1 ರಂದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

KannadaprabhaNewsNetwork |  
Published : Jul 30, 2025, 01:28 AM IST
ಸಮೀಪದ ಕೊಕಟನೂರ ಗ್ರಾಮದ ನಿರೀಕ್ಷಣಾ ಮಂದಿರದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ ಮಾತನಾಡಿದರು. | Kannada Prabha

ಸಾರಾಂಶ

ಮಾದಿಗರಿಗೆ ಒಳ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಆ.1 ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಮಾದಿಗರಿಗೆ ಒಳ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಆ.1 ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ ಹೇಳಿದರು.

ಸಮೀಪದ ಕೊಕಟನೂರ ಗ್ರಾಮದ ನಿರೀಕ್ಷಣಾ ಮಂದಿರದಲ್ಲಿ ಮಂಗಳವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳ ಹೋರಾಟದ ಫಲವಾಗಿ ಸರ್ವೋಚ್ಛ ನ್ಯಾಯಾಲಯವು ಮಾದಿಗ ಹಾಗೂ ಇತರೆ 101 ಜಾತಿಗಳಿಗೆ ಸಮಾಜಿಕ ನ್ಯಾಯ ದೊರೆಕಿಸಿ ಒಳ ಮೀಸಲಾತಿ ನೀಡಲು ಆಯಾ ರಾಜ್ಯಗಳಿಗೆ ಪರಮಾಧಿಕಾರ ನೀಡಿದೆ. ಅದರ ಫಲವಾಗಿ ಆಂದ್ರ, ತೆಲಂಗಾಣ, ಕೇರಳ ಸೇರಿದಂತೆ ಅನೇಕ ರಾಜ್ಯಗಳು ಮೀಸಲಾತಿ ನೀಡಿವೆ. ಆ.1ಕ್ಕೆ ಸುಪ್ರಿಂ ಕೋರ್ಟ್‌ ಆದೇಶ ಮಾಡಿ 1 ವರ್ಷ ಗತಿಸಿದರೂ ರಾಜ್ಯ ಸರ್ಕಾರ ಮೀನ ವೇಷ ಏಣಿಸುತ್ತಿವೆ. ಈ ವಿಳಂಬ ನೀತಿಯನ್ನು ಖಂಡಿಸಿ ಮಾದಿಗ ಸಮಾಜದ ಅನೇಕ ಒಕ್ಕೂಟಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.ಮಾದಿಗ ಮೀಸಲಾತಿ ಸಮೀತಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಐಹೊಳೆ ಮಾತನಾಡಿ, ಜನಸಂಖ್ಯೆ ಆಧಾರದಲ್ಲಿ ಶೇ.6 ಮೀಸಲಾತಿ ಮಾದಿಗ ಸಮುದಾಯಕ್ಕೆ ನೀಡಲೇ ಬೇಕು. ನ್ಯಾಯಮೂರ್ತಿ ಸದಾಶಿವ ಹಾಗೂ ನಾಗಮೋಹನದಾಸ್ ವರದಿಗಳು ಕೂಡ ಸಮಾಜದ ಪರವಾಗಿದ್ದು ಮೀಸಲಾತಿ ಪಡೆಯಲು ನಮ್ಮ ಹಕ್ಕೊತ್ತಾಯ ಮಂಡಿಸಲಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಎಂ.ಆರ್.ಎಚ್.ಎಸ್ ಅಧ್ಯಕ್ಷ ಹಣಮಂತ ಅರ್ದಾವೂರ, ಜಿಲ್ಲಾ ಉಪಾಧ್ಯಕ್ಷ ಕುಮಾರ ಗಸ್ತಿ, ಬಸು ಹೋಳಿಕಟ್ಟಿ, ಪರಶು ಮುರಗುಂಡಿ, ಮಹಾದೇವ ಮಾದರ, ಆನಂದ ಹೋಳಿಕಟ್ಟಿ, ರಾಜು ರಾಜಂಗಳೆ, ಸುದೀಪ ಐಹೊಳೆ, ಆದರ್ಶ ಗಸ್ತಿ, ಪ್ರಕಾಶ ಕಡಕೋಳ, ಹಣಂತ ಮಾದರ, ಅನಿಲ ತಳವಾರ, ಆಕಾಶ ಮಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಜನಸಂಖ್ಯೆ ಆಧಾರದಲ್ಲಿ ಶೇ.6 ಮೀಸಲಾತಿ ಮಾದಿಗ ಸಮುದಾಯಕ್ಕೆ ನೀಡಲೇ ಬೇಕು. ನ್ಯಾಯಮೂರ್ತಿ ಸದಾಶಿವ ಹಾಗೂ ನಾಗಮೋಹನದಾಸ್ ವರದಿಗಳು ಕೂಡ ಸಮಾಜದ ಪರವಾಗಿದ್ದು ಮೀಸಲಾತಿ ಪಡೆಯಲು ನಮ್ಮ ಹಕ್ಕೊತ್ತಾಯ ಮಂಡಿಸಲಿದ್ದೇವೆ.

-ಸುನಿತಾ ಐಹೊಳೆ, ಮಾದಿಗ ಮೀಸಲಾತಿ ಸಮೀತಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು
ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ