-ಲಂಬಾಣಿ, ಭೋವಿ, ಕೊರಜಿ, ಕೊರಮ ಸಮುದಾಯಗಳಿಗೆ ಅನ್ಯಾಯ: ಆರೋಪ
ಕನ್ನಡಪ್ರಭ ವಾರ್ತೆ ಯಾದಗಿರಿ
ಒಳಮೀಸಲಾತಿಯ ರೋಸ್ಟರ್ ಹಂಚಿಕೆಯಲ್ಲಿ ವ್ಯತ್ಯಾಸಗಳಾಗಿವೆ ಎಂದು ಆರೋಪಿಸಿ ಹಾಗೂ ಲಂಬಾಣಿ, ಭೋವಿ, ಕೊರಜಿ ಮತ್ತು ಕೊರಮ ಸಮುದಾಯಗಳಿಗೆ ಅನ್ಯಾಯ ಆಗಿದೆ ಎಂದು ದೂರಿ ನಗರದ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ, ವಿದ್ಯಾರ್ಥಿಗಳ ಸಮೂಹ ಹಾಗೂ ಭೋವಿ, ಕೊರಮ ಹಾಗೂ ಇತರೇ ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಬೃಹತ ಪ್ರತಿಭಟನೆ ನಡೆಯಿತು.ಬಂಜಾರ ಸಮಾಜದ ಮುಖಂಡರು ಮಾತನಾಡಿ, ಪ್ರಸ್ತುತ ಜಾರಿಗೆ ತರಲಾಗಿರುವ ಒಳಮೀಸಲಾತಿಯ ರೋಸ್ಟರ್ ಬಿಂದುಗಳ ಹಂಚಿಕೆ ಆವೈಜ್ಞಾನಿಕವಾಗಿದ್ದು, ಇದರಿಂದ ಸಮುದಾಯಗಳಿಗೆ ಘೋರ ಅನ್ಯಾಯವಾಗಿದೆ. ವಿವಿಧ ಇಲಾಖೆಗಳ ಗ್ರೂಪ್ -ಸಿ ಹುದ್ದೆಗಳ ನೇಮಕಾತಿ ಆದೇಶಗಳು ಹೊರ ಬಿದ್ದಿದ್ದರೂ, ರೋಸ್ಟರ್ ಲೋಪದೋಷಗಳಿಂದಾಗಿ ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಸಿಗಬೇಕಾದ ನ್ಯಾಯಸಮ್ಮತ ಹುದ್ದೆಗಳು ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಶಾಲಾ ಕಾಲೇಜುಗಳ ಪ್ರವೇಶಾತಿಯಲ್ಲೂ ವಿದ್ಯಾರ್ಥಿಗಳಿಗೆ ಶಾರತಮ್ಯವಾಗುತ್ತಿದ್ದು, ಉನ್ನತ ಶಿಕ್ಷಣದ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆಂದು ಆರೋಪಿಸಿದರು. ಪ್ರಸ್ತುತ ಜಾರಿಯಲ್ಲಿರುವ ಅವೈಜ್ಞಾನಿಕ ರೋಸ್ಟರ್ ಹಂಚಿಕೆಯನ್ನು ಶಕ್ಷಣವೇ ಕೈಬಿಟ್ಟು, ವೈಜ್ಞಾನಿಕ ಹಾಗೂ ನ್ಯಾಯಸಮ್ಮತವಾದ ಹೊಸ ರೋಸ್ಟರ್ ಪದ್ಧತಿಯನ್ನು ಜಾರಿಗೆ ತರಬೇಕು, ನಮ್ಮ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಯುತ ಮೀಸಲಾತಿ ಮತ್ತು ಉದ್ಯೋಗದ ಅವಕಾಶಗಳನ್ನು ಖಾತರಿಪಡಿಸಬೇಕೆಂದು ಮುಖಂಡರು ಒತ್ತಾ ಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಎಸಿಡಿ ರಮೇಶ ಕೋಲಾರ ಅವರಿಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಎಬಿಎಸ್ಎಸ್ ರಾಜ್ಯಾಧ್ಯಕ್ಷ ದೇವರಾಜ ನಾಯಕ, ಜಿಲ್ಲಾಧ್ಯಕ್ಷ ವಿನೋದ ನಾಯಕ, ಮುಖಂಡರಾದ ಜನಾರ್ಧನ ರಾಠೋಡ್. ಸುರೇಶ ರಾಠೋಡ್, ಬಂಗಾರು ರಾಠೋಡ್, ಮನೋಹರ ಪವಾರ, ಬಸವರಾಜ ಮುದ್ದಾಳ, ನಾಗಪ್ಪ ಬೆನಕಲ್, ಮೇಘನಾಥ ಚವ್ಹಾಣ, ರವಿ ಮುದ್ದಾಳ, ಯಂಕಪ್ಪ ರಾಠೋಡ್, ಗೋಪಾಲ ಗೌಡಗೇರಾ, ರಮೇಶ ಚವ್ಹಾಣ, ಗೋವಿಂದ ವಡ್ಡಳ್ಳಿ, ವಾಚು ನಾಯಕ, ಗೋವಿಂದ, ವಿಜಯ ಚಾಧವ್, ಜಯೇಂದ್ರ ಆನಂದ ಚವ್ಹಾಣ, ಬಲದೇವ ನಾಯಕ ಇದ್ದರು. ಫೋಟೊಒಳಮೀಸಲಾತಿಯ ರೋಸ್ಟರ್ ಹಂಚಿಕೆಯಲ್ಲಿ ವ್ಯತ್ಯಾಸಗಳಾಗಿವೆ ಎಂದು ಆರೋಪಿಸಿ ನಗರದ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ, ವಿದ್ಯಾರ್ಥಿಗಳ ಸಮೂಹ ಹಾಗೂ ಭೋವಿ, ಕೊರಮ ಹಾಗೂ ಇತರೇ ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಬೃಹತ ಪ್ರತಿಭಟನೆ ನಡೆಯಿತು.