ಸಭೆಗೆ ಹಾಜರಾಗದ ಶಾಸಕರ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : Jul 17, 2024, 01:01 AM IST
ಸಿಕೆಬಿ-1 ದುಂಡು ಮೇಜಿನ ಸಭೆಗೆ ಗೈರಾದ ಶಾಸಕರ ಕ್ರಮ ಖಂಡಿಸಿ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಶಾಶ್ವತ ನೀರಾವರಿ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ವಿಧಾನಸಭೆಯಲ್ಲಿ ಮೂರೂ ಜಿಲ್ಲೆಗಳ ಶಾಸಕರು ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಲು ಒತ್ತಾಯಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಉಗ್ರವಾದ ಹೋರಾಟ ನಡೆಸಲಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಯಲು ಸೀಮೆಗೆ ಶಾಶ್ವತ ನೀರಾವರಿ ಒದಗಿಸಲು ಸೋಮವಾರದಿಂದ ನಡೆಯುವ ವಿಧಾನ ಸಭೆ ಅದಿವೇಶನದಲ್ಲಿ ಧ್ವನಿ ಎತ್ತಲು ಚಿಕ್ಕಬಳ್ಳಾಪರದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಗೆ ಆಹ್ವಾನಿಸಿತ್ತು. ಶಾಸಕ ಸಂಮೃಧ್ಧಿ ಮಂಜುನಾಥ್ ಹೊರತು ಪಡಿಸಿ ಉಳಿದ ಎಲ್ಲಾ ಶಾಸಕರು ದುಂಡು ಮೇಜಿನ ಸಭೆಗೆ ಗೈರಾಗಿದ್ದ ಕ್ರಮ ಖಂಡಿಸಿ ಎಸಿ ಕಚೇರಿ ಮುಂದೆ ಶಾಶ್ವತ ನೀರೀವರಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.

ಶಾಶ್ವತ ನೀರಾವರಿ ಸಮಿತಿಯು ಕಳೆದ ಶನಿವಾರ ಬಯಲು ಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರದ ಎಲ್ಲ ಶಾಸಕರನ್ನು ಪಕ್ಷಾತೀತವಾಗಿ ಆಹ್ವಾನಿಸಿದ್ದರೂ ಪಾಲ್ಗೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮೃದ್ಧಿ ಮಾತ್ರ ಹಾಜರ್‌

ಸಮಿತಿ ಸಂಚಾಲಕ ಆಂಜನೇಯರೆಡ್ಡಿ ಮಾತನಾಡಿ, ಶಾಸಕ ಸಂಮೃದ್ಧಿ ಮಂಜುನಾಥ್ ರನ್ನು ಬಿಟ್ಟರೆ ಬೇರೆ ಯಾವ ಶಾಸಕರು ವಿಧಾನ ಸೌಧದಲ್ಲಿ ಧ್ವನಿ ಎತ್ತಲಿಲ್ಲಾ. ಬಯಲು ಸೀಮೆಯ ಜಿಲ್ಲೆಗಳಿಗೆ ಯಾವುದೇ ಪರ್ಯಾಯ ಯೋಜನೆಗಳ ಬಗ್ಗೆ ಚರ್ಚಿಸದೆ ಕೇವಲ ಬಾರದ ಎತ್ತಿನ ಹೊಳೆ ಯೋಜನೆಯ ಬಗ್ಗೆ ಮಾತನಾಡುತ್ತಾ ಕಾಲ ಕಳೆದರು ಎಂದು ಆರೋಪಿಸಿದರು.

ನಮ್ಮ ಭಾಗದ ನೀರಿನಲ್ಲಿ ವಿಷ ಪೂರಿತ ಆಂಶಗಳು ಹೆಚ್ಚಾಗಿದ್ದು ಅದು ಕುಡಿಯಲು ಮತ್ತು ವ್ಯವಸಾಯಕ್ಕೆ ಯೋಗ್ಯವಾಗಿಲ್ಲ. ಅದರಿಂದ ಬಹು ಅಂಗಾಗ ವೈಪಲ್ಯಕ್ಕೆ ಜನತೆ ತುತ್ತಾಗುತ್ತಿದ್ದಾರೆ. ಸರ್ಕಾರ ಎಚ್‌.ಎನ್‌. ವ್ಯಾಲಿ ನೀರನ್ನು ಮೂರನೇ ಹಂತದಡಿ ಶುದ್ಧೀಕರಣಗೊಳಿಸಿದೇ ಜಿಲ್ಲೆಯ ಕೆರೆಗಳಿಗೆ ತುಂಬಿಸುವ ಅವೈಜ್ಞಾನಿಕ ನಿರ್ಧಾರ ಕೈಗೊಂಡಿದೆ. ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಜಿಲ್ಲೆಗಳಿಗೆ ಶುದ್ಧ ನೀರಿನ ಖಾತ್ರಿ ಇಲ್ಲವಾಗಿದೆ ಎಂದರು.

ಒತ್ತಾಯಿಸದಿದ್ದರೆ ಹೋರಾಟ

ವಿಧಾನಸಭೆಯಲ್ಲಿ ಮೂರೂ ಜಿಲ್ಲೆಗಳ ಶಾಸಕರು ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸಲು ಒತ್ತಾಯಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಉಷಾ ಆಂಜನೇಯ ರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ಕರ್ನಾಟಕ ಜನಸೇನಾ ರೈತ ಸಂಘದ ಜಿಲ್ಲಾಧ್ಯಕ್ಷೆ ಸುಷ್ಮಾಶ್ರೀನಿವಾಸ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ, ಭಕ್ತರಹಳ್ಳಿ ಪ್ರತೀಶ್, ರೈತ ಸಂಘದ ಜಿ.ಜಿ.ನಾರಾಯಣಸ್ವಾಮಿ, ಸಿಪಿಐ ಎಂ ನ ಲಕ್ಷ್ಮಯ್ಯ,ಕನ್ನಡ ಸೇನೆಯ ರವಿಕುಮಾರ್, ರಾಮೇಗೌಡ, ತಿಪ್ಪೇನಹಳ್ಳಿನಾರಾಯಣಸ್ವಾಮಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ