ಕನಕಪುರ: ಮಾಜಿ ಶಾಸಕ ಎನ್.ಮಹೇಶ್ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಭಾಷಣ ಮಾಡುವಾಗ ಸವಿತಾ ಸಮಾಜದ ಪದ ಬಳಸಿ ಅಪಮಾನಿಸಿದ್ದಾರೆ ಎಂದು ಆರೋಪಿಸಿ ನಗರದ ಚನ್ನಬಸಪ್ಪ ವೃತ್ತದಲ್ಲಿ ತಾಲೂಕು ಭಜಂತ್ರಿ ಸವಿತಾ ಸಮಾಜದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕರುನಾಡ ಯುವ ಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಯಾವುದೇ ರಾಜಕೀಯ ಮುಖಂಡರು ಮಾತನಾಡುವಾಗ ತಮ್ಮ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಬೇಕು. ಯಾವುದೇ ಜಾತಿ ಧರ್ಮಕ್ಕೆ ನೋವಾಗುವ ರೀತಿ ಮಾತನಾಡಬಾರದು. ನಿಮ್ಮ ಮಾತಿನಿಂದ ಇಡೀ ಸಮುದಾಯಕ್ಕೆ ಮಾನಸಿಕವಾಗಿ ನೋವುಂಟಾಗಿದೆ. ನಮ್ಮ ಸಮುದಾಯದ ಮೇಲೆ ದಬ್ಬಾಳಿಕೆ ಮಾಡುವುದನ್ನು ರಾಜಕೀಯ ನಾಯಕರು ನಿಲ್ಲಿಸಬೇಕು. ಕಾನೂನಿನಲ್ಲಿ ಬದಲಾವಣೆ ತಂದು ಹೀಗೆ ಜಾತಿ ನಿಂದನೆ ಮಾಡುವ ಯಾವುದೇ ವ್ಯಕ್ತಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಜಂತ್ರಿ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಶಿವರಾಮಣ್ಣ, ಕನಕಪುರ ಟೌನ್ ಅಧ್ಯಕ್ಷ ಚನ್ನಗಿರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ್, ನಗರ ಕಾರ್ಯದರ್ಶಿ ರಮೇಶ್ ಅಗರ, ತಾಲೂಕು ಖಜಾಂಚಿ ಎಲ್.ಎನ್. ರವಿ, ಖಜಾಂಚಿ ರಾಮಸ್ವಾಮಿ, ಗೌರವಾಧ್ಯಕ್ಷರಾದ ವರದರಾಜು, ಶ್ರೀನಿವಾಸ ಜಕ್ಕಸಂದ್ರ, ವೆಂಕಟೇಶ್ ಮೂರ್ತಿ,ವೈರಮುಡಿ, ಕೆ.ವಿ.ಮಂಜು, ತಾಲೂಕಿನ ಕೋಡಿಹಳ್ಳಿ ಹೋಬಳಿ, ಹುಣಸನಹಳ್ಳಿ, ದೊಡ್ಡಆಲಹಳ್ಳಿ, ಸಾತನೂರು, ಕಬ್ಬಾಳು ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಸವಿತಾ ಸಮಾಜದ ಸದಸ್ಯರು ಭಾಗವಹಿಸಿದ್ದರು.ಕೆ ಕೆ ಪಿ ಸುದ್ದಿ 03:
ಮಾಜಿ ಸಚಿವ ಎನ್.ಮಹೇಶ್ ಭಾಷಣದಲ್ಲಿ ಸವಿತಾ ಸಮಾಜದ ಪದ ಬಳಸಿರುವುದನ್ನು ವಿರೋಧಿಸಿ ಕನಕಪುರ ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.