ಹರಿಹರ ತಾಲೂಕು ಕುರುಬ ಸಂಘದಿಂದ ಪ್ರತಿಭಟನೆ

KannadaprabhaNewsNetwork |  
Published : Aug 14, 2025, 01:00 AM IST
12ಎಚ್‍ಆರ್‍ಆರ್ 04:ಹರಿಹರ ತಾಲೂಕು ಕುರುಬರ ಸಂಘದ ವತಿಯಿಂದ ಮಂಗಳವಾರ ಮುಖ್ಯಮಂತ್ರಿ ಹಾಗೂ ಕುರುಬ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗ್ರೇಡ್2 ತಹಸೀಲ್ದಾರ್ ಪುಷ್ಪಾವತಿಯವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ಎಸ್.ರಾಮಪ್ಪ, ನಂದಿಗಾವಿ  ಶ್ರೀನಿವಾಸ್  ಹಾಗೂ ಇತರರಿದ್ದರು. | Kannada Prabha

ಸಾರಾಂಶ

ಕುರುಬ ಸಮಾಜ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನವಾಗಿ ಮಾತನಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹರಿಹರ ತಾಲೂಕು ಕುರುಬರ ಸಂಘದಿಂದ ಮಂಗಳವಾರ ಗ್ರೇಡ್-2 ತಹಸೀಲ್ದಾರ್ ಪುಷ್ಪಾವತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

- ಸಿದ್ದರಾಮಯ್ಯ ಬಗ್ಗೆ ಅವಹೇಳನ ತೀವ್ರವಾಗಿ ಖಂಡಿಸುತ್ತೇನೆ: ಮಾಜಿ ಶಾಸಕ ರಾಮಪ್ಪ

- - -

ಕನ್ನಡಪ್ರಭ ವಾರ್ತೆ ಹರಿಹರ

ಕುರುಬ ಸಮಾಜ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನವಾಗಿ ಮಾತನಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹರಿಹರ ತಾಲೂಕು ಕುರುಬರ ಸಂಘದಿಂದ ಮಂಗಳವಾರ ಗ್ರೇಡ್-2 ತಹಸೀಲ್ದಾರ್ ಪುಷ್ಪಾವತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಕೆಇಬಿ ವೃತ್ತ ಬಳಿಯಿರುವ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಗಾಂಧಿ ವೃತ್ತದ ಮೂಲಕ ತಾಲೂಕು ಕಚೇರಿವರೆಗೆ ಸಾಗಿ, ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ದೇಶದ ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಅಹಿಂದ ವರ್ಗದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನ ಮಾತು ತೀವ್ರವಾಗಿ ಖಂಡಿಸುತ್ತೇನೆ. ಸಿದ್ದರಾಮಯ್ಯ ಹಾಗೂ ಕುರುಬ ಸಮಾಜ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುವ ಮೂಲಕ ರಾಜ್ಯದ ಸಮಾಜದ ಬಾಂಧವರನ್ನು ಕೇರಳಿಸಿದ್ದಾರೆ. ರಾಜ್ಯ ಗೃಹ ಸಚಿವರು ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಗ್ರೇಡ್- 2 ತಹಸೀಲ್ದಾರ್‌ ಪುಷ್ಪಾವತಿ ಅವರಿಗೆ ಮನವಿ ಅರ್ಪಿಸಲಾಯಿತು. ಬಳಿಕ ಮುಖಂಡರು ನಗರದ ಪೊಲೀಸ್ ಠಾಣೆಗೂ ತೆರಳಿ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ಕುರುಬರ ಸಮಾಜದ ತಾಲೂಕು ಅಧ್ಯಕ್ಷ ಹಾಲೇಶಪ್ಪ ಪೂಜಾರ್, ಉಪಾಧ್ಯಕ್ಷ ಕರಿಬಸಪ್ಪ, ಕಾರ್ಯದರ್ಶಿ ಎನ್.ಚಂದ್ರಪ್ಪ ಮುಖಂಡರಾದ ಹಾಲಿವಾಣದ ಪರಮೇಶ್ವರಪ್ಪ, ಕುಂಬಳೂರು ವಿರೂಪಾಕ್ಷಪ್ಪ, ಕೆ.ಜಡಿಯಪ್ಪ, ವೈ.ಎನ್.ಮಹೇಶ್, ಕೆ.ಬಿ.ರಾಜಶೇಖರ್, ಸುರೇಶ್ ಪೈಲ್ವಾನ್, ಚೂರಿ ಜಗದೀಶ್, ಕಮಲಾಪುರ ಮಲ್ಲೇಶ್, ಕೆ.ಪಿ.ಗಂಗಾದರ, ರಾಜನಹಳ್ಳಿ ಬೀರಪ್ಪ, ಬೆಳ್ಳೂಡಿ ಉಮೆಶ್, ಸಿ.ಎನ್.ಹುಲಿಗೇಶ್, ಮಹಾಂತೇಶ್, ಶಿವಾನಂದ ಇತರರಿದ್ದರು.

- - -

(ಕೋಟ್‌) ಮಂಡ್ಯ ಜಿಲ್ಲೆಯ ಬೆನ್ನಹಟ್ಟಿ ಗ್ರಾಮದ ಯುವಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುರುಬ ಸಮಾಜ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿ, ನಿಂದಿಸಿದ್ದಾರೆ. ಇದು ಕ್ಷಮಿಸಲಾರದ ಅಪರಾಧ. ರಾಜ್ಯದಲ್ಲಿ ಎಲ್ಲ ಸಮುದಾಯಗಳೊಂದಿಗೆ ಕುರುಬ ಸಮಾಜದ ಬಾಂಧವರು ಅನ್ಯೂನತೆಯಿಂದ ಬಾಳುತ್ತಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನೀಡುವ ಕೆಲ ಕೀಡಿಗೇಡಿಗಳು ಜಾತಿಗಳ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆ. ಅಂಥವರ ಮೇಲೆ ಸೂಕ್ತ ಕಾನೂನು ಕ್ರಮವಾಗಬೇಕು.

- ನಂದಿಗಾವಿ ಶ್ರೀನಿವಾಸ್, ಮುಖಂಡ

- - -

-12ಎಚ್‍ಆರ್‍ಆರ್ 04:

ಮುಖ್ಯಮಂತ್ರಿ ಹಾಗೂ ಕುರುಬ ಸಮಾಜ ಬಗ್ಗೆ ಅವಹೇಳನವಾಗಿ ಮಾತನಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹರಿಹರ ತಾಲೂಕು ಕುರುಬರ ಸಂಘದಿಂದ ಗ್ರೇಡ್2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ಎಸ್.ರಾಮಪ್ಪ, ನಂದಿಗಾವಿ ಶ್ರೀನಿವಾಸ್ ಹಾಗೂ ಇತರರಿದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ