ಕನ್ನಡಪ್ರಭ ವಾರ್ತೆ ಮದ್ದೂರು
2025- 26ನೇ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸರ್ಕಾರ ಪ್ರತಿ ಟನ್ ಕಬ್ಬಿಗೆ ಈಗಾಗಲೇ 100 ರು, ಪ್ರೋತ್ಸಾಹ ಧನದ ಪೈಕಿ ತನ್ನ ಪಾಲಿನ 50 ರು. ಈಗಾಗಲೇ ಪಾವತಿ ಮಾಡಿದೆ. ಆದರೆ, ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಬಾಕಿ ಹಣ 50 ರು. ಪಾವತಿಸದೆ ನ್ಯಾಯಾಲಯದ ತಡೆಯಾಜ್ಞೆ ತಂದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಆಡಳಿತ ಮಂಡಳಿ ಈ ಕೂಡಲೇ ತಡೆಯಾಜ್ಞೆ ತೆರವುಗೊಳಿಸಿ ಬಾಕಿ 50 ರುಗಳನ್ನು ರೈತರಿಗೆ ಪಾವತಿಸಿದ ನಂತರ ಕಾರ್ಖಾನೆ ಕಬ್ಬು ಅರೆಯುವ ಕೆಲಸ ಪ್ರಾರಂಭಿಸಬೇಕು. ಪ್ರಸಕ್ತ ಸಾಲಿನ ಸಾಲಿನಲ್ಲಿ ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರವನ್ನು ಶೇಕಡ 10 ರಿಂದ 25ಕ್ಕೆ ನಿಗದಿಪಡಿಸಿರುವುದು ವೈಜ್ಞಾನಿಕ ಕ್ರಮ. ಈ ಕೂಡಲೇ ಶೇಕಡ 8.5ಕ್ಕೆ ಎಫ್ ಆರ್ ಪಿ ದರ ನಿಗದಿ ಪಡಿಸುವಂತೆ ಒತ್ತಾಯಿಸಿದರು.ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಬರಿಸುತ್ತಿರುವ ರೀತಿಯಲ್ಲಿಯೇ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಡಿತ ಮಂಡಳಿ ಬರಿಸುವಂತೆ ಒಕ್ಕೋರಲ ನಿರ್ಣಯ ಅಂಗೀಕರಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಜಿ.ಎ.ಶಂಕರ್, ಲಿಂಗಪ್ಪಾಜಿ, ಗೊಲ್ಲರದೊಡ್ಡಿ ಅಶೋಕ್, ವಿ.ಸಿ.ಉಮೇಶ್, ಅಪ್ಪಾಜಿ, ಡಿಕೆ ಚಂದ್ರು, ವಿ.ಕೆ.ಶಿವಾನಂದ, ವಳೆಗೆರೆಹಳ್ಳಿ ಶ್ರೀನಿವಾಸ್, ಕೋಣಸಾಲೆ ಶಶಿ, ಪುಟ್ಟಸ್ವಾಮಿ ಮತ್ತಿತರರು ಭಾಗವಹಿಸಿದ್ದರು.