ಬೆಂಗಳೂರಿನ ವಿ ಅಂಡ್ ವಿ ಅಸೋಸಿಯೇಟ್ಸ್‌ನವರು ಕಂಪನಿಯಿಂದ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮಗೆ ಕಳೆದ ಮೇ ತಿಂಗಳಿನಿಂದ ಇಲ್ಲಿಯವರೆಗೆ ವೇತನ, ಪಿಎಫ್ ಪಾವತಿಯಾಗಿಲ್ಲ. ಕಂಪನಿಯವರಿಗೆ ಫೋನಾಯಿಸಿದರೆ ಕರೆ ಸ್ವೀಕರಿಸುತ್ತಿಲ್ಲ. ಅವರಿಂದ ಯಾವುದೇ ಉತ್ತರವೂ ಬರುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಆರೋಗ್ಯ ಇಲಾಖೆಯ ೧೬೫ ಹೊರಗುತ್ತಿಗೆ ನೌಕರರಿಗೆ ನಾಲ್ಕು ತಿಂಗಳಿಂದ ವೇತನ ಪಾವತಿಯಾಗದಿರುವ ಸಂಬಂಧ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಬೆಂಗಳೂರಿನ ವಿ ಅಂಡ್ ವಿ ಅಸೋಸಿಯೇಟ್ಸ್‌ನವರು ಕಂಪನಿಯಿಂದ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಮಗೆ ಕಳೆದ ಮೇ ತಿಂಗಳಿನಿಂದ ಇಲ್ಲಿಯವರೆಗೆ ವೇತನ, ಪಿಎಫ್ ಪಾವತಿಯಾಗಿಲ್ಲ. ಕಂಪನಿಯವರಿಗೆ ಫೋನಾಯಿಸಿದರೆ ಕರೆ ಸ್ವೀಕರಿಸುತ್ತಿಲ್ಲ. ಅವರಿಂದ ಯಾವುದೇ ಉತ್ತರವೂ ಬರುತ್ತಿಲ್ಲ. ಡಿಹೆಚ್‌ಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಜಿಲ್ಲಾಧಿಕಾರಿಗಳ ಬಳಿ ಅಳಲು ವ್ಯಕ್ತಪಡಿಸಿದರು.

ನೌಕರರ ಮನವಿ ಸ್ವೀಕರಿಸಿದ ಬಳಿಕ ಡಿಎಚ್‌ಒ ಡಾ.ಜಿ.ಸಿ.ಬೆಟ್ಟಸ್ವಾಮಿ ಅವರನ್ನು ಕಚೇರಿಗೆ ಕರೆಸಿಕೊಂಡ ಜಿಲ್ಲಾಧಿಕಾರಿಗಳು, ಹೊರಗುತ್ತಿಗೆ ನೌಕರರಿಗೆ ೪ ತಿಂಗಳಿಂದ ಸಂಬಳವಾಗಿಲ್ಲ. ಏನು ಕ್ರಮ ವಹಿಸಿದ್ದೀರಿ. ನಿಮಗೆ ೪ ತಿಂಗಳಿಂದ ವೇತನ ಕೊಡದಿದ್ದರೆ ನಿಮ್ಮ ಪರಿಸ್ಥಿತಿ ಹೇಗಿರುತ್ತಿತ್ತು. ಮುಂದಿನ ನಾಲ್ಕೈದು ದಿನಗಳೊಳಗೆ ನೌಕರರಿಗೆ ವೇತನ ಪಾವತಿಯಾಗಬೇಕು. ಮತ್ತೆ ವೇತನ ಸಂಬಂಧ ನೌಕರರು ನನ್ನ ಬಳಿಗೆ ದೂರು ತರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗುತ್ತಿಗೆ ಕಂಪನಿಯವರೊಂದಿಗೆ ಮಾತುಕತೆ ನಡೆಸಿ ವೇತನ ಮತ್ತು ಪಿಎಫ್ ಹಣದ ಪಾವತಿ ಮಾಡುವಂತೆ ಕ್ರಮ ವಹಿಸುವ ಭರವಸೆ ನೀಡಿದರು. ಆಗ ನೌಕರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಎರಡು ತಿಂಗಳು ವೇತನ ಪಾವತಿಯಾಗುತ್ತದೆ. ಆನಂತರದಲ್ಲಿ ಮತ್ತೆ ವಿಳಂಬವಾಗುವುದು ಮಾಮೂಲಾಗಿದೆ ಎಂದು ಡಾ.ಕುಮಾರ ಅವರ ಗಮನಕ್ಕೆ ತಂದರು.

ಇನ್ನು ಮುಂದೆ ವೇತನ, ಪಿಎಫ್ ಹಣ ಪಾವತಿಯಲ್ಲಿ ವಿಳಂಬವಾಗದಂತೆ ಕಂಪನಿಯವರಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳು ಡಿಎಚ್‌ಓಗೆ ಸೂಚನೆ ನೀಡಿದರು. ಈ ಸಮಯದಲ್ಲಿ ಸತೀಶ್, ಪ್ರಭಾವತಿ, ಲಕ್ಷ್ಮೀ, ಆನಂದ ಇತರರು ಹಾಜರಿದ್ದರು.ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಟಮಿ

ಕನ್ನಡಪ್ರಭ ವಾರ್ತೆ ಮಂಡ್ಯಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಸ್ಥೆ ಮಂಡ್ಯ (ಇಸ್ಕಾನ್), ಗೋವರ್ಧನ ಗುರುಕುಲ ಚಾರಿಟೆಬಲ್ ಟ್ರಸ್ಟ್, ಮಂಡ್ಯ ಭಾವಸಾರ ಕ್ಷತ್ರೀಯ ಸಮಾಜ ಹಾಗೂ ಜೈ ಮಾರುತಿ ಸೇವಾ ಟ್ರಸ್ಟ್ ವತಿಯಿಂದ ಸೆ. 4ರಂದು ಶುಕ್ರವಾರ ನಗರದ ವಿಠಲ ಸಮುದಾಯ ಭವನ (ಶ್ರೀ ಪಾಂಡುರಂಗಸ್ವಾಮಿ ದೇವಸ್ಥಾನ)ದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದೆ ಎಂದು ಇಸ್ಕಾನ್ ಮುಖ್ಯಸ್ಥ ಅನಿಲೇಶ್ವರ್ ಹರಿದಾಸ್ ತಿಳಿಸಿದ್ದಾರೆ.

ಬೆಳಗ್ಗೆ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ವೈದಿಕ ವೇಷ-ಭೂಷಣ ಸ್ಪರ್ಧೆ, ಕೃಷ್ಣನ ಚಿತ್ರಕಲೆ ಮತ್ತು ಇತರೆ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6.30 ರಿಂದ 7.30ರವರೆಗೆ ಕೃಷ್ಣನಿಗೆ ಮಹಾಭಿಷೇಕ ನಂತರ ಎಲ್ಲ ಭಕ್ತಾದಿಗಳಿಗೂ ಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತರು, ಸಾರ್ವಜನಿಕರು, ಶಾಲಾ ಮಕ್ಕಳು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಉತ್ಸವದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಎಂದು ಅವರು ಮನವಿ ಮಾಡಿದ್ದಾರೆ.