ನೀರು ಪೂರೈಸದಿದ್ದರೆ 28ಕ್ಕೆ ಪ್ರತಿಭಟನೆ

KannadaprabhaNewsNetwork |  
Published : Apr 24, 2025, 12:30 AM IST
ತ್ರ ಶೀರ್ಷಿಕೆ - ಧಂಗಾಪುರಆಳಂದ: ಧಂಗಾಪೂರ ಗ್ರಾಮದ ಭೀಮ ನಗರದಲ್ಲಿ ನೀರು ಸೋರಿಕೆಯ ರಿಪೇರಿ ಮಾಡಲು ತೆಗ್ಗು ತೋಡಿರುವ ಚಿತ್ರ. | Kannada Prabha

ಸಾರಾಂಶ

ಗ್ರಾಮಗಳಲ್ಲಿ ಗ್ರಾಪಂ ಆಡಳಿತ ಕುಸಿತ: ಚಂದ್ರಶೇಖರ

ಕನ್ನಡಪ್ರಭ ವಾರ್ತೆ ಆಳಂದ

ಗ್ರಾಮಗಳಲ್ಲಿ ಗ್ರಾಮ ಪಂಚಾಯತ ಆಡಳಿತ ಸಂಪೂರ್ಣ ಕುಸಿತಗೊಂಡಿದ್ದು, ನೀರಿಗಾಗಿ ಜನರು ಪರದಾಡುವಂತೆ ಆಗಿದೆ ಕೂಡಲೇ ಕುಡಿಯುವ ನೀರು ಪೂರೈಸದೇ ಹೋದರೆ ಏ.28 ರಂದು ಧಂಗಾಪುರ ಗ್ರಾಪಂ ಕಚೇರಿಗೆ ಬೀಗ ಹಾಕಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮ ಸುಧಾರಣಾ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ಶೇಗಜಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕುಡಿಯುವ ನೀರಿಗಾಗಿ ಸರಕಾರ ಸಾಕಷ್ಟು ಅನುದಾನ ಇದೆ ಎಂದು ಹೇಳುತ್ತಿದೆ, ಆದರೆ ಈ ಪಂಚಾಯಿತಿಯಲ್ಲಿ ಇದ್ದ ಅನುದಾನವನ್ನು ಬಳಕೆ ಮಾಡದೇ ಅಲ್ಲದೇ ಅಲ್ಪಸ್ವಲ್ಪ ಇದ್ದ ನೀರು ಕೂಡಾ ಜನರಿಗೆ ಕೊಡುತ್ತಾ ಇಲ್ಲ, ಗ್ರಾಮದಲ್ಲಿ ಮೂರು ಕೊಳವೆ ಭಾವಿಗಳು ಇದ್ದು, ಅದರಲ್ಲಿ ಯಲ್ಲಮ್ಮ ದೇವಿ ಮಂದಿರ ಹತ್ತಿರ ಕೊಳವೆ ಭಾವಿ ನೀರು ಮಾತ್ರ ಕುಡಿಯಲು ಯೋಗ್ಯವಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಇಡೀ ಗ್ರಾಮವೇ ಈ ಕೊಳವೆ ಭಾವಿಗೆ ಅವಲಂಬಿಸಿದೆ, ಉಳಿದ ಎರಡು ಕೊಳವೆ ಭಾವಿಗಳಿಗೆ ಅಲ್ಪಸ್ವಲ್ಪ ನೀರು ಇದ್ದರೂ ಸಹ ಕುಡಿಯುಲು ಯೋಗ್ಯವಿಲ್ಲದಾಗಿದೆ. ಈ ವಿಷಯ ಪಂಚಾಯತಿಗೆ ತಿಳಿಸಲು ಹೋದರೆ, ಕೇಳುವರು ಇಲ್ಲ ಎಂದು ಅವರು ದೂರಿದ್ದಾರೆ.

ಈಗಾಗಲೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಶುದ್ಧ ನೀರು ಪೂರಸೈಬೇಕು, ತೋಡಿದ ಗುಂಡಿಗಳನ್ನು ರಿಪೇರಿ ಮಾಡಿ ಮುಚ್ಚಬೇಕು, ವಿದ್ಯುತ ಕಂಬಗಳಿಗೆ ದೀಪ ಅಳವಡಿಸಬೇಕು, ಚರಂಡಿ ನಾಲಿಗಳ ಸ್ವಚ್ಛತೆ ಆಧ್ಯತೆ ನೀಡಬೇಕು, ನರೇಗಾ ಕಾಮಗಾರಿ ಪ್ರಾರಂಭಿಸಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು, ವಿವಿಧ ಯೋಜನೆಯ ಕ್ರೀಯಾ ಯೋಜನೆ ಮಾಡಿ ಮಾಡದೇ ಇರುವ ಕಾಮಗಾರಿಗಳು ಕೂಡಲೇ ಪ್ರಾರಂಭಿಸಬೇಕು ಹಾಗೂ ಪಂಚಾಯಿತಿ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಸಹದೇ ಇರುವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಜಿಲ್ಲಾ ಉಸ್ತುವಾರಿ ಅನುದಾನದಲ್ಲಿ ಮಹಿಳೆಯರಿಗಾಗಿ 28 ಲಕ್ಷ ರು.ವೆಚ್ಚದ ಹೈಟೇಕ ಶೌಚಾಲಯ ಕಾಮಗಾರಿ ನಿಲ್ಲಿಸಲಾಗಿದ್ದು ಕೂಡಲೇ ಪ್ರಾರಂಭಿಸಬೇಕು , ವಿಳಂಬ ಮಾಡಿದೇ ಆದರೆ ಡಾ.ಬಿ.ಆರ್.ಅಂಬೇಡ್ಕರ ಸೇವಾ ಸಂಘ, ದಲಿತ ಸೇನೆ ಗ್ರಾಮ ಶಾಖೆ, ಸಂಗೋಳ್ಳಿ ರಾಯನ್ ಯುವ ಸಂಘ ಸೇರಿದಂತೆ ಮಹಿಳಾ ಸಂಘಟನೆಗಳ ಜಂಟಿಯಲ್ಲಿ ಪ್ರತಿಭಟನೆ ಮಾಡುವುದು ಅನಿವಾರ್ಯ ವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ