ರವಿ ಗುರುಸಿದ್ದಾಪುರ, ಬಸವರಾಜ್ ಕಾಟೇನಹಳ್ಳಿ ಇತರರು ಪಾಲ್ಗೊಂಡಿದ್ದರು.

- - - -15ಜೆ.ಎಲ್‍.ಆರ್.1:

ಜಗಳೂರಿನಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ ಟಿಸಿ ವಿತರಣೆ ವಿಳಂಬ ಖಂಡಿಸಿ, ಬುಧವಾರ ರೈತ ಸಂಘಟನೆಗಳಿಂದ ಬೆಸ್ಕಾಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ಫೋಸಿಸ್‌ನಿಂದ ಸರ್ಕಾರಿ ಜಾಗ ಮಾರಾಟ?: ನೆಟ್ಟಿಗರಿಂದ ತರಾಟೆ
5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು