ಇಲ್ಲಿನ ದೂದಪೀರಾಂ ದರ್ಗಾಕ್ಕೆ ಬೇರೆ ಊರಿನಿಂದ ಬಂದಿದ್ದ ಅನ್ಯ ಕೋಮಿನವರಿಂದ ಶುಕ್ರವಾರ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿದ್ದು, ಇದನ್ನು ಶ್ರೀರಾಮ ಸೇನೆ ತಾಲೂಕು ಘಟಕ ಖಂಡಿಸಿದೆ.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಇಲ್ಲಿನ ದೂದಪೀರಾಂ ದರ್ಗಾಕ್ಕೆ ಬೇರೆ ಊರಿನಿಂದ ಬಂದಿದ್ದ ಅನ್ಯ ಕೋಮಿನವರಿಂದ ಶುಕ್ರವಾರ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿದ್ದು, ಇದನ್ನು ಶ್ರೀರಾಮ ಸೇನೆ ತಾಲೂಕು ಘಟಕ ಖಂಡಿಸಿದೆ.ನಾಗರಾಜ ಮಲ್ಲೇಶಪ್ಪ ಕಾಳೆ ಎಂಬ ಯುವಕ ಬೈಕ್‌ನಲ್ಲಿ ಹಳ್ಳದಕೇರಿ ಕಡೆ ಹೋಗುತ್ತಿರುವಾಗ ಓರ್ವ ಬಾಲಕಿ ಅಡ್ಡ ಬಂದಿದ್ದಾಳೆ. ಇದನ್ನೇ ನೆಪ ಮಾಡಿಕೊಂಡು ಮಹಿಳೆಯರೂ ಸೇರಿ ಏಳೆಂಟು ಜನರು ಯುವಕನಿಗೆ ಸಿಕ್ಕ ಸಿಕ್ಕಲ್ಲಿ ಥಳಿಸಿದ್ದಾರೆ. ಅವರಲ್ಲಿ ಓರ್ವ ವ್ಯಕ್ತಿ ಸ್ಟೀಲ್ ಬಕಿಟ್‌ನಿಂದ ಹೊಡೆದ ಕಾರಣ ಯುವಕನ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಶ್ರೀರಾಮ ಸೇನೆ ಕಾರ್ಯತರ್ಕರು ಚಿಕಿತ್ಸೆ ಕೊಡಿಸಿದರು.ನಾನು ಬೈಕ್‌ನಲ್ಲಿ ಹೋಗುವಾಗ ಬಾಲಕಿಯೇ ಅಡ್ಡ ಓಡಿ ಬಂದಿದ್ದಾಳೆ. ನನ್ನದೇನೂ ತಪ್ಪು ಇಲ್ಲ ಎಂದರೂ ಏಳೆಂಟು ಜನ ಸೇರಿ ಹೊಡೆದಿದ್ದಾರೆ ಎಂದು ಹಲ್ಲೆಗೆ ಒಳಗಾದ ಯುವಕ ನಾಗರಾಜ ತಿಳಿಸಿದರು.ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರತಿಭಟನೆ ಆರಂಭ:
ಹಿಂದೂ ಯುವಕನ ಮೇಲೆ ಮನಸೊ ಇಚ್ಚೆ ಹಲ್ಲೆ ಮಾಡಿದ ಘಟನೆ ಖಂಡಿಸಿ ಶುಕ್ರವಾರ ರಾತ್ರಿಯಿಂದಲೇ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆ ಪಕ್ಕದ ಇಟ್ಟಿಗೇರಿ ದಂಡೆಯ ಮೇಲೆ ಮೌನ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಹಲ್ಲೆಕೋರರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಹಿಂದೂ ಮುಖಂಡರಾದ ಮಹೇಶ ಕಲಘಟಗಿ ಮಂಜುನಾಥ, ಮಾಗಡಿ ನಾಗರಾಜ ಚಿಂಚಲಿ, ಈರಣ್ಣ ಪೂಜಾರ, ಹರೀಶ ಗೋಸಾವಿ ಪ್ರಕಾಶ ಕಮಡೊಳ್ಳಿ, ಅಶೋಕ ಸೂರಣಗಿ, ಹೇಮಣ್ಣ ಬುರಡಿ, ಭರಮಣ್ಣ ಗೌಳಿ, ಈರಣ್ಣ ಹುಲಕೋಟಿ ಪ್ರಕಾಶ ಜಾದವ, ನೀಲಕಂಠ ಕಣವಿ, ಮೈಲಾರಪ್ಪ ಕಾಳೆ ಸೇರಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.