ಬಾಂಗ್ಲಾ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದ‍ಾ‍ಳಿ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Dec 25, 2025, 02:30 AM IST
ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ದಾಳಿ ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಅಮಾಯಕ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಕಗ್ಗೋಲೆ ಹಾಗೂ ದಾಳಿಗಳನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಮಹಾಲಕ್ಷ್ಮೀ ವೃತ್ತದಲ್ಲಿ ರಸ್ತೆ ತಡೆ ನಡೆಸಿ ವ್ಯಕ್ತ ಪಡಿಸಿದರು.

ರಟ್ಟೀಹಳ್ಳಿ: ಅಮಾಯಕ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಕಗ್ಗೋಲೆ ಹಾಗೂ ದಾಳಿಗಳನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಮಹಾಲಕ್ಷ್ಮೀ ವೃತ್ತದಲ್ಲಿ ರಸ್ತೆ ತಡೆ ನಡೆಸಿ ವ್ಯಕ್ತ ಪಡಿಸಿದರು.

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಮುಖಂಡ ಮುತ್ತು ಬೆಣ್ಣಿ, ಬಾಂಗ್ಲಾದೇಶದ ಅಮಾಯಕ ಹಿಂದೂ ದೀಪು ಚಂದ್ರ ದಾಸ್ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನ ಮಾಡಿದ್ದಾನೆ ಎಂದು ಆರೋಪಿಸಿ ಅವನನ್ನು ಪೊಲೀಸ್ ಠಾಣೆಯಿಂದ ಎಳೆದೊಯ್ದು ನಡು ರಸ್ತೆಯಲ್ಲಿ ಸಾವಿರಾರು ಮುಸ್ಲಿಂ ಗುಂಡಾಗಳು ಅಮಾನುಷವಾಗಿ ತಳಿಸಿ ನೇಣಿಗೆ ಹಾಕಿ ಜೀವಂತ ಸುಟ್ಟು ಹಾಕಿರುವುದು ಅತ್ಯಂತ ನೀಚ ಕೃತ್ಯವಾಗಿದೆ. ಹಿಂದೂ ಸಮಾಜ ಇನ್ನಾದರೂ ಎಚ್ಚೇತ್ತುಕೋಳ್ಳಬೇಕು. ಇಲ್ಲವಾದಲ್ಲಿ ಇಂದು ಬಾಂಗ್ಲಾದಲ್ಲಿ ನಡೆದ ಹಿಂದೂಗಳ ಮೇಲಿನ ದೈರ್ಜನ್ಯ ನಾಳೆ ನಮ್ಮ ಭಾರತದಲ್ಲಿ ನಡೆಯುವುದು ದೂರ ಉಳಿದಿಲ್ಲ. ಆದ್ದರಿಂದ ಹಿಂದೂ ಸಮಾಜ ಜಾಗೃತರಾಗಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಭಾರತ, ನೇಪಾಳ ಹಾಗೂ ಇನ್ನೂ ಅನೇಕ ದೇಶದ ಹಿಂದೂಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರೂ ಅಲ್ಲಿನ ಹಿಂದೂಗಳ ಮೇಲಾಗುತ್ತಿರುವು ಹಿಂಸಾಚಾರ ಮುಂದುವರಿಯುತ್ತಿದೆ. ಅಲ್ಲಿನ ಸರಕಾರದ ಕುಮ್ಮಕ್ಕಿನಿಂದಲೇ ಹತ್ಯೆಗಳು ನಡೆಯುತ್ತಿವೆ. ಬಾಂಗ್ಲಾ ಸರಕಾರ ಹಿಂದೂಗಳನ್ನು ಬೇಕಾಬಿಟ್ಟಿಯಾಗಿ ನಡೆಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ. ದೇಶಾದ್ಯಂತ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಾವಿರಾರು ಕಾರ್ಯಕರ್ತರು ಹಾಗೂ ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟಿಸುತ್ತಿವೆ. ಬುದ್ಧಿ ಜೀವಿಗಳು ಬಾಯಿ ಮುಚ್ಚಿಕೊಂಡಿರುವುದು ಅವರ ದೇಶಾಭಿಮಾನಕ್ಕೆ ಹಿಡಿದ ಕೈ ಗನ್ನಡಿಯಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ಬಾಂಗ್ಲಾ ದೇಶದಲ್ಲಿನ ಹಿಂದೂಗಳ ಅಮಾನುಷ ಹತ್ಯೆ ಹಾಗೂ ದೈರ್ಜನ್ಯ ಪ್ರಕರಣಗಳು ನಿಲ್ಲದಿರುವುದು ಅತ್ಯಂತ ಖಂಡನೀಯ. ಬಾಂಗ್ಲಾ ರಾಜಕಾರಣಿಗಳು ಭಾರತ ಹಾಗೂ ಹಿಂದೂಗಳ ಮೇಲೆ ನಿರಂತರ ಕತ್ತಿ ಮಸಿಯುತ್ತಿದ್ದಾರೆ. ಅಲ್ಲಿನ ರಾಜಕಾರಣಿಗಳ ಕುಮ್ಮಕ್ಕಿನಿಂದಲೇ ಹತ್ಯೆಗಳು ನಡೆಯುತ್ತಿವೆ. ಭಾರತ ಸರಕಾರ ಮಧ್ಯ ಪ್ರವೇಶಿಸಿ ಹಿಂಸಾಚಾರ ತಡೆಯಬೇಕು ಎಂದು ಆಗ್ರಹಿಸಿದರು.

ಸರ್ವ ಜನಾಂಗದ ಶಾಂತಿ ತೋಟವಾಗಿರುವ ಭಾರತವನ್ನು ನಾಶ ಮಾಡಲು ಹೋರಾಟಿರುವ ಶತ್ರು ರಾಷ್ಟ್ರಗಳ ಕುತಂತ್ರ ಎಂದಿಗೂ ಫಲಿಸುವುದಿಲ್ಲ. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಬಲಿಷ್ಠವಾಗಿ 140 ಕೋಟಿ ಹಿಂದುಗಳು ಶಾಂತಿ ಸೌಹಾರ್ದದಿಂದ ಅತ್ಯಂತ ನೆಮ್ಮದಿ ಜೀವನ ನಡೆಸುತ್ತಿರುವುದು ನಮಗೆ ಹೆಮ್ಮೆ. ಪರ ದೇಶದಲ್ಲಿರುವ ಹಿಂದೂಗಳು ಶಾಂತಿ ನೆಮ್ಮದಿಯಿಂದ ಜೀವನ ನಡೆಸುವಂತ ದಿಟ್ಟ ಕ್ರಮಗಳನ್ನು ಅಲ್ಲಿನ ಸರಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಎಚ್‌ಪಿ ತಾಲೂಕು ಸಂಯೋಜಕ ನವೀನ ಮಾದರ, ತಾಲೂಕು ಗೋ ಪ್ರಮುಖ ಶಂಭು, ವಿದ್ಯಾರ್ಥಿ ಪ್ರಮುಖ ಆಕಾಶ ಹುಲ್ಲತ್ತಿ, ಪ್ರಚಾರ ಪ್ರಮುಖ ಮಂಜು ಗೌಡರ, ಮಂಜು ವಾಲ್ಮೀಕಿ, ಶಂಭಣ್ಣ ಗೂಳಪ್ಪನವರ, ಸುಶೀಲ್ ನಾಡಿಗೇರ, ಸುನೀಲ್ ಸರಶೆಟ್ಟರ್, ನಾಗರಾಜ ದ್ಯಾವಕ್ಕಳವರ, ಸುನೀಲ್ ಕಟ್ಟಿಮನಿ, ದೇವೇಂದ್ರಪ್ಪ ಗುತ್ತಲ್, ಪಟ್ಟಣ ಪಂಚಾಯಿತಿ ಸದಸ್ಯ ಬಸವರಾಜ ಆಡಿನವರ, ರವಿ ಹದಡೇರ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಭ್ರಮದ ಕ್ರಿಸ್‌ಮಸ್‌ ಆಚರಣೆಗೆ ಕ್ಷಣಗಣನೆ
ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಶ್ರಮಿಸಲಿ: ಮಂಜುನಾಥ ಕಂಬಳಿ