ಕನ್ನಡಪ್ರಭ ವಾರ್ತೆ ಹಾವೇರಿ
ಸ್ಥಳೀಯ ಇಜಾರಿ ಲಕಮಾಪುರದ ನೇತಾಜಿ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ. ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಈ ವರೆಗೂ ಹಾಸ್ಟೆಲ್ ಅರ್ಜಿ ಆಹ್ವಾನಿಸದಿರುವುದು ರಾಜ್ಯ ಸರ್ಕಾರದ ಮಹಾ ದ್ರೋಹವನ್ನು ತೀವ್ರವಾಗಿ ಖಂಡಿಸುತ್ತೇವೆ. ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡುವುದನ್ನು ಕೈ ಬಿಡಬೇಕು, ಹಾಸ್ಟೆಲ್ ಅರ್ಜಿ ಹಾಕಿದ ಎಲ್ಲರಿಗೂ ವಸತಿ ಸೌಲಭ್ಯವನ್ನು ಸರ್ಕಾರಗಳು ಒದಗಿಸಬೇಕು. ಬಸ್ಸಿನ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ತಿಂಗಳು ಕಳೆಯುತ್ತ ಬಂದರೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳ ಮೂಲಕ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕ-ಬಾಲಕಿಯರ ವಸತಿ ನಿಲಯಗಳಲ್ಲಿ ಸಾವಿರಾರು ಸೀಟುಗಳು ಖಾಲಿ ಇದ್ದರೂ ಕರೆಯದೆ ನಿರ್ಲಕ್ಷ್ಯ ತೋರಿದ್ದಾರೆ. ಈ ವರೆಗೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಅರ್ಜಿ ಆಹ್ವಾನಿಸುವಲ್ಲಿ ಸರ್ಕಾರ ಮತ್ತು ಇಲಾಖೆಗಳು ವಿಫಲವಾಗಿದ್ದು, ಈ ವಿಳಂಬ ನೀತಿಯನ್ನು ಎಸ್‌ಎಫ್‌ಐ ಹಾವೇರಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಅರುಣ್ ಆರೇರ್, ಸುಲೇಮಾನ್ ಮತ್ತಿಹಳ್ಳಿ, ಶ್ರೀನಿವಾಸ ವಡ್ತೇರ್, ರಾಜು ವಿ., ಯಶವಂತ ಲಮಾಣಿ, ನಾಗರಾಜ ಎಲ್., ಹೇಮಂತ್ ಲಮಾಣಿ, ಪವಿತ್ರಾ, ಕಾವ್ಯ, ಸೌಮ್ಯಾ ಕಲ್ಲನಗೌಡ್ರು, ಪ್ರಿಯಾಂಕಾ ಹಿರೇಮಠ, ಸಲ್ಮಾ ಜಾತಗೇರ್, ಪೂಜಾ ಎಂ.ಬಿ., ನೇತ್ರಾ ಬೂದನೂರ, ಲಕ್ಷ್ಮೀ ಕುಂಬಾರ ಇತರರು ಇದ್ದರು.