ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ನಿರೀಕ್ಷಣಾ ಮಂದಿರ ರಮಾನಿವಾಸದಲ್ಲಿ ಸಚಿವ ತಿಮ್ಮಾಪೂರ ಅಭಿಮಾನಿಗಳ ಬಳಗ ಹಾಗೂ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಸಮುದಾಯ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ‍್ಯಾಲಿ ನಡೆಯಲಿದೆ. ದಲಿತಪರ ಸಂಘಟನೆಗಳು, ಅಭಿಮಾನಿ ಬಳಗದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸರಳ ಸಜ್ಜನ ರಾಜಕಾರಣಿ, ದಲಿತ ಮಂತ್ರಿ ತಿಮ್ಮಾಪೂರ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡರು ಪುರಾವೆ ನೀಡಲಿ. ಮುಖ್ಯ ಮಂತ್ರಿಗಳ ಹೆಸರು ಕೆಡಿಸಲು ಬಿಜೆಪಿ ಹುನ್ನಾರ ನಡೆಸಿದೆ. ಇದನ್ನು ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಉಪಚುನಾವಣೆಗಳಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.ಮುಖಂಡ ಮಾಮೂನ ಪಾರ್ಥನಳ್ಳಿ ಮಾತನಾಡಿ, ಸಚಿವರ ಹೆಸರಿಗೆ ಕಳಂಕ ತರಲು ಬಿಜೆಪಿ ನಡೆಸಿರುವ ಹುನ್ನಾರ ನಡೆಯುವದಿಲ್ಲ. ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಸುಳ್ಳು ಆರೋಪಗಳಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ದೂರಿದರು. ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮೀಸಿ ಮಾತನಾಡಿ, ಸರಾಯಿ ಮಾರಾಟ ಮಾಡುವ ಸಂಘಟನೆಯವರು ಸಚಿವರಿಗೆ ಹಣ ಕೊಟ್ಟಿರುವ ಬಗ್ಗೆ ಪುರಾವೆ ನೀಡಲಿ, ಸುಳ್ಳು ಆರೋಪ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರೋನಾ ಸಮಯದಲ್ಲಿ ಪಿಪಿಇ ಕಿಟ್ ಖರೀದಿ ಹಗರಣದಲ್ಲಿ ಸಿಲುಕಿದ್ದಾರೆ ಅದರ ಬಗ್ಗೆ ನಾಯಕರು ಮಾತನಾಡಲಿ ಎಂದರು. ಸಚಿವ ತಿಮ್ಮಾಪೂರ ಅವರಿಗೆ ತೊಂದರೆ ಕೊಡಲು ಯತ್ನಿಸಿದರೆ ದಲಿತ ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಮುಂಖಡ ಮಹೇಶ ಕೋಳಿ, ಕುಂಚನೂರು ಗ್ರಾಪಂ ಅಧ್ಯಕ್ಷ ಶಂಕರ ಕಾಂಬ್ಳೆ, ಬಿಜೆಪಿ ನಾಯಕರ ನಡೆ ಖಂಡಿಸಿ, ದಲಿತ ಸಮಾಜದ ತಂಟೆಗೆ ಬಂದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಯಾಸಿನ ಯಾದವಾಡ, ಮಕಬುಲ್ ಅಥಣಿಕರ, ಮುತ್ತಪ್ಪ ಮೈತ್ರಿ, ಈಶ್ವರ ವಾಳೆಣ್ಣವರ, ದಿಲಾವರ ಶಿರೋಳ, ರಾಜು ತೆಲಸಂಘ ಮುಂತಾದವರಿದ್ದರು.