ಮಂಡ್ಯ ಜಿಲ್ಲಾ ಕ್ರೀಡಾ ಒಕ್ಕೂಟದ ಕಾರ್ಯಕರ್ತರಿಂದ ಪ್ರತಿಭಟನೆ

KannadaprabhaNewsNetwork |  
Published : Oct 07, 2026, 01:45 AM IST
೬ಕೆಎಂಎನ್‌ಡಿ-೨ಮಂಡ್ಯದ ಒಳಾಂಗಣ ಕ್ರೀಡಾಂಗಣದಲ್ಲಿ ಕನ್ನಡ ಭವನ ನಿರ್ಮಾಣ ವಿರೋಧಿಸಿ ಜಿಲ್ಲಾ ಕ್ರೀಡಾ ಒಕ್ಕೂಟದ ಕಾರ‌್ಯಕರ್ತರು, ಆಟಗಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಳೆದ ೪೦ ವರ್ಷಗಳಿಂದಲೂ ಈ ಜಾಗದಲ್ಲಿ ಕ್ರೀಡಾಚಟುವಟಿಕೆಗಳು ನಡೆಯುತ್ತಿವೆ. ವಾಲಿಬಾಲ್ ಹಾಗೂ ಇತರೆ ಕ್ರೆಡಾ ಚಟುವಟಿಕೆಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬಿಡುಗಡೆಗೊಂಡ ಅನುದಾನದಲ್ಲಿ ಅಂದಿನ ಶಾಸಕ ಎಂ. ಶ್ರೆನಿವಾಸ್ ಅವರು ಗುದ್ದಲಿಪೂಜೆ ನೆರವೇರಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಬಿಡುಗಡೆಯಾದ ಹಣ ಎಲ್ಲಿ ಹೋಯಿತು..?.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಒಳಾಂಗಣ ಕ್ರೀಡಾ ಸಂಕೀರ್ಣದ ಬಳಿ ಕನ್ನಡ ಭವನ ನಿರ್ಮಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಜಿಲ್ಲಾ ಕ್ರೀಡಾ ಒಕ್ಕೂಟದ ಕಾರ್ಯಕರ್ತರು, ಆಟಗಾರರು ನಗರದಲ್ಲಿ ಬೈಕ್ ರ್‍ಯಾಲಿ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಪ್ರತಿಭಟನಾಕಾರರು, ಒಳಾಂಗಣ ಕ್ರೀಡಾ ಸಂಕೀರ್ಣ ಆವರಣದಲ್ಲಿ ೨ ಸುಸಜ್ಜಿತವಾದ ವಾಲಿಬಾಲ್ ಅಂಕಣಗಳನ್ನು ಹಾಗೂ ಇತರೆ ಕ್ರೀಡಾ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವಂತೆ ನಿರ್ಮಾಣ ಮಾಡಲು ಆದೇಶವಾಗಿದ್ದು, ಇತ್ತೀಚೆಗೆ ಈ ಜಾಗದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿದರು.

ಕಳೆದ ೪೦ ವರ್ಷಗಳಿಂದಲೂ ಈ ಜಾಗದಲ್ಲಿ ಕ್ರೀಡಾಚಟುವಟಿಕೆಗಳು ನಡೆಯುತ್ತಿವೆ. ವಾಲಿಬಾಲ್ ಹಾಗೂ ಇತರೆ ಕ್ರೆಡಾ ಚಟುವಟಿಕೆಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬಿಡುಗಡೆಗೊಂಡ ಅನುದಾನದಲ್ಲಿ ಅಂದಿನ ಶಾಸಕ ಎಂ. ಶ್ರೆನಿವಾಸ್ ಅವರು ಗುದ್ದಲಿಪೂಜೆ ನೆರವೇರಿಸಿದ್ದರು. ಆದರೆ ಅದು ಕಾರ‌್ಯರೂಪಕ್ಕೆ ಬರಲಿಲ್ಲ. ಬಿಡುಗಡೆಯಾದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ನಂತರ ೨೦೨೨ನೇ ಇಸವಿ ಡಿಸೆಂಬರ್ ೧೫ನೇ ತಾರೀಖಿನಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು, ಜಿಲ್ಲಾ ಕ್ರೀಡಾಂಗಣ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯ ನಡವಳಿಯಂತೆ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಹಾಗೂ ಇತರೆ ಕ್ರೀಡಾ ಚಟುವಟಿಕೆಗಳಿಗೂ ಸಹ ಅನುಕೂಲವಾಗುವಂತೆ ೨ ಸುಸಜ್ಜಿತ ವಾಲಿಬಾಲ್ ಅಂಕಣಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿ, ನಿರ್ಮಿತಿ ಕೇಂದ್ರದಿಂದ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಆದರೆ ಅದು ನೆನಗುದಿಗೆ ಬಿದ್ದಿದೆ ಎಂದು ದೂರಿದರು.

ಒಟ್ಟು ೬೪ ಲಕ್ಷ ರು. ವೆಚ್ಚದಲ್ಲಿ ವಾಲಿಬಾಲ್ ಅಂಕಣಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ೨೮ ಲಕ್ಷ ರು. ಹಣ ಮಂಡ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಬಿಡುಗಡೆಯಾಗಿತ್ತು. ಆದರೆ ಕಾಮಗಾರಿ ಪ್ರಾರಂಭಿಸಲಿಲ್ಲ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಡಾ. ಕುಮಾರ ಅಧ್ಯಕ್ಷತೆಯಲ್ಲಿ ಕಳೆದ ೨೦೨೨ರ ಡಿಸೆಂಬರ್ ೧೫ರಂದು ರಂದು ಜಿಲ್ಲಾ ಕ್ರೆಡಾಂಗಣ ಸಮಿತಿ ಸಭೆಯಲ್ಲಿ ಕ್ರೆಡಾಂಗಣಕ್ಕೆ ಮೀಸಲಾಗಿದ್ದ ಜಾಗದಲ್ಲಿ ಕನ್ನಡ ಭವನ ಕಟ್ಟಲು ಅನುಮತಿ ನೀಡುವ ಮೂಲಕ ಜಿಲ್ಲಾಧಿಕಾರಿಗಳೇ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಕ್ರೀಡಾಂಗಣವು ಸಾರ್ವಜನಿಕರ ಮತ್ತು ಕ್ರೀಡಾಪಟುಗಳ ಆಸ್ತಿಯಾಗಿದೆ. ಕ್ರೀಡಾ ಮೈದಾನವನ್ನು ಕಸಿದುಕೊಳ್ಳುವುದು ಯುವಕರ ಪ್ರತಿಭೆಯನ್ನು ಹತ್ತಿಕ್ಕಿದಂತೆ. ಕ್ರೀಡಾಂಗಣವನ್ನು ಅತಿಕ್ರಮಣದಿಂದ ಮುಕ್ತಿಗೊಳಿಸಿ ಕ್ರೀಡೆಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಇದು ಕೇವಲ ವಿನಂತಿಯಲ್ಲ, ಕ್ರೀಡಾ ಪ್ರೇಮಿಗಳ ಹಕ್ಕೊತ್ತಾಯವಾಗಿದ್ದು, ಕ್ರೀಡಾ ಇಲಾಖೆ ಈ ವಿಚಾರದ ಬಗ್ಗೆ ಕ್ರಮ ವಹಿಸದೆ ಕಣ್ಣು ಮುಚ್ಚಿ ಮೌನ ತಾಳಿರುವುದು ಏಕೆ ಎಂದು ಪ್ರಶ್ನಿಸಿದರು.

ಒಳಾಂಗಣ ಕ್ರೀಡಾ ಸಂಕೀರ್ಣದ ಆವರಣದಲ್ಲಿ ಕ್ರೀಡೆಗೆ ಮೀಸಲಾಗಿದ್ದ ಜಾಗದಲ್ಲಿ ಕನ್ನಡ ಭವನ ನಿರ್ಮಿಸುವ ಬದಲು ಬೇರೆ ಸೂಕ್ತವಾದ ಹಾಗೂ ಇನ್ನೂ ದೊಡ್ಡದಾಗಿ ಪಾರ್ಕಿಂಗ್ ವ್ಯವಸ್ಥೆ ಭವನದ ಸುತ್ತಮುತ್ತಲೂ ಸಾಕಾಗುವಷ್ಟು ಜಾಗ ಹಾಗೂ ಇತರೆ ಎಲ್ಲಾ ಸೌಲಭ್ಯಗಳು ಒಳಗೊಂಡಂತೆ ನಿರ್ಮಿಸಲು ಕೇಳಿಕೊಳ್ಳುತ್ತಾ, ಈ ಸ್ಥಳವನ್ನು ಕ್ರೀಡಾಪಟುಗಳಿಗೆ ಕ್ರೆಡಾ ಚಟುವಟಿಕೆಗಳಿಗೆ ಮಾತ್ರ ಮೀಸಲಿಟ್ಟು, ಕ್ರೀಡೆ ಬೆಳೆಸಿ ಕ್ರೀಡೆ ಉಳಿಸಿ ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಎಂದು ಒತ್ತಾಯಿಸಿದರು.

ಮಂಡ್ಯ ಜಿಲ್ಲಾ ವಾಲಿಬಾಲ್ ಸಂಸ್ಥೆ ಪ್ರಧಾನಕಾರ್ಯದರ್ಶಿ ಎಂ.ಕೆ.ಸೋಮಶೇಖರ್, ಕಬಡ್ಡಿ ಸಂಸ್ಥೆ ಅಧ್ಯಕ್ಷ ಶಿವಲಿಂಗಯ್ಯ, ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಸತ್ಯಾನಂದ, ಖೋಖೋ ಕ್ರೆಡಾ ಸಂಸ್ಥೆ ಅಧ್ಯಕ್ಷ ಜಿ.ಟಿ. ಉಮೇಶ್, ಮುಖಂಡರಾದ ಎಚ್.ಡಿ. ಜಯರಾಂ, ಎಂ.ಬಿ. ನಾಗಣ್ಣಗೌಡ, ರಾಜೇಂದ್ರಸಿಂಗ್‌ಬಾಬು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ದಾವಣಗೆರೆ ಕಾಂಗ್ರೆಸ್ ದೂರು
ಶಿಥಿಲ, ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿ ನೀಡಿ: ಶಾಂತನಗೌಡ