ಕಮಲ್‌ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : May 30, 2025, 12:46 AM IST
ಗದಗ ಮಹಾತ್ಮ ಗಾಂಧಿ ವೃತ್ತದಲ್ಲಿ ಕಮಲ್‌ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಚಿತ್ರ ನಟ ಕಮಲ ಹಾಸನ್‌ ಹೇಳಿಕೆಯನ್ನು ಖಂಡಿಸಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಗದಗ: ಚಿತ್ರ ನಟ ಕಮಲ ಹಾಸನ್‌ ಹೇಳಿಕೆಯನ್ನು ಖಂಡಿಸಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷ ಶಿವಕುಮಾರ ಚ. ರಾಮನಕೂಪ್ಪ ಮಾತನಾಡಿ, ಚಿತ್ರನಟ ಕಮಲ್ ಹಾಸನ್ ಕನ್ನಡದ ವಿರೋಧಿ, ಕನ್ನಡ ಭಾಷೆಯ ಮಹತ್ವವನ್ನು ಲಘುವಾಗಿ ಕಾಣುವ ಭ್ರಾಂತಿಕರು. ತಮಿಳಿನಿಂದಲೇ ಕನ್ನಡ ಭಾಷೆ ಎಂಬ ಹೇಳಿಕೆ ನೀಡಿದ್ದು, ಅಪಮಾನಕಾರಿಯಾದ ಹೇಳಿಕೆಯಾಗಿದೆ. ಇಂತಹ ಮಾತುಗಳು ಕೇವಲ ಅಜ್ಞಾನವನ್ನು ಪ್ರತಿಬಿಂಬಿಸುವುದಿಲ್ಲ, ಬದಲಾಗಿ ಭಾಷೆಯ ಕುರಿತು ಜನರ ಭಾವನೆಗಳನ್ನು ಕೆದಕುವ ಭಿನ್ನತೆಗಳನ್ನು ಉಂಟು ಮಾಡುವ ಹೆಜ್ಜೆಯಾಗಿದೆ. ಕನ್ನಡವು ದಕ್ಷಿಣ ಭಾರತದ ಪುರಾತನ ಭಾಷೆಗಳಲ್ಲಿ ಒಂದಾಗಿದೆ. ಇದನ್ನು ಭಾಷಾ ಶಾಸ್ತ್ರಜ್ಞರು ಇತಿಹಾಸಕಾರರೂ ಸಹ ಮಾನ್ಯಗೊಳಿಸಿದ್ದು, 2500 ವರ್ಷಕೊಮ್ಮೆ ಹೆಚ್ಚು ಹಿಂದಿನ ಶಿಲಾಶಾಸನಗಳು ನಮಗೆ ದೊರಕಿದ್ದು ಸಾಹಿತ್ಯಕ ಕೃತಿಗಳು ಈ ಕನ್ನಡ ಭಾಷೆಯ ಗೌರವವನ್ನು ಹೆಚ್ಚಿಸುತ್ತದೆ. ತಮಿಳು ನಮ್ಮ ಗೆಳೆಯ ಭಾಷೆ ತಮಿಳರು ನಮ್ಮ ಸಹೋದರರು ಆದರೆ ಒಂದು ಭಾಷೆಯನ್ನು ಮತ್ತೊಂದರ ಉಪಭಾಷೆಯೆಂದು ಕೀಳಾಗಿ ವರ್ಣಿಸುವುದು ಭಾಷಾ ಸಂಸ್ಕೃತಿಯ ವೈವಿಧ್ಯತೆಯನ್ನು ಅವಮಾನಿಸುವುದು, ಸಹಿಷ್ಣುತೆಗೆ ಧಕ್ಕೆ ತರುವ ಕೆಲಸವಾಗಿದೆ. ನಮಗೆಲ್ಲಾ ತಮಿಳು, ಮಲಯಾಳಂ, ತೆಲುಗು, ಕನ್ನಡ ಇವು ಸಮಾನ ಗೌರವಕ್ಕೆ ಪಾತ್ರವಾದ ದ್ರಾವಿಡ ಭಾಷೆಗಳಾಗಿವೆ. ಈ ವೈವಿಧ್ಯತೆಯಲ್ಲಿಯೆ ನಮ್ಮ ಏಕತೆ ಇದೆ ಎಂದರು.ಈ ವೇಳೆ ರಾಜ್ಯಾಧ್ಯಕ್ಷ ಪಿ.ಸುಬ್ರಮಣ್ಯಂರೆಡ್ಡಿ ಮಾತನಾಡಿ, ಕಮಲ್‌ ಹಾಸನ್‌ ತಕ್ಷಣ ತಮ್ಮ ಹೇಳಿಕೆ ಹಿಂಪಡೆದು, ಕನ್ನಡಿಗರಲ್ಲಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಶಿವಾನಂದಯ್ಯ ಹಿರೇಮಠ, ಎಂ.ಎಸ್‌. ಪರ್ವತಗೌಡ್ರ, ರಾಮು ಪಿ. ಬಳ್ಳಾರಿ ಮಾತನಾಡಿದರು.

ರಾಜ್ಯ ವಕ್ತಾರ ಪ್ರಭಾಕರ್ ಹೆಬಸೂರ, ರಾಜ್ಯ ಕಾರ್ಯದರ್ಶಿ ಯು.ಆರ್. ಬೂಸನೂಮಠ, ಷಣ್ಮುಖ ಸುಲಾಖೆ, ಉಮೇಶ್ ಎಚ್‌.ಕೋನರಡ್ಡಿ ಇದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ