ಹೊರಗಿನ ಮಾವು ಆಗಮನ: ದರ ದಿಢೀರ್ ಕುಸಿತ

KannadaprabhaNewsNetwork |  
Published : May 29, 2025, 12:49 AM IST
ಸಿಕೆಬಿ-2 ಹಣ್ಣಿನ ಅಂಗಡಿಯಲ್ಲಿ ಗಿರಾಕಿಗಾಗಿ ಕಾಯುತ್ತಿರುವ ಹೊರಗಿನ ವಿವಿಧ ತಳಿಯ ಮಾವಿನ ಹಣ್ಣುಗಳು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಯಾವ ಮಾವಿನ ತೋಟಕ್ಕೆ ಹೋದರೂ ಮರದ ತುಂಬಾ ಕಾಯಿ ,ಮಾವಿನ ಮಂಡಿಯಲ್ಲಿ ಹೊರಗಿನಿಂದ ಆವಕವಾಗಿರುವ ಬಾಕ್ಸ್ ಗಳಲ್ಲೂ ಮತ್ತು ನೆಲದ ಮೇಲೂ ರಾಶಿ ರಾಶಿ ಮಾವಿನ ಹಣ್ಣುಗಳೆ ತುಂಬಿವೆ. ಈ ಬಾರಿ ಕಡಿಮೆ ಬೆಲೆಗೆ ಮಾವು ಮಾರಾಟವಾಗುತ್ತಿದೆ. ಈಗಲೇ ಹೊರಗಿನ ಮಾವಿನ ಹಣ್ಣು ಕೆಜಿಗೆ 20ರಿಂದ 40 ರುಪಾಯಂತೆ ಅಗ್ಗದ ಬೆಲೆಗೆ ಮಾರಾಟವಾಗುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವರ್ಷಕೊಮ್ಮೆ ಬರುವ ಮಾವಿನ ಸೀಸನ್‌ಗಾಗಿ ಬೆಳೆಗಾರ ಎದರುನೋಡುತ್ತಿರುತ್ತಾನೆ. ಆದರೆ ಹೊರಗಿನ ಮಾವು ಆಗಮನದ ಹಿನ್ನೆಲೆಯಲ್ಲಿ ಮಾವು ಮಾರುಕಟ್ಟೆಯಲ್ಲಿ ಮಾವಿಗೆ ಬೆಲೆ ಕುಸಿದಿದೆ. ಅದರಲ್ಲೂ ಈ ಭಾರಿ ಸ್ಥಳೀಯ ಮಾವು ಭರ್ಜರಿಯಾಗಿ ಫಸಲು ಬಿಟ್ಟಿದ್ದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಆದರೆ ಸ್ಥಳೀಯ ಮಾವಿಗೆ ಉತ್ತಮ ಬೆಲೆ ಸಿಗುವುದೂ ಅನುಮಾನವಾಗಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತ ಕಂಗಾಲಾಗಿದ್ದಾನೆ.

ಕಳೆದ ಕೆಲ ದಿನಗಳ ಹಿಂದೆ ಆಂಧ್ರಪ್ರದೇಶ ಮತ್ತು ರಾಮನಗರದ ಕಡೆಯಿಂದ ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಆಗಮಿಸಿದ್ದ ಮಾವು ಬೆಲೆ ಏರಿಕೆಯತ್ತ ಮುಖ ಮಾಡಿ, ಮಾವು ಬೆಳಗಾರನಲ್ಲಿ ಸಂತಸ ಮೂಡಿಸಿತ್ತು. ಆದರೆ 10-15 ದಿನ ಕಳೆಯುವುದರಲ್ಲಿ ಏಕಾಏಕಿ ಬೆಲೆ ಕುಸಿತ ಗೊಂಡ ಮಾವು ಬೆಳಗಾರರು ಕಂಗಾಲಾಗಿದ್ದಾರೆ.

ಹೊರಗಿನಿಂದ ಬಂದ ಮಾವು ಅಗ್ಗ

ಜಿಲ್ಲೆಯಲ್ಲಿ ಯಾವ ಮಾವಿನ ತೋಟಕ್ಕೆ ಹೋದರೂ ಮರದ ತುಂಬಾ ಕಾಯಿ ,ಮಾವಿನ ಮಂಡಿಯಲ್ಲಿ ಹೊರಗಿನಿಂದ ಆವಕವಾಗಿರುವ ಬಾಕ್ಸ್ ಗಳಲ್ಲೂ ಮತ್ತು ನೆಲದ ಮೇಲೂ ರಾಶಿ ರಾಶಿ ಮಾವಿನ ಹಣ್ಣುಗಳೆ ತುಂಬಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಬೆಲೆಗೆ ಮಾವು ಮಾರಾಟವಾಗುತ್ತಿದೆ. ಈಗಲೇ ಹೊರಗಿನ ಮಾವಿನ ಹಣ್ಣು ಕೆಜಿಗೆ 20ರಿಂದ 40 ರುಪಾಯಂತೆ ಅಗ್ಗದ ಬೆಲೆಗೆ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ರೈತ 40 ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಬೆಳೆದಿದ್ದಾನೆ. ಚಿಕ್ಕಬಳ್ಳಾಪುರದ ಮಾವಿನ ಹಣ್ಣು ಹೊರ ದೇಶಗಳಿಗೆ ಉತ್ತಮ ದರಕ್ಕೆ ರಪ್ತಾಗುತಿತ್ತು, ಇಮಾಯತ್ ಮಾವಿನ ಹಣ್ಣಿನ ಬೆಲೆ 70 ರುಪಾಯಿಂದ 50 ರುಪಾಯಿಗೆ ಕುಸಿದಿದೆ. ಮಲ್ಲಿಕಾ 50 ರಿಂದ 30 ರು.ಗಳಿಗೆ, ಸಿಂದೂರ 20 ರಿಂದ 12 ರು.ಗಳಿಗೆ, ರಸಪೂರಿ 40 ರಿಂದ 25 ರು.ಗಳಿಗೆ, ಬೆನಿಷಾ 20 ರಿಂದ 15 ರು, ಬಂಗಿನಪಲ್ಲಿ 110 ರೂ 50 ರು.ಗಳಿಗೆ, ತೋತಾಪೂರಿ 20 ರಿಂದ 10 ರು.ಗಳಿಗೆ ಕುಸಿದಿದೆ.

ಏಕ ಕಾಲಕ್ಕೆ ಮಾರುಕಟ್ಟೆಗೆ ಲಗ್ಗೆ

ಈ ಬಾರಿ ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳು ಸೇರಿದಂತೆ ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳು ನಾಡುಗಳಲ್ಲಿಯೂ ಮಾವಿನ ಇಳುವರಿ ಹೆಚ್ಚಾಗಿದ್ದು, ಎಲ್ಲವೂ ಏಕ ಕಾಲಕ್ಕೆ ಮಾರುಕಟ್ಟೆ ಪ್ರವೇಶಿಸಿದ್ದು, ದರ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಗೆ ಆಗಲಿರುವ ನಷ್ಟ ತುಂಬಿಸುವಂತೆ ಮಾವು ಬೆಳೆಗಾರರ ಮತ್ತು ರೈತ ಸಂಘಗಳು ಒತ್ತಾಯಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ
ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?