ಕನ್ನಡಪ್ರಭ ವಾರ್ತೆ ಶಂಕರನಾರಾಯಣಇಲ್ಲಿನ ಮದರ್ ತೆರೇಸಾಸ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಎಲ್ಲ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ. 43 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಕಾಲೇಜಿನ ನಿಶಾ ನಾರಾಯಣ ತೊಳಾರ್ ಅವರು 593 ಅಂಕಗಳಿಸಿ ರಾಜ್ಯಮಟ್ಟದಲ್ಲಿ 7ನೇ ರ್‍ಯಾಂಕ್, ಆದಿತ್ಯ ಶೆಟ್ಟಿ 589 ಅಂಕಗಳಿಸಿ 11ನೇ ರ್‍ಯಾಂಕ್, ಸರ್ವದಾ ಚಾತ್ರಾ 587 ಅಂಕ ಗಳಿಸಿ 13ನೇ ರ್‍ಯಾಂಕ್ ಗಳಿಸಿದ್ದಾರೆ.ವಿಜ್ಞಾನ ವಿಭಾಗದಲ್ಲಿ 102 ವಿದ್ಯಾರ್ಥಿಗಳಲ್ಲಿ 101 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ 49 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 52 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಕ್ಷಿತಾ 590 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 10ನೇ ರ್‍ಯಾಂಕ್, ರುಚಿತಾ 587 ಅಂಕಗಳಿಸಿ 13ನೇ ರ್‍ಯಾಂಕ್ ಪಡೆದಿದ್ದಾರೆ.ಈ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ವರ್ಗ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಶುಭ ಹಾರೈಸಿದ್ದಾರೆ.ಸಿಎ, ನೀಟ್, ಜೆಇಇಗೆ ತರಬೇತಿ:ಕಳೆದ 16 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ, ಕೈಗೆಟಕುವ ಶುಲ್ಕದೊಂದಿಗೆ, ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದಿರುವ ಕಾಲೇಜಿನಲ್ಲಿ ಸಿಎ/ಸಿಎಸ್/ಸಿಇಟಿ/ಕೆಸಿಇಟಿ/ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ತರಬೇತಿ ನೀಡಲು ತಜ್ಞ ಅನುಭವಿ, ಪೂರ್ಣಕಾಲಿಕ ಉಪನ್ಯಾಸಕ ವೃಂದವನ್ನು ನೇಮಿಸಲಾಗಿದ್ದು, ವಿದ್ಯಾರ್ಥಿಗಳ ವೈಯಕ್ತಿಕ ತರಬೇತಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.ಎಸ್ಎಸ್ಎಲ್ಸಿಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಇಲ್ಲಿ ವಾಣಿಜ್ಯ ವಿಭಾಗದಲ್ಲಿ ದಾಖಲಾತಿ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.ಅತ್ಯಲ್ಪ ಶುಲ್ಕ-ಗುಣಮಟ್ಟದ ಶಿಕ್ಷಣ:ಶಿಕ್ಷಣ ಕ್ಷೇತ್ರದಲ್ಲಿ 25 ವರ್ಷಗಳ ವಿಶಾಲ ಸೇವಾನುಭವ ಹೊಂದಿರುವ ಸ್ನಾತಕೋತ್ತರ ಪದವೀಧರ ಜೈಸನ್ ಲೂವಿಸ್ ಅವರು ಪ್ರಾಂಶುಪಾಲರಾಗಿ, 12 ವರ್ಷಗಳ ಸೇವಾನುಭವ ಹೊಂದಿರುವ ಲೆಕ್ಕಶಾಸ್ತ್ರ ವಾಣಿಜ್ಯ ಪರಿಸರ ಮತ್ತು ವರ್ತಮಾನ ವ್ಯವಹಾರದಲ್ಲಿ ಪರಿಣತರಾದ ಗೀತಾ ಅವರು ಉಪಪ್ರಾಂಶುಪಾಲರಾಗಿ, ವಿಷಯ ಪರಿಣಿತ ಉಪನ್ಯಾಸಕರೊಂದಿಗೆ, ವಿದ್ಯಾರ್ಥಿಗಳ ಸಾಧನೆಯನ್ನು ಉತ್ತುಂಗಕ್ಕೇರಿಸುವ ಪಣ ತೊಟ್ಟಿರುವ ಆಡಳಿತ ಮಂಡಳಿಯ ಧ್ಯೇಯವನ್ನು ಕಾರ್ಯಾರೂಪಕ್ಕೆ ತರುತ್ತಿದ್ದಾರೆ.2025-26ನೇ ಸಾಲಿನ ಪ್ರಥಮ / ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಲ್ಪ ಶುಲ್ಕದಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣವನ್ನು ಇಲ್ಲಿ ಪಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಯನ್ನು (7259324484 / 9482479317 / 9448150094 / 9448150093 / 9148176228) ಸಂಪರ್ಕಿಸಬಹುದಾಗಿದೆ.