)
- ಬಿಜೆಪಿ ಹೋರಾಟಕ್ಕೆ ಸ್ಥಳೀಯ ನಿವಾಸಿಗಳು, ಸಾರ್ವಜನಿಕರು, ಮಕ್ಕಳು ಸಾಥ್ । ಜಿಲ್ಲಾಡಳಿತಕ್ಕೆ ಮನವಿ- - -
ಸುಸ್ಥಿತಿಯಲ್ಲಿದ್ದ ಎಂಸಿಸಿ ಬಿ ಬ್ಲಾಕ್‌ನ ಪಾರ್ಕ್ ಕಾಂಪೌಂಡನ್ನು ಹಾಳುಗೆಡವಿ, ಹೊಸದಾಗಿ ಕಾಮಗಾರಿ ಕೈಗೊಂಡಿದ್ದನ್ನು ಖಂಡಿಸಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು, ಮಕ್ಕಳ ಸಮೇತ ಮಂಗಳವಾರ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದರು.
ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಮಾತನಾಡಿ, ನಗರದ ಎಂಸಿಸಿ ಬಿ ಬ್ಲಾಕ್‌ನ ಕಾಸರ್ ವಿಠ್ಠಲ ಶ್ರೇಷ್ಟಿ ಪಾರ್ಕ್ ಬಳಿ ಸಾರ್ವಜನಿಕ ಪಾರ್ಕನ್ನು ಈಗಾಗಲೇ ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗಿದೆ. ಗಟ್ಟಿಮುಟ್ಟಾದ ಪಾರ್ಕ್ ಗೋಡೆ ಒಡೆದು, ಕಬ್ಬಿಣದ ಗ್ರಿಲ್ ತೆರವು ಮಾಡಿ, ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸುತ್ತಿದ್ದಾರೆ. ಯಾವ ಅಧಿಕಾರಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆ, ಗುತ್ತಿಗೆದಾರರು ಯಾರು, ಯಾವ ಉದ್ದೇಶಕ್ಕೆ ಕಾಮಗಾರಿ ಮಾಡುತ್ತಿದ್ದಾರೆಂಬ ಮಾಹಿತಿ ಇಲ್ಲ. ಹೊಸ ಕಾಮಗಾರಿ ಹೆಸರಲ್ಲಿ ಹಣ ಲೂಟಿ ಹೊಡೆಯುವ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದರು.ಅಭಿವೃದ್ಧಿ ಹೆಸರಲ್ಲಿ ನಗರದ ವೃತ್ತಗಳಲ್ಲಿ ಸೈಜ್ ಕಲ್ಲುಗಳನ್ನು ಹಾಕಿ ಅಂತಾರಾಷ್ಟ್ರೀಯ ಮಾದರಿ ಎನ್ನುತ್ತಿದ್ದಾರೆ. ಉತ್ತಮ ರಸ್ತೆಗಳನ್ನು ತೆರವು ಮಾಡಿ, ಕೋಟಿಗಟ್ಟಲೇ ಬಿಲ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಜನ ಸುಮ್ಮನಿದ್ದಾರೆ. ತಾವೇನೇ ಮಾಡಿದರೂ ನಡೆಯುತ್ತದೆಂದ ಅಹಂನಿಂದ ಮಂತ್ರಿಗಳು, ಜಿಲ್ಲಾಡಳಿತ ವರ್ತಿಸುತ್ತಿರುವುದು ಸರಿಯಲ್ಲ. ತಕ್ಷಣವೇ ಪಾರ್ಕ್ ಸ್ಥಳವನ್ನು ಡಿಸಿ ನೇತೃತ್ವದ ಸ್ವತಂತ್ರ ತಾಂತ್ರಿಕ ಅಧಿಕಾರಿಗಳ ತಂಡದಿಂದ ಪರಿಶೀಲಿಸಬೇಕು. ತನಿಖೆ ಮುಗಿಯುವವರೆಗೂ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಸುರೇಶ ಗಂಡುಗಾಳೆ, ಆರ್.ಶಿವಾನಂದ, ಶಿವರಾಜ ಪಾಟೀಲ, ತಾರೇಶ ನಾಯ್ಕ, ವಿನಯ್ ದಿಳ್ಯಪ್ಪ, ರುದ್ರೇಶ, ಮಂಜುನಾಥ, ಪದ್ಮನಾಭ ಶೆಟ್ರು, ಹರೀಶ ಶಾಮನೂರು, ಲಿಂಗರಾಜ, ಸಚಿನ್, ಕಿರಣ್ ಇತರರು ಇದ್ದರು.
(ಬಾಕ್ಸ್)
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತೋಟಗಾರಿಕೆ ಅಧಿಕಾರಿಗಳಿಗೆ ಎಸ್ಟಿಮೇಟ್ ಕೇಳಿದಾಗ ಸಚಿವರ ಕಚೇರಿಯಿಂದ ಶಿಫಾರಸು ಬಂದಿತ್ತೆಂದು, ಎಸ್ಟಿಮೇಟ್‌ನಲ್ಲಿ ₹40 ಲಕ್ಷ ಕಬ್ಬಿಣದ ಗ್ರಿಲ್ ಇಟ್ಟುಕೊಂಡಿದ್ದಾಗಿ ಹೇಳಿದರು. ಕಾಂಪಾಂಡ್ ಪರಿಶೀಲಿಸಿದ್ದಿರಾ? ಶಿಥಿಲವಾಗಿತ್ತೆಂದು ಹೇಳುತ್ತೀರಿ. ಅದಕ್ಕೆ ಸ್ಪ್ರೆಂಥ್ ಟೆಸ್ಟ್ ಸರ್ಟಿಫಿಕೇಟ್ ಮಾಡಿಸಿದ ಪತ್ರ ಕೊಡಿ ಎಂದು ಬಿಜೆಪಿ ಮುಖಂಡ ಪ್ರಸನ್ನಕುಮಾರ ಪ್ರಶ್ನಿಸಿದರು. ಅವರು ಕೇಳಿದ ಯಾವುದೇ ದಾಖಲೆ ಇಲ್ಲವೆಂದು ಅಧಿಕಾರಿ ಒಪ್ಪಿಕೊಂಡರು.
- - -
- ಕೆ.ಪ್ರಸನ್ನಕುಮಾರ, ಬಿಜೆಪಿ ಮುಖಂಡ, ಪಾಲಿಕೆ ಮಾಜಿ ವಿಪಕ್ಷ ನಾಯಕ.
-(ಪೋಟೋ ಇದೆ: -1ಕೆಡಿವಿಜಿ15:)