1 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉಪನ್ಯಾಸಕರನ್ನು ಯಾವುದೇ ಆರೋಪ, ಕಳಂಕ ಇಲ್ಲದಿದ್ದರೂ ಕಾರ್ಯಭಾರ ನೆಪದಲ್ಲಿ ಏಕಾಏಕಿ ಕರ್ತವ್ಯದಿಂದ ತೆಗೆದಿರುವ ಕ್ರಮ ಸರಿಯಲ್ಲ
ಹೂವಿನಹಡಗಲಿ: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದಡಿಯಲ್ಲಿನ ಜಿಬಿಆರ್ ಪದವಿಪೂರ್ವ ಕಾಲೇಜಿನಲ್ಲಿ ಕಳೆದ 31 ವರ್ಷ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಎಂಪಿಎಂ ಶಿವಪ್ರಕಾಶ್ ಇವರನ್ನು ಏಕಾಏಕಿ ಸೇವೆಯಿಂದ ಕೈ ಬಿಟ್ಟಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕಾಲೇಜು ಮುಂಭಾಗದಲ್ಲಿ ಪ್ರತಿಭಟಿಸಲಾಯಿತು.
ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಎಐಟಿಯುಸಿ ಮುಖಂಡ ಸುರೇಶ ಹಲಗಿ, ಎಂ.ಜಗದೀಶ, ಎಂ.ದಯಾನಂದ, ಚಂದ್ರಪ್ಪ ತಳಕಲ್ಲು, ಬೀರಬ್ಬಿ ಮಲ್ಲಿಕಾರ್ಜುನ ಮಾತನಾಡಿ, 31 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉಪನ್ಯಾಸಕರನ್ನು ಯಾವುದೇ ಆರೋಪ, ಕಳಂಕ ಇಲ್ಲದಿದ್ದರೂ ಕಾರ್ಯಭಾರ ನೆಪದಲ್ಲಿ ಏಕಾಏಕಿ ಕರ್ತವ್ಯದಿಂದ ತೆಗೆದಿರುವ ಕ್ರಮ ಸರಿಯಲ್ಲ. ನೊಂದ ಉಪನ್ಯಾಸಕರಿಗೆ ಸೇವಾ ಹಾಗೂ ಹಾಜರಾತಿ ಪ್ರಮಾಣ ನೀಡದಿರುವುದು ಆಡಳಿತ ಮಂಡಳಿಯ ದುರಂಕಾರದ ನಡೆಯಾಗಿದೆ ಎಂದು ದೂರಿದರು.
ಉಪನ್ಯಾಸಕ ಶಿವಪ್ರಕಾಶ್ ಮಾತನಾಡಿ, ಜಿಬಿಆರ್ ಕಾಲೇಜಿನಲ್ಲಿ 31 ವರ್ಷ ಸೇವೆ ಸಲ್ಲಿಸಿದ ನನ್ನನ್ನು ಆಡಳಿತ ಮಂಡಳಿ ಅಧ್ಯಕ್ಷರು, ಸೇವೆಯಿಂದ ಕೈ ಬಿಟ್ಟು ಬೀದಿಯಲ್ಲಿ ನಿಲ್ಲಿಸಿದ್ದಾರೆ. ಸೇವಾ ದಾಖಲೆ ನೀಡದೇ ಸತಾಯಿಸುತ್ತಿದ್ದಾರೆ. ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯುತ್ತೇನೆಂದು ಎಂದರು.
ರೈತ ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಮುಜುಬು ರಹಿಮಾನ್, ಸುಭಾನ್, ಎಂ. ಧನುಷ್, ಕೆ.ಸಿ. ಪರಶುರಾಮ, ಉಮೇಶ ಸೊಪ್ಪಿನ, ಮಡ್ಡಿ ಮಂಜುನಾಥ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.