ಎಂಎಲ್ಸಿ ಸಿ.ಟಿ.ರವಿ ಬಂಧನ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Dec 21, 2024 1:17 AM

ಸಾರಾಂಶ

Protest condemning the arrest of MLC CT Ravi

- ಬಿಜೆಪಿ ಯುವ ಮೋರ್ಚಾದಿಂದ ಕಾಂಗ್ರೆಸ್‌ ಕಚೇರಿ ಮುತ್ತಿಗೆ ಯತ್ನ । ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ಅಶಾಂತಿ: ಆಕ್ರೋಶ

-----

ಕನ್ನಡಪ್ರಭ ವಾರ್ತೆ ಬೀದರ್‌

ಕಾಂಗ್ರೆಸ್‌ ರಜ್ಯದಲ್ಲಿ ಅಶಾಂತಿ ಮೂಡಿಸುವಂತಹ ಕೆಲಸವನ್ನು ಮಾಡುತ್ತ ತೊಘಲಕ್‌ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಶುಕ್ರವಾರ ಬಿಜೆಪಿ ಯುವ ಮೋರ್ಚಾದಿಂದ ಜಿಲ್ಲಾ ಕಾಂಗ್ರೆಸ್‌ ಕಚೇರಿ ಮುತ್ತಿಗೆ ಯತ್ನ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ರೆಡ್ಡಿ ಮಾತನಾಡಿ, ಕಾಂಗ್ರೆಸ್‌ ಪಕ್ಷವು ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರ ಹೇಳಿಕೆಯ ಸಂಪೂರ್ಣ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕದೇ ತಮಗೆ ಬೇಕಾದಷ್ಟು ತುಣುಕನ್ನು ಬಳಸಿ, ಬೇರೆಯೇ ರೀತಿಯಲ್ಲಿ ಅರ್ಥೈಸುವಂತೆ ಸಾರ್ವಜನಿಕಗೊಳಿಸಿರುವ ದುರ್ದೈವದ ಸಂಗತಿಯಾಗಿದೆ ಎಂದರು,

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಷ್ಟ್ರ ಕಂಡ ಪ್ರಬುದ್ಧ ರಾಜಕಾರಣಿಗಳಲ್ಲೊಬ್ಬರು, ಅವರು ಸಂವಿಧಾನದ ಹಾಗೂ ಡಾ.ಅಂಬೇಡ್ಕರ್‌ ಅವರ ಬಗ್ಗೆ ಗೌರವ ಇಟ್ಟುಕೊಂಡಂತವರು. ಕಾಂಗ್ರೆಸ್‌ ಆಡಳಿತದ ಸಂದರ್ಭದಲ್ಲಿ ಡಾ. ಅಂಬೇಡ್ಕರ್‌ ಅವರನ್ನು ನಡೆಸಿಕೊಂಡಿರುವ ರೀತಿಯನ್ನು ಸದನದಲ್ಲಿ ಹೇಳಿದ್ದಾರೆಯೇ ಹೊರತು ಸಂವಿಧಾನ ವಿರೋಧಿ ಮಾತನ್ನು ಹೇಳಿಲ್ಲ. ಇದನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವಿಸ್ತರಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದರು.

ಇದೇ ರೀತಿ ಬೆಳಗಾವಿಯಲ್ಲಿ ಎಂಎಲ್ ಸಿ.ಟಿ.ರವಿ ಅವರನ್ನು ಅಮಾನುಷವಾಗಿ ನಡೆಸಿಕೊಂಡ ರೀತಿ ನೋಡಿದರೆ ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ತುಘಲಕ್‌ ಆಡಳಿತ ನಡೆಸುತ್ತಿದೆ ಎಂಬುವುದನ್ನು ತೋರಿಸುತ್ತಿದೆ. ವಿಧಾನ ಸೌದದಲ್ಲಿ ಮಾರ್ಷಲ್‌ ಅವರ ಸಮ್ಮುಖದಲ್ಲಿಯೇ ಕೆಲವರು ಗೂಂಡಾ ವರ್ತನೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ದುರ್ಬಲಗೊಂಡಿದ್ದು, ಕೂಡಲೇ ಸಿ.ಟಿ ರವಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು‌.

ಈ ಸಂದರ್ಭದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ ಕಲ್ಲೂರ, ವೀರೇಶ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ ಸಿಂದೋಲ್‌, ಸತೀಶ ಶಟ್ಗೊಂಡ, ಸನ್ನಿಕುಮಾರ್‌, ಶಿವಕುಮಾರ್‌ ಸುಲ್ತಾನ ಪೂರ, ಸುನೀಲ್‌ ಪತ್ರಿ, ಪುಷ್ಪಕ ಜಾಧವ್‌, ಸುರೇಂದ್ರ ಕುಲಕರ್ಣಿ, ವೀರೇಂದ್ರ ಪಾಟೀಲ್‌, ಬಸವರಾಜ್ ಬಂಬಳಗಿ, ಮಹೇಶ ಬಾವಗೆ, ವಿಶಾಲ ಅತಿವಾಳ, ಅರವಿಂದ ಬಾಳಾ, ಆಕಾಶ ರಾಜಗೀರ ಮತ್ತಿತರರು ಇದ್ದರು.

----

ಫೈಲ್‌ 20ಬಿಡಿ

Share this article