ಹೊಸ ವರ್ಷಾಚರಣೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jan 01, 2024, 01:15 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ಚನ್ನಮ್ಮ ಸರ್ಕಲ್‌ನಲ್ಲಿ ನಡೆದ ಇಂಗ್ಲಿಷ್ ಹೊಸ ವರ್ಷಚಾರಣೆ ವಿರೋದ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕಾಲಚಕ್ರ ಉರುಳಿ ನಾಳೆಯೇ ಬರಲಿರುವ ಇನ್ನೊಂದು ಕ್ಯಾಲೆಂಡರ್ ಹೊಸವರ್ಷ ಸ್ವಾಗತಿಸುವ ಹೊಸ್ತಿಲಲ್ಲಿ ನಾವಿದ್ದೇವೆ. ಆದರೆ ಭಾರತೀಯರಾದ ನಮಗೆ ಯುಗಾದಿನೇ ನಮ್ಮ ಪಾಲಿನ ಹೊಸವರ್ಷ. ಸಾಂಪ್ರದಾಯಿಕವಾಗಿ ಯುಗಾದಿ ಹಬ್ಬವು ನಮ್ಮನ್ನು ಬೆಸೆದಿದೆ ಎಂದೂ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಮುಖಂಡ ನಂದು ಗಾಯಕವಾಡ ಹೇಳಿದರು.

ನಗರದ ಚನ್ನಮ್ಮ ಸರ್ಕಲ್‌ನಲ್ಲಿ ನಡೆದ ಇಂಗ್ಲಿಷ್ ಹೊಸ ವರ್ಷಚಾರಣೆ ವಿರೋಧಿಸಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಆದರೆ ಇಂದಿನ ಯುವ ಜನತೆ ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ಮೋಜು-ಮಸ್ತಿ ಮಾಡುವುದರಗೋಸ್ಕರ, ಜನವರಿ 1ನ್ನು ಹೊಸ ವರ್ಷ ಆಚರಣೆ ಮಾಡುವ ಸಲುವಾಗಿ ಅದರ ಹಿಂದಿನ ದಿನ ಡಿಸೆಂಬರ್ 31 ರಂದು ಮೋಜು, ಮಸ್ತಿ ಮಾಡಿ ಇಂಗ್ಲಿಷರ ಹೊಸವರ್ಷವನ್ನು ಬರಮಾಡಿಕೊಳ್ಳುವಲ್ಲಿ ತೊಡಗಿರುವುದು ವಿಷಾದನೀಯ ಎಂದರು

ನಂತರ ಮಾತನಾಡಿದ ಪುರಸಭೆ ಸದಸ್ಯ ರವಿ ಜವಳಗಿ, ವಿವಿಧತೆಯಲ್ಲಿ ಏಕತೆಯು ನಮ್ಮ ಮೂಲ ಮಂತ್ರವಾಗಿರುವುದರಿಂದ ನಮ್ಮಲ್ಲಿ ಬೇರೆ ಬೇರೆ ಪ್ರದೇಶದಲ್ಲಿ ಮತ್ತು ಧರ್ಮಗಳಲ್ಲಿ ಹೊಸ ವರ್ಷದ ಆಚರಣೆಗಳು ವಿಭಿನ್ನ ಉತ್ತರ ಭಾರತದಲ್ಲಿ ಹಿಂದೂಗಳು ದೀಪಾವಳಿ ಹೊಸ ವರ್ಷ ಪಂಜಾಬಿನಲ್ಲಿ ಏಪ್ರಿಲ್ 13 ಬೈಸಾಕಿ ಹೆಸರಿನಿಂದ ಆಚರಿಸುತ್ತಾರೆ. ಗುರು ಗೋವಿಂದಸಿಂಗ್ 1699 ರಲ್ಲಿ ಧರ್ಮಸೇನೆ ಖಾಲ್ಸಾವನ್ನು ಸ್ಥಾಪಿಸಿದ್ದರಿಂದ ಹೆಚ್ಚು ಮಹತ್ವ ಪಡೆದಿದೆ. ದಕ್ಷಿಣ ಭಾರತದಲ್ಲಿ ಯುಗಾದಿ ಎಂದೇ ಹೊಸ ವರ್ಷ ಆಚರಿಸುತ್ತಾರೆ. ಕನ್ನಡಿಗರಿಗೆ ಯುಗಾದಿನೇ ಹೊಸ ವರ್ಷ ಎಂದರು.ಜಿ.ಎಸ್.ಗೊಂಬಿ ಮಾತನಾಡಿ, ಯುಗಾದಿ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಿಸಿ ಇಂದಿನ ಯುವ ಜನತೆಗೆ ಯುಗಾದಿ ಮಹತ್ವ ನಮ್ಮ ಹೊಸ ವರ್ಷದ ಬಗ್ಗೆ ತಿಳಿಸುವುದು ಅತೀ ಮುಖ್ಯವಾಗಿದೆ. ಆದ್ದರಿಂದ ಯುಗಾದಿಯಂದು ನಗರದಲ್ಲಿ ಅನೇಕ ಕಡೆ ಹಬ್ಬ ಆಚರಿಸಿ ಸಭೆ ಸಮಾರಂಭಗಳನ್ನು ನಡೆಸಿ ಯುವಕರ ಮನಪರಿವರ್ತಿಸುವುದು ಅವರಲ್ಲಿ ಯುಗಾದಿ ಬಗ್ಗೆ ಹಿಂದುತ್ವ ಬಗ್ಗೆ ರಕ್ತದ ಕಣ ಕಣದಲ್ಲಿ ಪಸರಿಸುವಂತೆ ಮಾಡಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಶಂಕರಗೌಡ ಪಾಟೀಲ, ಸಂಜು ಬಾರಕೋಲ, ಶಿವಾನಂದ ಅಂಗಡಿ, ಶಿವನಗೌಡ ಪಾಟೀಲ, ವಿಜಯ ಸಬಕಾಳೆ, ಪುರಸಭೆ ಸದಸ್ಯ ರವಿ ಜವಳಗಿ, ಅಶೋಕ ಡೊಣ್ಣಿ, ಮಂಜು ಗೊಂಬಿ, ಸಂತೋಷ ಹಜಾರೆ, ಅರ್ಜುನ್ ಪವಾರ, ತಮ್ಮಣ್ಣೆಪ್ಪ ಆದೇಪ್ಪನ್ನವರ, ಹನಮಂತ ನಾವಿ, ಸಚಿನ್ ಕಲಮಡ್ಡಿ, ಭೈರೇಶ ಅದೆಪ್ಪನವರ, ರಾಘು ಗರಗಟಗಿ, ನಂದೇಶ ಲಾತುರ, ಮಹಾಲಿಂಗ ಕಂಕಣವಾಡಿ, ಶ್ರೀನಿಧಿ ಕುಲಕರ್ಣಿ, ಹಣಮಂತ ಜಮಾದಾರ, ಬಸವರಾಜ ಗಿರಿಸಾಗರ, ಮಂಜು ಭಾವಿಕಟ್ಟಿ, ಮಹಾಲಿಂಗ ದೇಸಾಯಿ, ಅಭಿಷೇಕ್ ಸೊನ್ನದ, ಚನ್ನು ಅರೇಗಾರ, ಸಂದೀಪ ಸೊರಗೊಂಡ, ದತ್ತು ಯರಗಟಿಕರ ಸೇರಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!