ಮಂಡ್ಯ ಜಿಲ್ಲೆಯ ಆರ್‌ಸೆಟಿ ಸಂಸ್ಥೆಗೆ 2026ರ ಕೌಶಲ್ಯ ಕರ್ನಾಟಕ ಪ್ರಶಸ್ತಿ

KannadaprabhaNewsNetwork |  
Published : Nov 04, 2026, 12:45 AM IST
3ಕೆಎಂಎನ್ ಡಿ26 | Kannada Prabha

ಸಾರಾಂಶ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ರಾಜ್ಯದ ವಿವಿಧ ವಿಭಾಗಗಳಲ್ಲಿನ ಅತ್ಯುತ್ತಮ ಸಾಧನೆ ಮಾಡಿದ ಆರ್‌ಸೆಟಿ ಸಂಸ್ಥೆಗಳನ್ನು ಗುರುತಿಸಿ ನೀಡಲಾಗುವ ಕೌಶಲ್ಯ ಕರ್ನಾಟಕ ಪ್ರಶಸ್ತಿಗೆ ಆರ್‌ಸೆಟಿ ಸಂಸ್ಥೆ ಮೈಸೂರು ವಿಭಾಗದ ಪ್ರತಿನಿಧಿ ಸಂಸ್ಥೆಯಾಗಿ ಆಯ್ಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲೆಯ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗೆ 2026ನೇ ಸಾಲಿನ ಕೌಶಲ್ಯ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಜಿಪಂ ಸಿಇಒ ಕೆ.ಆರ್.ನಂದಿನಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ರಾಜ್ಯದ ವಿವಿಧ ವಿಭಾಗಗಳಲ್ಲಿನ ಅತ್ಯುತ್ತಮ ಸಾಧನೆ ಮಾಡಿದ ಆರ್‌ಸೆಟಿ ಸಂಸ್ಥೆಗಳನ್ನು ಗುರುತಿಸಿ ನೀಡಲಾಗುವ ಕೌಶಲ್ಯ ಕರ್ನಾಟಕ ಪ್ರಶಸ್ತಿಗೆ ಆರ್‌ಸೆಟಿ ಸಂಸ್ಥೆ ಮೈಸೂರು ವಿಭಾಗದ ಪ್ರತಿನಿಧಿ ಸಂಸ್ಥೆಯಾಗಿ ಆಯ್ಕೆಯಾಗಿದೆ.

2025-26ನೇ ಸಾಲಿನಲ್ಲಿ ಸಂಸ್ಥೆಗೆ ನಿಗದಿಪಡಿಸಿದ್ದ 1,000 ಅಭ್ಯರ್ಥಿಗಳ ತರಬೇತಿ ಗುರಿಗೆ ಪ್ರತಿಯಾಗಿ 1,037 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಮೂಲಕ ಶೇ.104ರಷ್ಟು ಸಾಧನೆ ಮಾಡಲಾಗಿದೆ. ತರಬೇತಿ ಪಡೆದವರಲ್ಲಿ 920 ಅಭ್ಯರ್ಥಿಗಳನ್ನು ಸ್ವಯಂ ಉದ್ಯೋಗ ಹಾಗೂ ಉದ್ಯೋಗದಲ್ಲಿ ನೆಲೆಗೊಳಿಸುವ ಮೂಲಕ ಶೇ.89ರಷ್ಟು ಪ್ರಗತಿ ಸಾಧಿಸಲಾಗಿದೆ.

ಇವರಲ್ಲಿ 919 ಅಭ್ಯರ್ಥಿಗಳು ಸ್ವಯಂ ಉದ್ಯೋಗವನ್ನು ಪ್ರಾರಂಭಿಸಿದ್ದು, 653 ಅಭ್ಯರ್ಥಿಗಳಿಗೆ ಬ್ಯಾಂಕ್ ಸಾಲ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ 266 ಅಭ್ಯರ್ಥಿಗಳು ಸ್ವಂತ ಬಂಡವಾಳದ ಮೂಲಕ ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ, ಒಬ್ಬ ಅಭ್ಯರ್ಥಿ ವೇತನ ಸಹಿತ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.

ವಿಶೇಷವಾಗಿ 2025-26ನೇ ಸಾಲಿನಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನು ಸ್ವಯಂ ಉದ್ಯೋಗದಲ್ಲಿ ನೆಲೆಗೊಳಿಸಿರುವುದು ಹಾಗೂ ಅತಿ ಹೆಚ್ಚು ಅಭ್ಯರ್ಥಿಗಳಿಗೆ ಬ್ಯಾಂಕ್ ಸಾಲ ಸಂಪರ್ಕ ಕಲ್ಪಿಸಿರುವುದು ಮಂಡ್ಯ ಆರ್‌ಸೆಟಿ ಸಂಸ್ಥೆಯ ಪ್ರಮುಖ ಸಾಧನೆಯಾಗಿದೆ. ಈ ವರ್ಷದ ತರಬೇತಿ ಕಾರ್ಯಕ್ರಮದಲ್ಲಿ ನೂತನ ಉದ್ದಿಮೆಗಳ ಸೇರ್ಪಡೆಗೆ ಕ್ರಮವಹಿಸಲಾಗಿದೆ.

ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರಿಗೆ ಅಗತ್ಯ ಕೌಶಲ್ಯ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ಆರ್‌ಸೆಟಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಕೇವಲ ತರಬೇತಿ ನೀಡುವುದಕ್ಕೆ ಸೀಮಿತವಾಗದೆ, ತರಬೇತಿ ಪಡೆದ ಅಭ್ಯರ್ಥಿಗಳು ಸ್ವಂತ ಉದ್ಯಮ ಆರಂಭಿಸಲು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮಾರ್ಗದರ್ಶನ ಮತ್ತು ಬ್ಯಾಂಕ್ ಸಾಲ ಸಂಪರ್ಕ ಕಲ್ಪಿಸುತ್ತಿರುವುದು ಶ್ಲಾಘನೀಯವಾಗಿದೆ.

ಈ ಪ್ರಶಸ್ತಿಯು ಮಂಡ್ಯ ಜಿಲ್ಲೆಯ ಗ್ರಾಮೀಣ ಯುವಜನರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಈ ಸಾಧನೆಗೆ ಕಾರಣರಾದ ಬ್ಯಾಂಕ್ ಆಫ್ ಬರೋಡಾ ಆರ್‌ಸೆಟಿ ಸಂಸ್ಥೆ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ತರಬೇತುದಾರರನ್ನು ಜಿಪಂ ಸಿಇಒ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತ್ಸ್ಯ ವಾಹಿನಿ ಕ್ಯಾಂಟೀನ್‌ಗೆ ‘ಕೌಶಲ್ಯ ಕರ್ನಾಟಕ- 2026’ ಪ್ರಶಸ್ತಿ
ಬೆಳದಿಂಗಳ ಹಳ್ಳಿಹಬ್ಬದಲ್ಲಿ ಗಮನ ಸೆಳೆದ ಕಲಾ ಪ್ರತಿಭಾ ಪ್ರದರ್ಶನ