ಬೆಲೆ‌ ಏರಿಕೆ ವಿರೋಧಿಸಿ ಪ್ರತಿಭಟನೆ

KannadaprabhaNewsNetwork | Published : Apr 13, 2025 2:08 AM

ಸಾರಾಂಶ

ಕೇಂದ್ರ ರಾಜ್ಯ ಸರ್ಕಾರಗಳು ಪೈಪೋಟಿಗೆ ಬಿದ್ದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿವೆ, ಇದರಿಂದ ಜನತೆ ಅತೀವ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಮೀನಾಕ್ಷಿ ಸುಂದರಂ ಅವರು ಆರೋಪಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಕೇಂದ್ರ ರಾಜ್ಯ ಸರ್ಕಾರಗಳು ಪೈಪೋಟಿಗೆ ಬಿದ್ದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿವೆ, ಇದರಿಂದ ಜನತೆ ಅತೀವ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಮೀನಾಕ್ಷಿ ಸುಂದರಂ ಅವರು ಅರೋಪಿಸಿದರು.

ಅವರು ಶನಿವಾರ ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಸಿಪಿಐ ಪಕ್ಷ ಹಾಗೂ ಸಿಐಟಿಯು ಜಿಲ್ಲಾ ಸಮಿತಿಗಳು ಜಂಟಿಯಾಗಿ ಪೆಟ್ರೋಲ್–ಡೀಸಲ್, ಅಡಿಗೆ ಅನಿಲ, ಟೋಲ್ ,ವಿದ್ಯುತ್ ದರ ಏರಿಕೆ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದರು.

ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ ಪ್ರೆಸ್ ವೇಗಳಲ್ಲಿ ಟೋಲ್ ದರವನ್ನು ಶೇ 4ರಿಂದ ಶೇ 5 ರಷ್ಟು ಹೆಚ್ಚಳ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ನೀತಿಯು ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುಸ್ಥರಗೊಳಿಸಿದೆ ಎಂದರು.

ಬಿಜೆಪಿ - ಕಾಂಗ್ರೆಸ್ ಪಕ್ಷಗಳಿಗೆ ಜನ ಸಮಾನ್ಯರಿಗೆ ಬಗ್ಗೆ ಕಾಳಜಿ ಇದ್ದರೆ ಈ ಬೆಲೆ ಏರಿಕೆ ಹಿಂದಕ್ಕೆ ಪಡೆಯಲಿ ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಾದ ನ್ಯಾಯೋಜಿತ ತೆರಿಗೆ ಪಾಲನ್ನು ನೀಡದೆ ಇರುವ ಕಾರಣ ಹೀಗಾಗುತ್ತಿದೆ ಎಂದರು, ಬಿಜೆಪಿ ರಾಜಕೀಯ ಸೇಡಿಗಾಗಿ ಪಾಲು ನೀಡುವಲ್ಲಿ ಅನ್ಯಾಯ ಮಾಡಬಾರದು ಎಂದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್‌ ಮಾತನಾಡಿ ಅಂತಾರಾಷ್ಟೀಯ ತೈಲ ಬೆಲೆ ಇಳಿಕೆ ಅದಾಗ ಬಳಕೆದಾರರಿಗೆ ಸಿಗದ ಲಾಭ ಹೆಚ್ಚಳದ ಹೊರೆಯನ್ನು ವಿಪರೀತ ತೆರಿಗೆ ಹೊರೆ ಬಳಕೆದಾರರಿಗೆ ಹೊರಿಸಲಾಗಿದೆ ಎಂದು ಅರೋಪಿಸಿದರು.

ಕಾಂಗ್ರೆಸ್, ಬಿಜಿಪಿ, ಬೆಲೆ ಏರಿಕೆ ವಿರುದ್ದದ ಹೋರಾಟ ಮೊಸಳೆ ಕಣ್ಣೀರು ಎಂದು ಅರೋಪಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿ (ಎಸ್) ಪಕ್ಷಗಳು ರಾಜಕೀಯ ಲಾಭಕ್ಕೆ ಪ್ರತಿಭಟನೆ ನಡೆಸುತ್ತಿವೆ. ಈ ಪಕ್ಷಗಳಿಗೆ ನಿಜ ಜನಪರ ಕಾಳಜಿ ಇದೆಯೇ ಎಂದು ಕುಟುಕಿದರು.

ಸಿಪಿಐ (ಎಂ) ಪಕ್ಷ ತುಮಕೂರು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ ಜನ ಸಮಾನ್ಯರ ಸಂಕಟಗಳ ಅರಿವು ಈ ಪಕ್ಷಗಳಿಗೆ ಇಲ್ಲವೆಂದರು. ವಕೀಲ ಶಿವಣ್ಣ , ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲಾ ಎ. ಲೋಕೆಶ್. ಬಿ. ಉಮೇಶ್, ಅಜಪ್ಪ, ದೊಡ್ಡನಂಜಪ್ಪ, ಟಿ.ಆರ್. ಕಲ್ಪನಾ, ಸಿಐಟಿಯುನ ಶಿವಕುಮಾರ್ ಸ್ವಾಮಿ, ಮಧುಸೂಧನ್, ಮನೆಕೆಲಸಗಾರರ ಸಂಘದ ಅನಸೂಯ, ಮತ್ತಿತರು ಇದ್ದರು.

Share this article