ಹಿರೇಕೆರೂರು: ತಾಲೂಕಿನಲ್ಲಿ ಅಕ್ರಮವಾಗಿ ಜರುಗುತ್ತಿರುವ ಗೋ ಸಾಗಾಟ ಮತ್ತು ಗೋ ಹತ್ಯೆ ತಡೆಗಟ್ಟುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಂ.ರೇಣುಕಾ ಮತ್ತು ಸಿಪಿಐ ಮಂಜುನಾಥ ಪಂಡಿತ ಅವರಿಗೆ ಮನವಿ ಸಲ್ಲಿಸಲಾಯಿತು.ಅಖಂಡ ಧಾರವಾಡ ವಿಭಾಗದ ಬಜರಂಗದಳ ಸಂಯೋಜಕ ಅನಿಲ್ ಹಲವಾಗಿಲ ಮಾತನಾಡಿ, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಪ್ರತಿವರ್ಷ ಬಕ್ರೀದ್ ಹಬ್ಬದ ಸಮಯದಲ್ಲಿ ಮತ್ತು ನಿತ್ಯ ರಾಜಾರೋಷವಾಗಿ ಗೋ ಹತ್ಯೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಕೂಡಲೇ ಪೊಲೀಸ್ ಮತ್ತು ತಾಲೂಕು ಆಡಳಿತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲಾ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ನಾಗರಾಜ ಸರಸಾಪುರ, ಜಿಲ್ಲಾ ಕಾರ್ಯದರ್ಶಿ ಕಿಟ್ಟಿ ಪಾಟೀಲ, ವಿನಾಯಕ ಕರ್ನೂಲ್, ಸಂತೋಷ ಬೆಳಗುತ್ತಿ, ಉಮೇಶ ಬಣಕಾರ, ಬಸವರಾಜ ಓಲೇಕಾರ, ಮೈಲಾರಿ ಮ್ಯಾದಾರ, ಪ್ರಮೋದ ಹಾದ್ರಿಹಳ್ಳಿ, ಅಭಿ ಕಾಯಕದ, ವಿನಾಯಕ ನೇಸ್ವಿ, ಅಖಿಲ ಪಾಟೀಲ, ಮುಕೇಶ ಪಾಟೀಲ, ನವೀನ್ ಕುರಬರ, ನಿಂಗಾಚಾರಿ ಮಾಯಾಚಾರಿ,ಬಸವರಾಜ ಓಲೆಕಾರ, ಹಾಗೂ ಕಾರ್ಯಕರ್ತರು ಇದ್ದರು.