ಶ್ರೀಕ್ಷೇತ್ರ ವಿರುದ್ಧ ಷಡ್ಯಂತ್ರ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Aug 17, 2025, 04:02 AM IST
ಕಾಗವಾಡ  | Kannada Prabha

ಸಾರಾಂಶ

ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಹಾಗೂ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಅಭಿಮಾನಿಗಳ ವೇದಿಕೆಯಿಂದ ಕಾಗವಾಡ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಹಾಗೂ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಅಭಿಮಾನಿಗಳ ವೇದಿಕೆಯಿಂದ ಕಾಗವಾಡ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಾವಿರಾರು ಜನರು ಶೇಡಬಾಳ ಆಶ್ರಮದಿಂದ 5 ಕಿಮೀ ಶೀತಲಗೌಡ ಪಾಟೀಲರ ನೇತೃತ್ವದಲ್ಲಿ ಪಾದಯಾತ್ರೆಯ ಮೂಲಕ ಭಿತ್ತಿಪತ್ರಗಳನ್ನು ಹಿಡಿದು ಧಿಕ್ಕಾರಗಳನ್ನು ಕೂಗುತ್ತ, ಧರ್ಮಸ್ಥಳ ರಕ್ಷಣೆ ನಮ್ಮ ಹೊಣೆ, ನಮ್ಮ ನಡಿಗೆ ಧರ್ಮಸ್ಥಳದ ಕಡೆಗೆ, ಉಳಿಸಿ, ಉಳಿಸಿ ಧರ್ಮಸ್ಥಳ ಉಳಿಸಿ, ಧಿಕ್ಕಾರ, ಧಿಕ್ಕಾರ ದುಷ್ಟಶಕ್ತಿಗಳಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.ಪ್ರತಿಭಟನೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸತ್ಯ, ಧರ್ಮದ ಪರ ನ್ಯಾಯ ನೀಡುವ ಧರ್ಮಸ್ಥಳದ ಬಗೆಗಿನ ಅವಹೇಳನ ನಿಲ್ಲಬೇಕು. ಅಪಪ್ರಚಾರ ಮಾಡುವವರಿಗೆ ಮಂಜುನಾಥ ಸ್ವಾಮಿಯಿಂದ ಶಿಕ್ಷೆಯಾಗಲಿ ಎಂದು ಗುಡುಗಿದರು.ಕಿಡಿಗೇಡಿಗಳ ಸಂಚು ಬಯಲಿಗೆ ತರಲು ಸತ್ಯಶೋಧನಾ ಸಮಿತಿ ರಚಿಸಬೇಕು, ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಕಳೆದ ಕೆಲವು ವರ್ಷಗಳಿಂದ ಗಿರೀಶ್ ಮಟ್ಟಣ್ಣವರ, ಮಹೇಶ್ ಶೆಟ್ಟಿ ತಿಮ್ಮರೊಡಿ, ಎಂ.ಡಿ.ಸಮೀರ, ಸಂತೋಷ ಶೆಟ್ಟಿ ಮತ್ತು ಅವರ ಕೆಲವು ಸಹಚರರು ಸೇರಿಕೊಂಡು ಡಾ.ವಿರೇಂದ್ರ ಹೆಗ್ಗಡೆಯವರ ಹೆಸರಿಗೆ ಕಳಂಕ ತರುವಂತಹ ಕೀಳು ಮಟ್ಡದ ಭಾಷೆಯನ್ನು ಉಪಯೋಗಿಸಿ ಮಾತನಾಡುತ್ತಿದ್ದಾರೆ. ಅವರ ವಿಡಿಯೋ ತುನುಕುಗಳು ಸಾಮಾಜಿಕ ಜಾಲತಾನಗಳಲ್ಲಿ ಹರಿ ಬಿಟ್ಟಿದ್ದಾರೆ. ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಟ್ಟುಕೊಂಡು ಯಾವುದೇ ದಾಖಲೆಗಳಿಲ್ಲದೇ ನಿರಂತರವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವುದರಿಂದ ಧರ್ಮಸ್ಥಳದ ಕೋಟ್ಯಂತರ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು. ಯಾವನೋ ಒಬ್ಬ ಅನಾಮಿಕ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದೆ. ಆದರೆ, ಇದುವರೆಗೂ ಒಂದು ಕುರುಹು ಸಿಕಿಲ್ಲ. ಸರ್ಕಾರ ತನಿಖೆ ಕೈಬಿಟ್ಟು ಅನಾಮಿಕ ಎಂಬ ವ್ಯಕ್ತಿಯನ್ನು ಪೊಲೀಸರು ಕಷ್ಟಡಿಗೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದರೇ ಇದರ ಹಿಂದಿನ ಸತ್ಯಾ ಸತ್ಯತೆ ತಾನಾಗಿಯೇ ಹೊರ ಬರುತ್ತದೆ. ಅದನ್ನು ಬಿಟ್ಟು ಯಾವನೋ ಅನಾಮಿಕ ವ್ಯಕ್ತಿ ದೂರು ಕೊಟ್ಟ ಮಾತ್ರಕ್ಕೆ ದೂರುದಾರನನ್ನು ಬಳಸಿಕೊಂಡು ಶ್ರೀಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ತಮ್ಮ ಯೂಟೂಬ್, ಫೇಸ್‌ಬುಕ್‌ಗಳ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ಬಿತ್ತರಿಸಿ ಭಕ್ತರಿಗೆ ನೋವನ್ನುಂಟು ಮಾಡುತ್ತಿರುವುದು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.ಮಹೇಶ ಶೆಟ್ಟಿ ತಿಮ್ಮರೊಡಿ, ಸಮೀರ್‌ ಹಾಗೂ ಗಿರೀಶ ಮಟ್ಟಣ್ಣವರ ಗ್ಯಾಂಗ್ ಇದೆ. ಗಿರಿಶ ಮಟ್ಟಣ್ಣರ ವಿಧಾನಸೌಧಕ್ಕೆ ಬಾಂಬ್ ಇಟ್ಟವ, ಅಂಥ ಕ್ರಿಮಿನಲ್‌ರು ಕೂಡಿಕೊಂಡು ದುಡ್ಡು ಮಾಡುವ ದಂಧೆ ಮಾಡುತ್ತಿದ್ದಾರೆ. ಹಿಂದೂ ಧರ್ಮಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಇಂಥವರ ವಿರುದ್ಧ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಬೇಕು, ಇಲ್ಲದಿದ್ದರೆ ಜನರೇ ಅವರಿಗೆ ಶಿಕ್ಷೆ ಕೊಡುತ್ತಾರೆ. ಜನ ಒಮ್ಮೆ ತಿರುಗಿ ಬಿದ್ದರೇ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಸರ್ಕಾರ ಎಚ್ಚೆತ್ತುಕೊಂಡು ಇಂಥ ಸಮಾಜಘಾತುಕರಿಗೆ ಸೂಕ್ತಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಕವಲಗುಡ್ಡದ ಅಮರೇಶ್ವರ ಮಹಾರಾಜರು, ಕರ್ನಾಟಕ ಜೈನ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಶೀತಲಗೌಡ ಪಾಟೀಲ, ಸರ್ವ ಧರ್ಮಗಳ ಮುಖಂಡರಾದ ಅಭಯಕುಮಾರ ಅಕಿವಾಟೆ, ಸಂಜಯ ಕುಚನೂರೆ, ಅಣ್ಣಾಸಾಬ ಪಾಟೀಲ, ಶಿವಾನಂದ ಪಾಟೀಲ, ಅರುಣ ಗಾಣಿಗೇರ, ದೀಪಕ ಪಾಟೀಲ, ಚಮನರಾವ್ ಪಾಟೀಲ, ಯಶವಂತ ಪಾಟೀಲ, ಚಿದಾನಂದ ಮಾಳಿ, ರಾಜು ನಾಡಗೌಡ, ಸುರೇಶ ಚೌಗುಲಾ, ಸಂಜಯ ತಳವಲಕರ, ವಿನಾಯಕ ಬಾಗಡಿ, ದಾದಾ ಪಾಟೀಲ, ಅಮೀನ ಶೇಖ, ಉಜ್ವಲಾ ಶೆಟ್ಟಿ, ಸುಷ್ಮಾ ಅಳತಗೆ, ಪ್ರಮೋದ ಹೊಸುರೆ, ವಜ್ರಕುಮಾರ ಮಗದುಮ್, ದುಂಡಪ್ಪ ಅಸ್ಕಿ, ರಾಹುಲ ಶಹಾ, ಅರುಣ ಗಣೇಶವಬಾಡಿ, ಅರುಣ ಫರಾಂಡೆ, ಟಿ.ಕೆ.ಧೋತ್ರೆ, ಭಾಸ್ಕರ ಪಾಟೀಲ, ಉತ್ಕರ್ಷ ಪಾಟೀಲ, ಶಾಂತಿನಾಥ ಕರವ, ಪ್ರಕಾಶ ಮಿರ್ಜಿ, ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಾವರಾರು ಜನರು ತಹಸೀಲ್ದಾರ್‌ ರವೀಂದ್ರ ಹಾದಿಮನಿ ಹಾಗೂ ಪೊಲೀಸ್ ಅಧಿಕಾರಿ ರಾಘವೇಂದ್ರ ಖೊತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಕೆಲ ಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು. ಬ್ರಹ್ಮಾಂಡದಲ್ಲಿ ಸೂರ್ಯ, ಚಂದ್ರರಿಗೆ, ದೇವ-ದಾನವರಿಗೆ ಕಳಂಕ ತಪ್ಪಿಲ್ಲ. ಸೂರ್ಯ-ಚಂದ್ರರಿಗೂ ಕೂಡಾ ಕ್ಷಣ ಕಾಲ ಗ್ರಹಣ ಹಿಡುವುವಂತೆ ಇಂದು ರಾಜ್ಯದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಜೀವನ ನಡೆಸಲು ಕಾರಣವಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರ ತೇಜೋವಧೆಗೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದರೂ ಸಹ ಅವರು ಸೂರ್ಯ-ಚಂದ್ರರಂತೆಯೇ ಕಳಂಕ ರಹಿತರಾಗಿ ಹೊರಹೊಮ್ಮಲಿದ್ದಾರೆ.

-ಅಮರೇಶ್ವರ ಮಹಾರಾಜರು, ಸಿದ್ದಗಿರಿಮಠ ಕವಲಗುಡ್ಡ. ಶ್ರೀಕ್ಷೇತ್ರ ಧರ್ಮಸ್ಥಳ ಶ್ರದ್ದಾ ಕೇಂದ್ರವಾಗಿದ್ದು, ಹೋರಾಟಗಾರರ ಹೆಸರಿನಲ್ಲಿ ಕ್ಷೇತ್ರದ ಪಾವಿತ್ರ್ಯ ಮತ್ತು ಧರ್ಮಾಧಿಕಾರಿಗಳ ಗೌರವಕ್ಕೆ ಧಕ್ಕೆ ತರಲು ಕೆಲ ಎಡ ಪಂತಿಯರ ಷಡ್ಯಂತ್ರವಿದ್ದು, ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೇ ಪ್ರಜಾಪ್ರಭುತ್ವದ ಅಡಿ ನಾವು ತೀವ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ. ಧರ್ಮಸ್ಥಳ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಅಂಥವರ ವಿರುದ್ಧ ಕ್ರಮ ಜರುಗಿಸಬೇಕು.

-ಶೀತಲಗೌಡ ಪಾಟೀಲ,

ಕರ್ನಾಟಕ ಜೈನ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌