ಲಕ್ಷ್ಮೇಶ್ವರದಲ್ಲಿ ಮುಂದುವರಿದ ಪೌರ ಕಾರ್ಮಿಕರ ಪ್ರತಿಭಟನೆ

KannadaprabhaNewsNetwork |  
Published : May 29, 2025, 12:49 AM IST
ಪೊಟೋ-ಪಟ್ಟಣದ ಪುರಸಭೆ ಎದರು ಪೌರಕಾರ್ಮಿಕಲರುಇ ನಡೆಸುತ್ತಿರುವ ಮುಷ್ಕರದ ಸ್ಥಳಕ್ಕೆ ಪೂರ್ಣಾಜಿ ಕರಾಟೆ ಬೇಟಿ ನೀಡಿ ಮಾತನಾಡಿ ಬೆಂಬಲ ಸೂಚಿಸಿದರು.  | Kannada Prabha

ಸಾರಾಂಶ

ರಾಜ್ಯಾದ್ಯಂತ ಪೌರ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಪಟ್ಟಣದ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪೌರ ಕಾರ್ಮಿಕರ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಲಕ್ಷ್ಮೇಶ್ವರದಲ್ಲಿ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ.

ಲಕ್ಷ್ಮೇಶ್ವರ: ರಾಜ್ಯಾದ್ಯಂತ ಪೌರ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಪಟ್ಟಣದ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪೌರ ಕಾರ್ಮಿಕರ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೇಷರತ್‌ ಬೆಂಬಲ ನೀಡಿವೆ.

ಈ ವೇಳೆ ಬುಧವಾರ ನಿವೃತ್ತ ಸರ್ಕಾರಿ ನೌಕರರ ಸಂಘದ ಸದಸ್ಯ ಪೂರ್ಣಾಜಿ ಕರಾಟೆ ಅವರು ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಪೌರ ಕಾರ್ಮಿಕರು ಇಲ್ಲದೆ ಆಡಳಿತ ನಡೆಸುವುದು ಅಸಾಧ್ಯದ ಮಾತು. ಪೌರ ಕಾರ್ಮಿಕರು ಕೆಲಸಕ್ಕೆ ಬಾರದ ಹೋದಲ್ಲಿ ಆ ಪಟ್ಟಣ, ನಗರಗಳು ಕೊಳಚೆ ಪ್ರದೇಶಗಳಾಗಿ ಮಾರ್ಪಾಡುತ್ತವೆ. ಕೊರೋನಾ ಕಾಲದಲ್ಲಿ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಪಟ್ಟಣದ ಸ್ವಚ್ಛತೆಗೆ ಶ್ರಮಿಸಿದರು. ಕೊರೋನಾ ಉಲ್ಬಣವಾದ ವೇಳೆ ಎಲ್ಲರೂ ರೋಗದ ಭಯದಲ್ಲಿ ಮನೆಯಲ್ಲಿ ಬೆಚ್ಚಗೆ ಕುಳಿತಿದ್ದ ವೇಳೆ ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆ ನಡೆಸಿದ್ದಾರೆ. ಇಂತಹ ಪೌರ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಸರ್ಕಾರ ಶೀಘ್ರದಲ್ಲಿ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಪೌರ ಕಾರ್ಮಿಕರು ಇಲ್ಲದೆ ಆಡಳಿತ ನಡೆಸುವುದು ಅಸಾಧ್ಯದ ಮಾತು. ಪೌರ ಕಾರ್ಮಿಕರು ಸ್ವಚ್ಛತೆಯ ಹರಿಕಾರರು. ಪೌರ ಕಾರ್ಮಿಕರ ಬೇಡಿಕೆಗಳು ನ್ಯಾಯಯುತವಾಗಿವೆ. ಆದ್ದರಿಂದ ಸರ್ಕಾರ ಶೀಘ್ರದಲ್ಲಿ ಈಡೇರಿಸಬೇಕು ಎಂದು ಅವರು ಹೇಳಿದರು.

ತಾಲೂಕು ಮುಖಂಡ ಬಸವಣ್ಣೆಪ್ಪ ನಂದೆಣ್ಣವರ, ದೇವೇಂದ್ರಪ್ಪ ನಂದೆಣ್ಣವರ, ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹಿರಿಯ ಅರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಕಂದಾಯ ಅಧಿಕಾರಿ ನಬಿ ಕಂದಗಲ್, ಎಸ್.ಪಿ. ಲಿಂಬಯ್ಯನಮಠ, ಹೇಮರಾಜ ಅಣ್ಣಿಗೇರಿ, ಶಿದ್ದು ಹಿರೇಮಠ, ಮಹೇಶ ಹೊಸಮನಿ, ನೇತ್ರಾ ಹೊಸಮನಿ, ಹನುಮಂತಪ್ಪ ನಂದೆಣ್ಣವರ, ಅಶೋಕ ನಡಗೇರಿ, ದುರ್ಗಪ್ಪ ಬಾಲಣ್ಣವರ, ನೀಲಪ್ಪ ನಂದೆಣ್ಣವರ, ಮುತ್ತಪ್ಪ ದೊಡ್ಡಮನಿ, ಗೋಣೆಪ್ಪ ಗಡದವರ, ಪರಶುರಾಮ ಮುಳುಗುಂದ, ಮಂಜುನಾಥ ನಂದೆಣ್ಣವರ, ವಿಶ್ವನಾಥ ಹಾದಿಮನಿ ಹಾಗೂ ಚಾಲಕರು, ಪೌರಕಾರ್ಮಿಕರ ಸಿಬ್ಬಂದಿ ಇದ್ದರು.

PREV

Recommended Stories

180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
ಮಾಲೀಕನ ಶವ ಕಂಡು ಪ್ರಾಣ ಬಿಟ್ಟ ಶ್ವಾನ