ವಕೀಲರ ಮೇಲೆ ಕೊಲೆ ಯತ್ನ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Nov 04, 2026, 01:00 AM IST
ಪೊಟೋ೩ಸಿಪಿಟಿ೫: ವಕೀಲರ ಸಂರಕ್ಷಣಾ ಕಾಯಿದೆಯನ್ನು ಮತ್ತಷ್ಟು ಬಿಗಿಗೊಳಿಸಿ ಜಾರಿಗೊಳಿಸಬೇಕೆಂದು  ಒತ್ತಾಯಿಸಿ  ತಹಶೀಲ್ದಾರ್ ನಯನಾ ಎಸ್.ಎಲ್ ಅವರಿಗೆ ಚನ್ನಪಟ್ಟಣ ವಕೀಲರ ಸಂಘದಿಂದ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಚನ್ನಪಟ್ಟಣ: ವೃತ್ತಿನಿರತ ವಕೀಲರ ಮೇಲೆ ಕೊಲೆ ಯತ್ನದ ಘಟನೆ ಖಂಡಿಸಿ ಹಾಗೂ ವಕೀಲರ ಸಂರಕ್ಷಣಾ ಕಾಯಿದೆಯನ್ನು ತಿದ್ದುಪಡಿಯೊಂದಿಗೆ ಮತ್ತಷ್ಟು ಬಲಪಡಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಮಂಗಳವಾರ ನ್ಯಾಯಾಲಯದ ಕಾರ್ಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು

ಚನ್ನಪಟ್ಟಣ: ವೃತ್ತಿನಿರತ ವಕೀಲರ ಮೇಲೆ ಕೊಲೆ ಯತ್ನದ ಘಟನೆ ಖಂಡಿಸಿ ಹಾಗೂ ವಕೀಲರ ಸಂರಕ್ಷಣಾ ಕಾಯಿದೆಯನ್ನು ತಿದ್ದುಪಡಿಯೊಂದಿಗೆ ಮತ್ತಷ್ಟು ಬಲಪಡಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಮಂಗಳವಾರ ನ್ಯಾಯಾಲಯದ ಕಾರ್ಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ವಕೀಲರು ನ್ಯಾಯಾಲಯದ ಆವರಣದಿಂದ ಹೊರಟು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಾಗಿ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟು ತಹಸೀಲ್ದಾರ್ ನಯನಾ ಎಸ್.ಎಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್ ಮಾತನಾಡಿ, ಬೆಂಗಳೂರು ವೈಟ್‌ಫೀಲ್ಡ್‌ನ ವಕೀಲ ಮಂಜುನಾಥ್, ಅನ್ನಪೂರ್ಣೇಶ್ವರಿನಗರದ ವಕೀಲ ಶ್ರೀರಾಮ್ ಬರ್ಬರ ಹತ್ಯೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸಣ್ಣಕ್ಕಿ ಮೇಲೆ ನಡೆದಿರುವ ಕೊಲೆ ಯತ್ನವನ್ನು ತೀವ್ರವಾಗಿ ಖಂಡಿಸಿ ಮತ್ತು ವಕೀಲರ ರಕ್ಷಣಾ ಸಂರಕ್ಷಣಾ ಕಾಯಿದೆಯನ್ನು ಮತ್ತಷ್ಟು ಬಲಪಡಿಸಿ ಜಾರಿಗೊಳಿಸಬೇಕು. ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘದ ಕರೆಯ ಮೇರೆಗೆ ಮಂಗಳವಾರ ಚನ್ನಪಟ್ಟಣ ನ್ಯಾಯಾಲಯದ ಕಲಾಪಗಳಿಂದ ದೂರವಿದ್ದು ಬೀದಿಗಿಳಿದು ಹೋರಾಡುತ್ತೇವೆ. ಸರ್ಕಾರ ಎಚ್ಚೆತ್ತು ವೃತ್ತಿ ನಿರತ ವಕೀಲರು ಆತಂಕವಿಲ್ಲದೇ ಕರ್ತವ್ಯ ನಿರ್ವಹಿಸಲು ಮತ್ತು ತಮ್ಮ ಕಕ್ಷಿದಾರರ ಹಿತಕಾಯಲು ಸಹಕರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಧನಂಜಯ, ಉಪಾಧ್ಯಕ್ಷ ಸತೀಶ್, ಜಂಟಿ ಕಾರ್ಯದರ್ಶಿ ಧರ್ಮೆಂದ್ರಕುಮಾರ್, ಖಜಾಂಚಿ ವಸಂತಮ್ಮ, ಹಿರಿಯ ವಕೀಲರದಾದ ಕೃಷ್ಣೇಗೌಡ, ಬೋಜೇಗೌಡ, ಅಂಬಿಕಾ, ಕೃಷ್ಣಪ್ಪ, ನಾರಾಯಣಸ್ವಾಮಿ, ಸಿದ್ದರಾಜು, ಹಾರಿಸ್ ಖಾನ್, ಮರಿಸ್ವಾಮಿ ಎಚ್., ಕವಿತ, ಸಂಘದ ಸದಸ್ಯರು, ಹಿರಿಯ-ಕಿರಿಯ ವಕೀಲರು ಭಾಗವಹಿಸಿದ್ದರು.

ಪೊಟೋ೩ಸಿಪಿಟಿ೫:

ವಕೀಲರ ಸಂರಕ್ಷಣಾ ಕಾಯಿದೆಯನ್ನು ಮತ್ತಷ್ಟು ಬಿಗಿಗೊಳಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ನಯನಾ ಅವರಿಗೆ ಚನ್ನಪಟ್ಟಣ ವಕೀಲರ ಸಂಘದಿಂದ ಮನವಿ ಪತ್ರ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌