ಪ್ರತಿಷ್ಠಾಪಿಸಿದ್ದ ವಾಲ್ಮೀಕಿ ಪುತ್ಥಳಿ ತೆರವು ವಿರೋಧಿಸಿ ಪ್ರತಿಭಟನೆ

KannadaprabhaNewsNetwork |  
Published : Oct 18, 2024, 12:16 AM IST
ಮಹರ್ಷಿ ವಾಲ್ಮೀಕಿ ಪುತ್ತಳಿಯನ್ನು ಸ್ಥಾಪಿಸುವಂತೆ ಒತ್ತಾಯ | Kannada Prabha

ಸಾರಾಂಶ

ಪಟ್ಟಣದ ಮುಖ್ಯ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಯನ್ನ ಅನಾವರಣ ಮತ್ತು ನಾಮಫಲಕ ಆಳವಳಡಿಸಿರುವುದನ್ನು ತೆರವುಗೊಳಿಸಿದ ಹಿನ್ನೆಲೆ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನೆ ನಡೆದಿದ್ದು, ಇದರ ಪರಿಣಾಮ ಪೊಲೀಸರು ಹಾಗೂ ಸಮುದಾಯದ ಮುಖಂಡರ ನಡುವ ಕೆಲ ಕಾಲ ತಳ್ಳಾಟ ಗುರುವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪಟ್ಟಣದ ಮುಖ್ಯ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಯನ್ನ ಅನಾವರಣ ಮತ್ತು ನಾಮಫಲಕ ಆಳವಳಡಿಸಿರುವುದನ್ನು ತೆರವುಗೊಳಿಸಿದ ಹಿನ್ನೆಲೆ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನೆ ನಡೆದಿದ್ದು, ಇದರ ಪರಿಣಾಮ ಪೊಲೀಸರು ಹಾಗೂ ಸಮುದಾಯದ ಮುಖಂಡರ ನಡುವ ಕೆಲ ಕಾಲ ತಳ್ಳಾಟ ಗುರುವಾರ ನಡೆಯಿತು.

ಪಟ್ಟಣದ ಎಸ್.ಎಸ್.ಆರ್ ವೃತ್ತದಲ್ಲಿ ಬುಧವಾರ ರಾತ್ರಿ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನ ಅನಾವರಣ ಮಾಡಲಾಗಿತ್ತು. ನಂತರ ಅದನ್ನ ಪಪಂ ಮುಖ್ಯಾಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ವಾಲ್ಮೀಕಿ ಸಮುದಾಯದ ಮುಖಂಡರು ರಾತ್ರಿ ೧೧ ಗಂಟೆಯಿಂದ ಪ್ರತಿಭಟನೆ ನಡೆಸಿದರು. ಎಸ್ಪಿ ಆಶೋಕ್ ಹಾಗೂ ತಹಸೀಲ್ದಾರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಕಾರರಿಗೆ ಪುತ್ಥಳಿಯನ್ನು ವಾಪಸು ತರಿಸುವುದಾಗಿ ತಿಳಿಸಿದರೂ ಸಹ ಒಪ್ಪದೇ ಬೆಳಿಗ್ಗೆವರೆಗೂ ಪ್ರತಿಭಟನೆ ನಡೆಸಿದರು.ಪ್ರತಿವರ್ಷವು ನಾಯಕ ಸಮುದಾಯ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ವಿಜೃಂಭಣೆಯಿಂದ ವಾಲ್ಮೀಕಿ ಜಯಂತಿ ಆಚರಿಸುತ್ತಿದ್ದರು. ಆದರೆ ಪಟ್ಟಣದ ಮುಖ್ಯ ವೃತ್ತವನ್ನು ವಾಲ್ಮೀಕಿ ವೃತ್ತವನ್ನಾಗಿ ನಾಮಕರಣ ಮಾಡಬೇಕೆಂದು ಮತ್ತು ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಸ್ಥಾಪಿಸಬೇಕೆಂದು ಸಮುದಾಯದ ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದೇ ವೃತ್ತಕ್ಕೆ ಹಲವು ಸಮುದಾಯಗಳು ಸಹ ಅವರವರ ಸಮುದಾಯದ ನೇತಾರರ ಹೆಸರಿಡಲು ಪಪಂಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಪಪಂ ಯಾವ ನಿರ್ಣಯವನ್ನು ಕೈಗೊಂಡಿರಲ್ಲಿಲ್ಲ. ಆದರೆ ಹಲವು ವರ್ಷಗಳ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯದ ಕೆಲವು ಯುವಕರು ಅ.೧೬ ರಂದು ೧೦ ಗಂಟೆ ಸಮಯದಲ್ಲಿ ಪಟ್ಟಣದ ಮುಖ್ಯ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಸ್ಥಾಪಿಸಿದರು. ಕೂಡಲೇ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಪುತ್ಥಳಿ ಸ್ಥಾಪನೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪಪಂ ಮುಖ್ಯಾಧಿಕಾರಿ ಉಮೇಶ್ ಪುತ್ಥಳಿಯನ್ನು ಅಲ್ಲಿಂದ ತೆರವುಗೊಳಿಸಿ ದೇವಸ್ಥಾನದಲ್ಲಿ ಇಟ್ಟಿದ್ದರು. ತೆರವು ಗೊಳಿಸಿರುವ ವಾಲ್ಮೀಕಿ ಪುತ್ಥಳಿಯನ್ನು ಪುನರ್ ಸ್ಥಾಪಿಸುವಂತೆ ಸಮುದಾಯದವರು ಪಟ್ಟು ಹಿಡಿದರು. ತಹಸೀಲ್ದಾರ್ ಮಂಜುನಾಥ್, ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಅನಿಲ್ ಪ್ರತಿಭಟನಾಕಾರರ ಮನವಲಿಸಿ ಪಪಂ ಸಭೆಯಲ್ಲಿ ವಾಲ್ಮೀಕಿ ಪುತ್ತಳಿ ಸ್ಥಾಪಿಸುವ ಬಗ್ಗೆ ನಡವಳಿ ಬರೆಸಿ ನಿಯಮಾವಳಿಯಂತೆ ಪುತ್ಥಳಿಯನ್ನು ಸ್ಥಾಪಿಸಿಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಪಪಂ ಹಲವು ಸದಸ್ಯರು ಸಹ ಒಪ್ಪಿಗೆ ಸೂಚಿಸಿದರು. ತಕ್ಷಣ ವಾಲ್ಮೀಕಿ ಪುತ್ಥಳಿಯನ್ನು ಉತ್ಸವದ ಮೂಲಕ ಮುಖ್ಯ ವೃತ್ತಕ್ಕೆ ತರಿಸಿ ಪೂಜೆ ಸಲ್ಲಿಸಿ ಕಣ್ಣಪ್ಪ ದೇವಾಲಯಕ್ಕೆ ಕಳುಹಿಸಿ ಕೊಡಲಾಯಿತು ಮತ್ತು ಆ ಕ್ಷಣದಲ್ಲಿ ವಾಲ್ಮೀಕಿ ವೃತ್ತ ಎಂಬ ನಾಮಫಲಕವನ್ನು ಅಳವಡಿಸಲಾಯಿತು.

ನಂಬಿಸಿ ಮೋಸ ಮಾಡಿದ್ದಾರೆಂದು ಆಕ್ರೋಶ: ಅಧಿಕಾರಿಗಳು ಮತ್ತು ಪೊಲೀಸರು ಮುಂಬರುವ ದಿನಗಳಲ್ಲಿ ವಾಲ್ಮೀಕಿ ಪುತ್ಥಳಿ ಸ್ಥಾಪಿಸುತ್ತೇವೆ. ಈಗ ವೃತ್ತವನ್ನು ವಾಲ್ಮೀಕಿ ವೃತ್ತದ ನಾಮಕರಣ ಮಾಡುತ್ತೇವೆ ಎಂದು ಭರವಸೆ ನೀಡಿ ನಂಬಿಸಿ ವಾಲ್ಮೀಕಿ ವೃತ್ತ ಎನ್ನುವ ನಾಮಫಲಕವನ್ನು ತೆರವು ಮಾಡಿ, ನಮ್ಮ ನಂಬಿಕೆಗೆ ಮೋಸ ಮಾಡಿದ್ದಾರೆ. ಮಹಿಳೆಯರಿಗೆ ಈ ರೀತಿ ನಂಬಿಸಿ ಮೋಸ ಮಾಡುವ ನಿಯಮ ಯಾವ ಕಾನೂನಿನಲ್ಲಿದೆ. ಈ ಸಂಬಂದ ತಕ್ಷಣ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕ್ಷೇತ್ರಕ್ಕೆ ಬಂದು ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಮಹಿಳೆಯರು ಒತ್ತಾಯಿಸಿದರು.ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಆಶೋಕ್, ಮರಿಯಪ್ಪ, ತಹಸೀಲ್ದಾರ್ ಮಂಜುನಾಥ್, ಸ್ಥಳದಲ್ಲಿಯೇ ಮೋಕ್ಕಂ ಹೂಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೂಪಾ ಮೌದ್ಗಿಲ್‌ ಮಾನಹಾನಿ ಕೇಸ್‌: ರೋಹಿಣಿ ಅರ್ಜಿ ವಜಾ
ವಿರೋಧದ ನಡುವೆ ಮದುವೆ : ಸಿಟ್ಟಲ್ಲಿ ಅಳಿಯನ ಮನೆಗೆ ಮಾವನಿಂದ ಬೆಂಕಿ!