ಕವಿವಿ ವ್ಯಾಪ್ತಿ ಶಾಲೆಯ ಶಿಕ್ಷಕರ ನೇಮಕಾತಿ ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Mar 17, 2026, 02:00 AM IST
ಕವಿವಿ ಮಾಧ್ಯಮಿಕ ಹಾಗೂ ಪ್ರಾಥಮಿಕ ಪ್ರಾಯೋಗಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕ ಹಾಗೂ ನಿಲಯ ಪಾಲಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿವಿ ಆವರಣದಲ್ಲಿ ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ಕವಿವಿ ವ್ಯಾಪ್ತಿಯ ಶಾಲೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ 2023ರ ಮಾ. 17ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಂತೆಯೇ, ಮಾ. 12ರಂದು ನಡೆದ ಸಂದರ್ಶನದಲ್ಲಿ ವಿವಿ ಕುಲಸಚಿವರು ಹಾಗೂ ಕುಲಪತಿ ನಿಯಮ ಮೀರಿ ನೇಮಕಾತಿ ಮಾಡಿದ್ದಾರೆ.

ಧಾರವಾಡ:

ಕರ್ನಾಟಕ ವಿಶ್ವವಿದ್ಯಾಲಯದ ಮಾಧ್ಯಮಿಕ ಹಾಗೂ ಪ್ರಾಥಮಿಕ ಪ್ರಾಯೋಗಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕ ಹಾಗೂ ನಿಲಯ ಪಾಲಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಮಹಾಮಂಡಳ ವತಿಯಿಂದ ಕವಿವಿಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಸಂಘದ ಮುಖಂಡ ಪರಮೇಶ್ವರ ಕಾಳೆ, ಈ ಶಾಲೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ 2023ರ ಮಾ. 17ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಂತೆಯೇ, ಮಾ. 12ರಂದು ನಡೆದ ಸಂದರ್ಶನದಲ್ಲಿ ವಿವಿ ಕುಲಸಚಿವರು ಹಾಗೂ ಕುಲಪತಿ ನಿಯಮ ಮೀರಿ ನೇಮಕಾತಿ ಮಾಡಿದ್ದಾರೆ. ಇದು ನೈಜ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಆದ್ದರಿಂದ ಸಂದರ್ಶನದ ಪೂರ್ತಿ ವಿಡಿಯೋ ಬಹಿರಂಗ ಪಡಿಸಬೇಕು. ಜತೆಗೆ ಈ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.

ಈ ವೇಳೆ ರವೀಂದ್ರ ಕಲ್ಯಾಣಿ, ರಜನಿಕಾಂತ ಬಿಜವಾಡ, ಸುವರ್ಣ ಮಣಿಕುಂಟ್ಲ ಸೇರಿದಂತೆ ಹಲವರು ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನುಡಿದು ತೋರುವುದಕ್ಕಿಂತ ನಡೆದು ತೋರಿಸಿ: ಹುಕ್ಕೇರಿ ಶ್ರೀ
ಹೋಟೆಲ್‌ಗಳಲ್ಲಿ 16 ಗೃಹ ಬಳಕೆ ಸಿಲಿಂಡರ್ ಜಪ್ತಿ