
ಬ್ಯಾಡಗಿ: ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ಹಾಯ್ದು ಹೋಗಿರುವ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ ದುರಸ್ತಿ ಕಾಣದೇ ಬಿದ್ದ ಗುಂಡಿಗಳಲ್ಲಿ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಗುಂಡಿಗಳಲ್ಲಿ ಸಸಿ ನೆಡುವ ಮೂಲಕ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ರೈತ ಸಂಘದ ಸದಸ್ಯ ಮಲ್ಲೇಶಪ್ಪ ಡಂಬಳ, ಗ್ರಾಮದ ಮೂಲಕ ಹಾಯ್ದು ಹೋಗಿರುವ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ ಗ್ರಾಮೀಣ ರಸ್ತೆಗಳಿಂದ ಕಡೆಯಾಗಿದೆ. ಎಲ್ಲೆಂದರಲ್ಲಿ ಬಿದ್ದಿರುವ ತಗ್ಗುಗಳಿಂದ ರಸ್ತೆ ಸಂಚಾರ ದುಸ್ತರವಾಗಿದೆ. ಗ್ರಾಮದ ಎದುರಿಗೆ ಹಾದು ಹೋಗಿರುವ ರಸ್ತೆಯಲ್ಲಿ ಬಿದ್ದಿರುವ ಹತ್ತಾರು ಗುಂಡಿಗಳು, ಸಂಚಾರವನ್ನು ಹದಗೆಡಿಸಿವೆ. ವಾಹನ ಸವಾರರ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ದುರಸ್ತಿ ಮಾಡುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಚಿಕ್ಕಣಜಿ ಗ್ರಾಮದ ಅಂಗನವಾಡಿ ಹಾಗೂ ಶಾಲೆಗಳ ಮುಂದೆಯೇ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ರಸ್ತೆ ಅದ್ವಾನವಾಗಿವೆ. ಇದರಿಂದ ಮಕ್ಕಳು ರಸ್ತೆ ದಾಟಿ ಹೋಗುವುದು ಕಷ್ಟಸಾಧ್ಯವಾಗಿದೆ. ಅಲ್ಲದೇ ರಸ್ತೆ ಮಣ್ಣಿನ ರಸ್ತೆಗಿಂತ ಕಡೆಯಾಗಿದೆ. ಇದರಿಂದ ವಾಹನಗಳು ಗುಂಡಿಯಲ್ಲಿ ಸಿಲುಕಿ ಸಂಚಾರ ನರಕವಾಗಿದೆ. ಕೂಡಲೇ ಹಾಳಾಗಿರುವ ರಸ್ತೆ ದುರಸ್ತಿ ಮಾಡಿಸಿ. ಇಲ್ಲದಿದ್ದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ನೂರರು ಗ್ರಾಮಸ್ಥರು ಉಪಸ್ಥಿತರಿದ್ದರು.ಬೈಕ್‌ನಲ್ಲಿಟ್ಟಿದ್ದ ₹2 ಲಕ್ಷ ಎಗರಿಸಿದ ಕಳ್ಳರು