ಸತ್ತೇಗಾಲ ಬೈಪಾಸ್ ಬಳಿ ಬಸ್ ತಡೆದು ಪ್ರತಿಭಟನೆ

KannadaprabhaNewsNetwork |  
Published : Jun 17, 2025, 04:34 AM IST
ಬೈಪಾಸ್ ರಸ್ತೆ ಬಳಿ ಬಸ್ ತಡೆದು  ವಿದ್ಯಾರ್ಥಿಗಳು, ಸಂಘಟನೆಗಳ ಪ್ರತಿಭಟನೆ | Kannada Prabha

ಸಾರಾಂಶ

ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನ ಬೈಪಾಸ್ ರಸ್ತೆಯಲ್ಲಿ ವಿದ್ಯಾರ್ಥಿಗಳು, ಕರವೇ (ನಾರಾಯಣ ಗೌಡ ಬಣ), ರೈತ ಸಂಘ ಹಾಗೂ ಗ್ರಾಮಸ್ಥರು ಬಸ್‌ನ್ನು ತಡೆದು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಸತ್ತೇಗಾಲ, ಹ್ಯಾಂಡ್‌ಪೋಸ್ಟ್ ಗ್ರಾಮಗಳಿಗೆ ಬಸ್‌ಗಳು ಬರುತ್ತಿಲ್ಲ, ಬೈಪಾಸ್‌ನಲ್ಲಿ ತೆರಳುತ್ತಿರುವುದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ವಿದ್ಯಾರ್ಥಿಗಳ ನೇತೃತ್ವದಲ್ಲಿ ಕೆಲಕಾಲ ಬೈಪಾಸ್ ರಸ್ತೆ ಮೂಲಕ ತೆರಳುವ ಬಸ್‌ಗಳನ್ನು ತಡೆದು ಪ್ರತಿಭಟಿಸಿದರು.

ಸೋಮವಾರ ಬೆಳಗ್ಗೆ ಬೈಪಾಸ್ ಮೂಲಕ ತೆರಳುತ್ತಿದ್ದ ಬಸ್‌ಗಳನ್ನು ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬಸ್ ತಡೆದು ಪ್ರತಿಭಟಿಸಿದರು.

ಬಸ್‌ಗಳು ಸತ್ತೇಗಾಲ, ಹ್ಯಾಂಡ್‌ಪೋಸ್ಟ್ ಮಾರ್ಗವಾಗಿ ತೆರಳುತ್ತಿಲ್ಲ, ಗ್ರಾಮದ ಒಳಗಡೆಗೆ ಬಸ್ ಆಗಮಿಸದ ಹಿನ್ನೆಲೆ ವಿದ್ಯಾರ್ಥಿಗಳು ಮತ್ತು ತುರ್ತು ತೆರಳಬೇಕಾದ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಬೈಪಾಸ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನ ಬೈಪಾಸ್ ರಸ್ತೆಯಲ್ಲಿ ವಿದ್ಯಾರ್ಥಿಗಳು, ಕರವೇ (ನಾರಾಯಣ ಗೌಡ ಬಣ), ರೈತ ಸಂಘ ಹಾಗೂ ಗ್ರಾಮಸ್ಥರು ಬಸ್‌ನ್ನು ತಡೆದು ಪ್ರತಿಭಟಿಸಿದರು. ಬಸ್ ಗ್ರಾಮದೊಳಗೆ ಪ್ರವೇಶಿಸದ ಹಿನ್ನೆಲೆ ತೊಂದರೆ ಅನುಭವಿಸುವಂತಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದರು.ಕೆಲಕಾಲ ರಸ್ತೆ ತಡೆ ಪ್ರತಿಭಟನೆಯಿಂದಾಗಿ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ವಿಚಾರ ತಿಳಿದು ಸ್ಥಳಕ್ಕೆ ಡಿಪೋ ವ್ಯವಸ್ಥಾಪಕರಾದ ಭೋಗನಾಯಕ್ ಭೇಟಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ತಡೆರಹಿತ ಬಸ್ ಹೊರತುಪಡಿಸಿ ಉಳಿದ ಬಸ್‌ಗಳು ಗ್ರಾಮದೊಳಗೆ ಪ್ರವೇಶಿಸಬೇಕು. ಈನಿಟ್ಟಿನಲ್ಲಿ ಕ್ರಮವಹಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು.ಈ ವೇಳೆ ಯಶ್ವಂತ್ ಗೌಡ, ವರ್ಷಿತ್, ರಘು , ಮನೋಜ್, ಚಂದನ್, ಸಂಜಯ್, ಸಿದ್ದೇಶ್, ಕಿಶೋರ್ ಗೌಡ, ಲೋಕೇಶ್ ಗೌಡ, ನಿಶಾಂತ್ ಗೌಡ, ನವೀನ್, ಸುದರ್ಶನ್, ಶಿವು, ಜಗ್ಗ, ಕರವೇ (ನಾರಾಯಣ ಗೌಡ ಬಣ) ಸತ್ತೇಗಾಲ ಗ್ರಾಮಘಟಕ ಅಧ್ಯಕ್ಷ ಶಬೀರ್ ಪಾಷ, ಗೌರವಧ್ಯಕ್ಷ ಮಹಮ್ಮದ್ ಇರ್ಫಾನ್ ವರಸಿ, ಸಿದ್ದೀಖ್ ಪಾಷ, ಅಮೀರ್ ಜಾನ್, ಸುಲ್ತಾನ್, ಆರೀಫ್, ಯೂಸಫ್, ಪ್ರದೀಪ್ ಕುಮಾರ್, ರೈತ ಸಂಘದ ಭಾಸ್ಕರ್, ಶಿವಕುಮಾರ್, ಶಿವಲಿಂಗಯ್ಯ, ಮುಜ್ಜು, ಶಿವಬಸವಯ್ಯ, ಡಿ.ಶಿವಶಂಕರ್, ಸಿದ್ದರಾಜು ಇನ್ನಿತರರು ಇದ್ದರು----

16ಕೆಜಿಎಲ್ 1ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಬೈಪಾಸ್ ರಸ್ತೆಯಲ್ಲಿ ಗ್ರಾಮದೊಳಗೆ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ