ನವೆಂಬರ್ 16ರಿಂದ ಬಿಸಿಯೂಟ ಖಾಸಗಿಕರಣ ವಿರೋಧಿಸಿ ಹೋರಾಟ

KannadaprabhaNewsNetwork |  
Published : Nov 14, 2026, 02:15 AM IST
13ಎಚ್.ಎಲ್.ವೈ-1: ಬಿ.ಸಿ. ಊಟ ಯೋಜನೆಯನ್ನು ಖಾಸಗಿಕರಣಗೊಳಿಸುವುದನ್ನು ವಿರೋಧಿಸಿ ನವೆಂಬರ್ 16ರಿಂದ ಜಿಲ್ಲಾಕೇಂದ್ರ ಕಾರವಾರದಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಹಳಿಯಾಳ ತಾಲೂಕಿನ ಎಲ್ಲ ಬಿ.ಸಿ. ಊಟ ನೌಕರರು ಭಾಗವಹಿಸಲಿದ್ದಾರೆ ಎಂದು  ತಿಳಿಸಿ ಹಳಿಯಾಳ ತಾಲೂಕ ಬಿಸಿಯೂಟ ನೌಕರರ ನಿಯೋಗವು ಶುಕ್ರವಾರ ಸಂಜೆ ತಾ.ಪಂ ಇಒ ಮತ್ತು ಅಕ್ಷರದಾಸೋಹ ಸಹಾಯಕ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿತು.  | Kannada Prabha

ಸಾರಾಂಶ

ತಾಪಂ ಇಒ ಹಾಗೂ ಅಕ್ಷರದಾಸೋಹ ಸಹಾಯಕ ನಿರ್ದೇಶಕರು, ಬಿಸಿಯೂಟ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಅಡುಗೆ ನೌಕರರು ಹೋರಾಟದಲ್ಲಿ ಭಾಗವಹಿಸುವುದರಿಂದ ತಾಲೂಕಿನಲ್ಲಿ ಎಲ್ಲಿಯೂ ಅಕ್ಷರ ದಾಸೋಹ ಯೋಜನೆಗೆ ತೊಂದರೆಯಾಗಬಾರದು ಎಂದು ಸೂಚಿಸಿದರು.

ಹಳಿಯಾಳ: ಬಿಸಿಯೂಟ ಯೋಜನೆಯನ್ನು ಖಾಸಗಿಕರಣಗೊಳಿಸುವುದನ್ನು ವಿರೋಧಿಸಿ ನ. 16ರಿಂದ ಕಾರವಾರದಲ್ಲಿ ನಡೆಯುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ತಾಲೂಕಿನ ಎಲ್ಲ ಬಿಸಿಯೂಟ ನೌಕರರು ಭಾಗವಹಿಸಲಿದ್ದಾರೆ.

ಶುಕ್ರವಾರ ಸಂಜೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು ಸಂಯೋಜಿತ) ಹಳಿಯಾಳ ತಾಲೂಕು ಸಮಿತಿ ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ತಾಪಂ ಇಒ ವಿಲಾಸರಾಜ್ ಪ್ರಸನ್ನ್ ಹಾಗೂ ಅಕ್ಷರ ದಾಸೋಹ ಯೋಜನೆ ತಾಲೂಕು ಸಹಾಯಕ ನಿರ್ದೇಶಕ ಎಸ್.ಎಸ್. ನೂಲಿನ್ ಅವರಿಗೆ ಮನವಿ ಸಲ್ಲಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಾಪಂ ಇಒ ಹಾಗೂ ಅಕ್ಷರದಾಸೋಹ ಸಹಾಯಕ ನಿರ್ದೇಶಕರು, ಬಿಸಿಯೂಟ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಅಡುಗೆ ನೌಕರರು ಹೋರಾಟದಲ್ಲಿ ಭಾಗವಹಿಸುವುದರಿಂದ ತಾಲೂಕಿನಲ್ಲಿ ಎಲ್ಲಿಯೂ ಅಕ್ಷರ ದಾಸೋಹ ಯೋಜನೆಗೆ ತೊಂದರೆಯಾಗಬಾರದು ಎಂದು ಸೂಚಿಸಿದರು.

ಸಂಘದ ಅಧ್ಯಕ್ಷೆ ಶೋಭಾ ಕುರಟ್ಟಿ, ಕಾರ್ಯದರ್ಶಿ ಹಸೀನಾ ಕಿತ್ತೂರ, ಖಜಾಂಚಿ ವಿಜಯಲಕ್ಷ್ಮೀ ಚವ್ಹಾಣ್ ಹಾಗೂ ಜಯಶ್ರೀ ಚವ್ಹಾಣ್, ಶಾರದಾ ಕೊಳಾಂಬೆ, ರೇಷ್ಮಾ ಬಾಂದುರ್ಗಿ ಮತ್ತು ಸಿಐಟಿಯು ತಾಲೂಕು ಪ್ರಮುಖ ಠಕ್ಕಪ್ಪ ಗುರಬಣ್ಣನವರ ಇದ್ದರು. ವನರಾಗ ಶರ್ಮಾರ ಕೃತಿಗೆ ಪ್ರಶಸ್ತಿ

ಯಲ್ಲಾಪುರ: ಸಾಹಿತ್ಯ ಸಂಸ್ಕೃತಿ ಪ್ರತಿಷ್ಠಾನ ಬೈಲಹೊಂಗಲ ಬೆಳಗಾವಿ ಅವರು ಸಾಹಿತಿ ವೇ. ಗುರುಪಾದ ಸ್ವಾಮಿ ಹಿರೇಮಠ ಸ್ಮರಣಾರ್ಥ ನೀಡುವ ಸಿಸು ಸಾಹಿತ್ಯ ಜ್ಯೋತಿ ಪ್ರಶಸ್ತಿಗೆ ವನರಾಗ ಶರ್ಮಾ ಪಾತ್ರರಾಗಿದ್ದಾರೆ. ಅವರ ಚಿನ್ನಾ ನನ್ನ ಮುದ್ದು ಚಿನ್ನಾ ಮಕ್ಕಳ ಕಥಾಸಂಕಲನಕ್ಕೆ ಈ ಪ್ರಶಸ್ತಿ ದೊರೆತಿದೆ. ನವೆಂಬರ್‌ನಲ್ಲಿ ನಡೆಯುವ ವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಕಾರ್ಯದರ್ಶಿ ಆರ್.ಜಿ. ಹಿರೇಮಠ ಮತ್ತು ಅಧ್ಯಕ್ಷ ಶಿವಪ್ರಸಾದ ಹುಲೆಪ್ಪನವರ ತಿಳಿಸಿದ್ದಾರೆ. ಪ್ರಶಸ್ತಿ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ