ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆಯಾಗಿದ್ದರೂ ಅದು ತೀವ್ರತೆಯಿಂದ ಕೂಡಿಲ್ಲ ಎಂದರು.
ಸರ್ಕಾರ ಕ್ರಮ ಕೈಗೊಳ್ಳಬೇಕುನವಂಬರ್ನಿಂದ ಪೆಬ್ರವರಿ ವರೆಗೂ ಈ ವೈರಸ್ ಪ್ರಭಾವ ಬೀರಲಿದೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ನಿಗಾವಹಿಸಲಿ. ಕಾಲಕಾಲಕ್ಕೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ನಮ್ಮ ಅವಧಿಯಲ್ಲಿ ತಜ್ಞರ ಸಮಿತಿ ಇತ್ತು. ಅದೇ ಸಮಿತಿ ಈಗಲೂ ಇರಬಹುದು. ಆ ಸಮಿತಿಗೆ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಸೇರಿಕೊಂಡು, ಅವರಿಂದಲೇ ಸಲಹೆ ಪಡೆದು ಕ್ರಮಕ್ಕೆ ಮುಂದಾಗಲಿ ಎಂದರು. ಹೆಚ್ ಎಂ ಪಿ ವಿ ವೈರಸ್ ಅನ್ನು ನಿರ್ಲಕ್ಷ್ಯ ಮಾಡದೆ, ಕೊರೊನಾ ರೀತಿ ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ರಾಜ್ಯ ಸರ್ಕಾರ ಸಹ ಸೂಕ್ತ ಮುಂಜಾಗೃತಾ ಕ್ರಮ ಕೈಗೊಂಡು, ತಕ್ಷಣ ಟಾಸ್ಕ್ ಪೊರ್ಸ್ ಸಮಿತಿಗಳನ್ನು ಮಾಡಬೇಕು. ಈಗ ಚಳಿಗಾಲ ಆಗಿರುವುದರಿಂದ ಈ ಅವಧಿಯಲ್ಲಿ ಎಚ್ ಎಂ ಪಿ ವಿ ವೈರಸ್ ಹೆಚ್ಚು ಬಾಧಿಸಲಿದೆ. ವಯೋವೃದ್ದರು ಹಾಗೂ ಮಕ್ಕಳ ಮೇಲೆ ಕಾಳಜಿ ವಹಿಸಬೇಕು ಎಂದರು.
ಪ್ರತಿ ಆಸ್ಪತ್ರೆಯಲ್ಲೂ ಸಾದ್ಯವಾದಷ್ಟೂ ಐಸೋಲೇಷನ್ ಬೆಡ್ ನಿಗದಿ ಮಾಡಬೇಕು. ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ತಜ್ಞ ವೈದ್ಯರುಗಳ ಸಭೆ ನಡೆಸಿ, ಮಾರ್ಗ ಸೂಚಿಗಳನ್ನು ಸಿದ್ದಪಡಿಸಬೇಕು. ಮಾರ್ಗಸೂಚಿಗಳನ್ನ ಜನರಿಗೆ ತಲುಪುವಂತೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಮದ್ಯದಮಗಡಿಗಳಿಗೆ ಸರ್ಕಾರವೇ ಪರವಾನಗಿ ನೀಡಿದ್ದು, ಅದರೊಂದಿಗೆ ಮದ್ಯದಂಗಡಿಗಳ ಆದಾಯಕ್ಕಾಗಿ ಟಾರ್ಗೆಟ್ ನೀಡುತ್ತಾರೆ. ಇದರಿಂದ ಎತೇಚ್ಚವಾಗಿ ಮದ್ಯ ಮಾರಾಟವಾಗುತ್ತಿದೆ. ತಾವು ಶಾಸಕರಾಗಿದ್ದಾಗ ತಮ್ಮ ನಾಯಕನಹಳ್ಳಿ ಗೇಟ್ ನಲ್ಲಿ ಮದ್ಯದಂಗಡಿಗೆ ಅನುಮತಿ ನಿರಾಕರಿಸಿದ್ದೆ, ಆದರೆ ಈ ಸರ್ಕಾರ ಬಂದನಂತರ ಪರವಾನಗಿ ನೀಡಿದ್ದು, ಅಲ್ಲಿ ಕುಡಿದು ಗಲಾಟೆಯಾಗಿದ್ದರಿಂದಲೇ, ಚಿಕ್ಕಬಳ್ಳಾಪುರ ಇತಿಹಾಸದಲ್ಲೆ ನಡೆಯದ ಬರ್ಬರ ಕೊಲೆನಡೆಯಿತು ಎಂದು ಆರೋಪಿಸಿದರು.ನಾಯಕನಹಳ್ಳಿ ಗೇಟ್ ಮದ್ಯದಂಗಡಿ