ಸಚಿವ ಜಾರಕಿಹೊಳಿ ಮೇಲೆ ಇಡಿ ದಾಳಿ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Sep 27, 2026, 01:30 AM IST
 | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಕುಮ್ಮಕ್ಕಿನಿಂದ ರಾಜ್ಯದ ಹಿಂದುಳಿದ ವರ್ಗ ಜನನಾಯಕ ಸಚಿವ ಸತೀಶ ಜಾರಕಿಹೊಳಿ ಮೇಲೆ ನಡೆದಿರುವ ಇಡಿ ದಾಳಿ ಖಂಡಿಸಿ ಸೋಮವಾರ 28ರಂದು ಕಾಂಗ್ರೆಸ್ ಹಾಗೂ ಅಹಿಂದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕೇಂದ್ರ ಸರ್ಕಾರ ಕುಮ್ಮಕ್ಕಿನಿಂದ ರಾಜ್ಯದ ಹಿಂದುಳಿದ ವರ್ಗ ಜನನಾಯಕ ಸಚಿವ ಸತೀಶ ಜಾರಕಿಹೊಳಿ ಮೇಲೆ ನಡೆದಿರುವ ಇಡಿ ದಾಳಿ ಖಂಡಿಸಿ ಸೋಮವಾರ 28ರಂದು ಕಾಂಗ್ರೆಸ್ ಹಾಗೂ ಅಹಿಂದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾದ ಸತೀಶ ಜಾರಕಿಹೊಳಿಯರವು ದೀನ ದಲಿತರ, ಹಿಂದುಳಿದ ಅಲ್ಪಸಂಖ್ಯಾತರ ದೀಮಂತ ನಾಯಕರಾಗಿದ್ದಾರೆ. ದಿಟ್ಟ ರಾಜಕೀಯದಿಂದ ರಾಜ್ಯದಲ್ಲಿ ವಿಶಿಷ್ಟ ಛಾಪು ಮೂಡಿಸುವ ಸತೀಶ ಜಾರಕಿ ಹೊಳಿಯವರ ರಾಜಕೀಯವಾಗಿ ಮಸಿ ಬಳಿಯಲು ಷಡ್ಯಂತ್ರದಿಂದ ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ಛೂಬಿಟ್ಟು ಇಡಿ ದಾಳಿ ಮಾಡಿಸಲಾಗಿದ್ದು, ಇದೊಂದು ರಾಜಕೀಯ ಪ್ರೇರಿತ ತನಿಖೆಯಾಗಿದೆ ಎಂದು ಆರೋಪಿಸಿದರು.

ಸಚಿವ ಸತೀಶ ಜಾರಕಿಹೊಳಿಯವರ ಮೇಲಿನ ಇಡಿ ದಾಳಿ ಖಂಡಿಸಿ ಲಿಂಗಸುಗೂರು ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಿಂದ ಗಡಿಯಾರ ವೃತ್ತದ ಮೂಲಕ ಬಸ್ ನಿಲ್ದಾಣದ ವೃತ್ತದವರೆಗೆ ಪತ್ರಿಭಟನಾ ರ‍್ಯಾಲಿ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಕಾಂಗ್ರೆಸ್ ಪಕ್ಷದ ಜೊತೆಗೆ ಇತರೇ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಅಹಿಂದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾದ ಜ್ಞಾನೇಶ ಕುಮಾರ ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲದೇ ಹೊದರೆ ಕಾಂಗ್ರೆಸ್‌ನಿಂದ ದೇಶದಲ್ಲಿ 2ನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಟ ರೂಪಿಸಲಾಗುವುದು ಎಂದು ಮುರಾರಿ ಎಚ್ಚರಿಕೆ ನೀಡಿದರು.

ಒಂದಾದ ಎರಡು ಗುಂಪು?: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕಲ್, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಸೇರಿದಂತೆ ಕಾಂಗ್ರೆಸ್‌ನಲ್ಲಿ ಪರಸ್ಪರರು ಹೂಲಗೇರಿ ಹಾಗೂ ಬಯ್ಯಾಪುರ ಬಣದಲ್ಲಿ ಗುರುತಿಸಿಕೊಂಡಿ ದ್ದರು. ಸಚಿವ ಸತೀಶ ಜಾರಕಿಹೊಳಿ ಪರವಾಗಿ ಗ್ಯಾರಂಟಿ ಯೋಜನೆ ತಾಲೂಕ ಅಧ್ಯಕ್ಷ ವೆಂಕಟೇಶ ಗುತ್ತೆದಾರ, ಹಿರಿಯ ನಾಯಕರಾದ ಡಿ.ಜಿ.ಗುರಿಕಾರ, ಗುಂಡಪ್ಪ ನಾಯಕ, ಆದೇಶ ನಾಯಕ, ಮಹ್ಮದ್ ರಫಿ ಎರಡು ಗುಂಪಿನವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದು ವಿಶೇಷವಾಗಿತ್ತು. ಒಂದೇ ಪಕ್ಷದಲ್ಲಿ ಇದ್ದು ಬೇರೆ ಬೇರೆ ಕಡೆ ಗುರುತಿಸಿಕೊಂಡ ಕಾಂಗ್ರೆಸ್ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಎರಡು ಗುಂಪುಗಳ ಒಂದಾದವೇ? ಎಂಬ ಸಂದೇಶ ಸಾರಿತು. ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡರಾದ ಡಿ.ಜಿ.ಗುರಿಕಾರ, ಗುಂಡಪ್ಪ ಸಾಹುಕಾರ ಕಾಚಾಪುರ, ಸಂಜೀವಪ್ಪ ಚಲುವಾದಿ, ಉಮೇಶ ಐಹೊಳೇರ ಸೇರಿದಂತೆ ಇದ್ದರು.

----

ಫೋಟೋ22ಕೆಪಿಎಲ್‌ಎನ್‌ಜಿ01: ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಪಾಮಯ್ಯ ಮುರಾರಿ ಸುದ್ದಿಗೋಷ್ಠಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ಹಾವಳಿ ಗ್ರಾಮಸ್ಥರ ಆಕ್ರೋಶ ಸಾಕು ಪ್ರಾಣಿಗಳ ಮೇಲೆ ದಾಳಿ
ಜನಪದ ಸಾಹಿತ್ಯಕ್ಕೆ ಪ್ಲೀಟ್ ಕೊಡುಗೆ ಅನನ್ಯ: ಕೊಡಂಬಲ್