ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದಲ್ಲಿ ಸೋಮವಾರ ಅಥಣಿ ನ್ಯಾಯವಾದಿಗಳ ಸಂಘದ ವಕೀಲರು ಪ್ರತಿಭಟನಾ ಮೆರವಣಿಗೆ ನಡೆಸಿ ಕೈಗೆ ಕೆಂಪು ಬಟ್ಟೆ ಧರಿಸಿ ಪ್ರಮುಖ ಬೀದಿಗಳ ಪ್ರತಿಭಟನೆ ನಡೆಸಿ ಹಲ್ಯಾಳ ವೃತ್ತದಲ್ಲಿ ಸಭೆ ನಡೆಸಿ ಅಥಣಿ ತಹಸೀಲ್ದಾರ್ ಸಿದ್ರಾಯ ಭೋಸಗಿ ಅವರಿಗೆ ಮನವಿ ಸಲ್ಲಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಬಿ.ಖೋಕಲೆ, ಹಿರಿಯ ನ್ಯಾಯವಾದಿ ಕಲ್ಲಪ್ಪ ವಣಜೋಳ ಮಾನಾತನಾಡಿದರು. ಈ ವೇಳೆ ಬಾಹುಸಾಹೇಬ ಕಾಂಬಳೆ, ಸುನಿಲ ಸಂಕ, ಬಿ.ಐ.ಡಂಗಿ, ಬಿ.ಎಸ್.ಪಾಟೀಲ, ಜಿ.ಟಿ.ಕಾಂಬಳೆ, ಎ.ಎಸ್.ಹುಚಗೌಡರ, ಮಿತೇಶ ಪಟ್ಟಣ, ಶಶಿ ಬಾಡಗಿ, ಬಂಗಾರಪ್ಪ ಕಾಂಬಳೆ, ಅರುಣ ಮೇಲಗಡೆ, ರಾಮ ಮರಳೆರ, ರೇಖಾ ಪಾಟೀಲ, ವಿದ್ಯಾ ಖುರ್ಧ, ವಿ.ಎಸ್.ದೇಸಾಯಿ ಸೇರಿದಂತೆ ಹಲವು ನ್ಯಾಯವಾದಿಗಳು ಉಪಸ್ಥಿತರಿದ್ದರು.
ನ್ಯಾಯವಾದಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳು ನಿಲ್ಲಬೇಕು. ನ್ಯಾಯದ ಪರವಾಗಿ ವಾದಿಸುವ ವಕೀಲರ ಮೇಲೆ ಹಲ್ಲೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ನ್ಯಾಯವಾದಿಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಭಾರತೀಯ ವಕೀಲರ ಪರಿಷತ್‌ನ ಕೋ-ಚೇರಮನ್ ಹಿರಿಯ ನ್ಯಾಯವಾದಿ ಸದಾಶಿವರಡ್ಡಿ ಮೇಲೆ ಹಲ್ಲಿ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು.-ಎನ್.ಬಿ.ಖೋಕಲೆ,
- ಕಲ್ಲಪ್ಪ ವಣಜೋಳ, ಹಿರಿಯ ನ್ಯಾಯವಾದಿ.