ಬಸ್‌ ನಿಲ್ದಾಣದಲ್ಲಿ ಅಕ್ರಮ ಮಳಿಗೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Aug 23, 2025, 02:00 AM IST
ಅಕ್ರಮವಾಗಿ ಮಳಿಗೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಪ್ರತಿಭಟನೆ | Kannada Prabha

ಸಾರಾಂಶ

ತರೀಕೆರೆ, ಮಹಾತ್ಮಾಗಾಂಧಿ ಪಾರ್ಕ್ ಪಕ್ಕದ ಬಿ.ಆರ್.ನೀಲಕಂಠಪ್ಪರವರ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣದ ಜಾಗ ಅತಿಕ್ರಮ ಗೊಳಿಸಿ ವ್ಯಕ್ತಿಯೊಬ್ಬರು ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತರೀಕೆರೆ ತಾಲೂಕು ಘಟಕದಿಂದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ತರೀಕೆರೆ

ಮಹಾತ್ಮಾಗಾಂಧಿ ಪಾರ್ಕ್ ಪಕ್ಕದ ಬಿ.ಆರ್.ನೀಲಕಂಠಪ್ಪರವರ ಕೆಎಸ್.ಆರ್.ಟಿಸಿ ಬಸ್ ನಿಲ್ದಾಣದ ಜಾಗ ಅತಿಕ್ರಮ ಗೊಳಿಸಿ ವ್ಯಕ್ತಿಯೊಬ್ಬರು ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತರೀಕೆರೆ ತಾಲೂಕು ಘಟಕದಿಂದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಖಾಸಗಿ ಅಕ್ರಮವಾಗಿ ಮಳಿಗೆ ನಿರ್ಮಾಣ ಮಾಡುತ್ತಿದ್ದು ಮತ್ತು 2014-15ನೇ ಸಾಲಿನಲ್ಲಿ ಪುರಸಭೆ 2014-15ನೇ ಸಾಲಿನ ಪುರಸಭೆ ಅನುದಾನ ಹಾಗೂ ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ನಿಧಿಯಿಂದ ಮಾಜಿ ಶಾಸಕ ದಿ.ಬಿ.ಆರ್.ನೀಲಕಂಠಪ್ಪ ಸ್ಮರಣಾರ್ಥ ಕೆಎಸ್.ಆರ್.ಟಿಸಿ ನಿಲ್ದಾಣ ನಿರ್ಮಾಣ ಮಾಡಲಾಗಿದ್ದ ಬಸ್ ನಿಲ್ದಾಣವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸಿದ್ದರು. ಜನರ ಸಂರ್ಪ ವ್ಯವಸ್ಥೆಗೆ ನಿರ್ಮಿಸಲಾಗಿದ್ದ ಬಸ್‌ ನಿಲ್ದಾಣದಲ್ಲಿ ಗುತ್ತಿಗೆದಾರರು ಅಕ್ರಮವಾಗಿ ಗೋಡೌನ್ ಮತ್ತು ಮಳಿಗೆಗಳನ್ನು ನಿರ್ಮಿಸಿದ್ದಾರೆ.

ಅದೇ ರೀತಿ ತಾಲೂಕು ಕಚೇರಿ ಮುಂಭಾಗದಲ್ಲೂ 30ಕ್ಕಿಂತ ಹೆಚ್ಚು ಮಳಿಗೆಗಳನ್ನು ನಿರ್ಮಿಸಿದ್ದಾರೆ. ಈ ಮಳಿಗೆಗಳನ್ನು ಕೂಡಲೇ ತೆರವು ಮಾಡಲು ತಾಲೂಕು ಹಾಗೂ ಜಿಲ್ಲಾ ಆಡಳಿತಕ್ಕೆ ನಾವು ಆಗ್ರಹಿಸುತ್ತೇವೆ. ತೆರವು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿ ನಡೆಸಿರುವ ಭ್ರಷ್ಟಾಚಅರದ ವಿರುದ್ಧ ನಮ್ಮ ಸಂಘಟನೆ ಉಗ್ರ ಹೋರಾಟ ಮಾಡಲಿದೆ ಎಂದು ಪ್ರತಿಭಟನಾಕಾರರು ಹೇಳಿದರು.ಕರ್ನಾಟಕ ದಸಂಸ (ಅಂಬೇಡ್ಕರ್ ವಾದ) ತಾಲೂಕು ಪ್ರಧಾನ ಸಂಚಾಲಕ ಎಚ್.ಎಸ್.ರಾಜಪ್ಪ, ಮುಖಂಡರಾದ ಕುಡ್ಲೂರು ವಿಜಯಕುಮಾರ್, ರಂಗೇನಹಳ್ಳಿ ಸಿದ್ದಿಕ್, ಶಿವು, ಹೇಮಂತ್, ಶ್ಯಾಮ್, ವಿಜಯನಾಯ್ಕ, ಪರಮೇಶ್, ಕರ್ನಾಟಕ ದಸಂಸ ತರೀಕೆರೆ ಷಾಖೆ ಪದಾದಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.ಪುರಸಭೆ ಮುಖ್ಯಾಧಿಕಾರಿಗಳಿಗೆಸಿ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.22ಕೆಟಿಆರ್.ಕೆ.6ಃ

ತರೀಕೆರೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಪತ್ರ ಸಲ್ಲಿಸಲಾಯಿತು.

PREV

Recommended Stories

ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ
ವರದಾ-ಬೇಡ್ತಿ ನದಿ ಜೋಡಣೆ ಕೇಂದ್ರದ ಒಪ್ಪಿಗೆ: ಬೊಮ್ಮಾಯಿ